ಶನಿವಾರ, ಮೇ 15, 2021
24 °C

ದೈವಾರಾಧನೆ ತುಳುನಾಡಿನ ವೈಶಿಷ್ಟ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್: `ತುಳುನಾಡಿನಲ್ಲಿ ದೇವತಾರಾಧನೆಯೊಂದಿಗೆ ದೈವಾರಾಧನೆ ಕೂಡಾ ಪ್ರಾಮುಖ್ಯ ಪಡೆದಿದೆ. ದೈವಗಳ ಮೇಲಿನ ನಂಬಿಕೆ, ಕಾರಣಿಕ ಶಕ್ತಿಗಳು ತುಳು ಸಂಸ್ಕೃತಿಯ ವೈಶಿಷ್ಟ್ಯತೆಗೆ ಹಿಡಿದ ಕೈಗನ್ನಡಿ~ ಎಂದು ರಾಜ್ಯ ವಿರೋಧ ಪಕ್ಷದ ಮುಖ್ಯ ಸಚೇತಕ ಕೆ. ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು.ಖಂಡಿಗೆ  ಧರ್ಮರಸು ಉಳ್ಳಾಯ ಕ್ಷೇತ್ರದಲ್ಲಿ 29ರಂದು ನಡೆಯುವ ಧರ್ಮನೇಮೋತ್ಸವದ ಅಂಗವಾಗಿ ಗುರುವಾರ ನಡೆದ ಉಗ್ರಾಣ ಮುಹೂರ್ತದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೈವ ಕ್ಷೇತ್ರಗಳ ಅಭಿವೃದ್ಧಿ, ಜೀರ್ಣೋದ್ಧಾರ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಿರುವುದು ಕರಾವಳಿಯಲ್ಲಿನ ಧಾರ್ಮಿಕ ನಂಬಿಕೆಯನ್ನು ಬಲಗೊಳಿಸುವಂತಾಗಿದೆ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಸುರತ್ಕಲ್ ಸದಾಶಿವ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎಸ್.ದಾಸಮಯ್ಯ, `ದೈವಾರಾಧನೆ ತುಳು ಧಾರ್ಮಿಕ ಪರಂಪರೆಯ ಶ್ರೀಮಂತಿಕೆ ಪ್ರತಿನಿಧಿಸುತ್ತದೆ~ ಎಂದು ಬಣ್ಣಿಸಿದರು.ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಕೆ. ವಿಜಯಕುಮಾರ್ ಶೆಟ್ಟಿ, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಜಿ.ಪಂ. ಸದಸ್ಯ ಈಶ್ವರ ಕಟೀಲು, ತಾ.ಪಂ. ಸದಸ್ಯೆ ವಜ್ರಾಕ್ಷಿ ಪಿ ಶೆಟ್ಟಿ, ಅದ್ಯಪಾಡಿ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಶೆಡ್ಡೆಮಂಜುನಾಥ ಭಂಡಾರಿ, ಚೇಳ್ಯಾರು ಗ್ರಾ.ಪಂ. ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಎಚ್.ಬಾಲಕೃಷ್ಣ ಭಟ್, ಅರ್ಚಕ ಶ್ರೀಪತಿ ಭಟ್ ಭಟ್ರಚಾವಡಿ, ಕ್ಷೇತ್ರದ ಗಡಿಕಾರ ಆದಿತ್ಯ ಮುಕ್ಕಾಲ್ದಿ, ಸಮಿತಿಯ ಗೌರವಾಧ್ಯಕ್ಷ ಉದಯಕುಮಾರ್‌ಶೆಟ್ಟಿ, ಅಧ್ಯಕ್ಷ ದಯಾನಂದ ಬಿ.ಶೆಟ್ಟಿ ಖಂಡಿಗೆಬೀಡು, ಕಾರ್ಯದರ್ಶಿ ಚರಣ್‌ಕುಮಾರ್, ಖಜಾಂಚಿ ಸುಧಾಕರ ಪಿ.ಶೆಟ್ಟಿ, ಸಂಚಾಲಕ ರಮೇಶ್ ಶೆಟ್ಟಿ, ಶಿವರಾಮ ಕುಕ್ಕುದಡಿ, ಸಂಚಾಲಕ ದಿವಾಕರ ಸಾಮಾನಿ ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.