ಭಾನುವಾರ, ಮೇ 16, 2021
29 °C

`ದೇಸಿ ಸಂಗೀತ, ಸಂಸ್ಕೃತಿ ಉಳಿಯಲಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ದೇಸಿ ಸಂಗೀತ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ಸಂಗೀತ ಕಲಾವಿದ ಜಾವಗಲ್ ಪ್ರಸನ್ನ ತಿಳಿಸಿದರು.ಬೆಂಗಳೂರಿನ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರ ಸುರಭಿ ಟ್ರಸ್ಟ್ ಹಾಗೂ ತಿಪಟೂರಿನ ಶಂಕರ್ ಟ್ರೈನಿಂಗ್ ಸೆಂಟರ್‌ನಿಂದ ನಗರದಲ್ಲಿ ಈಚೆಗೆ ಮೂರು ದಿನಗಳ ಕಾಲ ನಡೆದ ಆನಂದಕಂದ ವಿರಚಿತ ಭಾವಗೀತೆಗಳ ತರಬೇತಿ ಶಿಬಿರ `ಬನ್ನಿ ನಮ್ಮ ಹಾಡಿಗೆ' ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ನಮ್ಮ ಸಂಗೀತ ಪರಂಪರೆ ವೈವಿಧ್ಯ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಸಂಗೀತದ ಬೆಳವಣಿಗೆ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಎಂದು ತಿಳಿಸಿದರು.ಬೆಂಗಳೂರು ಸ್ವರ ಸುರಭಿ ಟ್ರಸ್ಟ್‌ನ  ಸುವರ್ಣಮ್ಮ ಮಾತನಾಡಿ, ಮಕ್ಕಳ ಸಂಗೀತಾಭ್ಯಾಸ ಓದಿನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಏಕಾಗ್ರತೆ, ತಾಧ್ಯಾತ್ಮ, ವಿಶಾಲ ಮನೋಭಾವ ಬೆಳೆಯುತ್ತದೆ. ಸಾಹಿತ್ಯದಲ್ಲಿ ಒಲವು ಮೂಡುತ್ತದೆ ಎಂದು ತಿಳಿಸಿದರು. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ನ ಸತೀಶ್ ಕುಲಕರ್ಣಿ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.