ಗುರುಮಠಕಲ್: ಭಾರತ ಅತಿ ಹೆಚ್ಚು ಧರ್ಮಗಳ ಜನರನ್ನು ಹೊಂದಿದ ದೇಶವಾಗಿದ್ದು ನಮ್ಮ ನಮ್ಮ ಧರ್ಮದ ಆಚರಣೆಗಳು ನಮಗೆ ಮಾತ್ರ ಸೀಮಿತವಾಗದೇ ಸಹ ಧರ್ಮದ ಸಹೋದರರೊಂದಿಗೆ ಹಂಚಿಕೊಂಡಾಗ ನಿಜವಾದ ಆನಂದ ಸಿಗುತ್ತದೆ. ಧರ್ಮ ಮತ್ತು ಜಾತಿಯನ್ನು ಬದಿಗೊತ್ತಿ ನಾವೆಲ್ಲರು ಒಂದೇ ಎಂದು ಬಾಳಿದಾಗ ನೆಮ್ಮದಿಯ ಜೀವನ ಸಾಧ್ಯ ಎಂದು ಗುಲ್ಬರ್ಗದ ಜಿಯಾಉಲ್ಲಾ ಅಸ್ವಖ್ ಅಭಿಪ್ರಾಯ ಪಟ್ಟರು.

ಈಚೆಗೆ ಪಟ್ಟಣದ ಸರ್ಕಾರಿ ಪದವಿ ಮಹಾ ವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಈದ್ ಮಿಲಾಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜಾತಿ ಹಾಗೂ ಧರ್ಮದ ವಿಷಯಕ್ಕೆ ಬಂದಾಗ ನಾವೆಲ್ಲರು ಬೇರೆಯಾದರು ಇಂತಹ ಸಮಾರಂಭಗಳಿಂದ ಒಂದುಗೂಡಿ ಪರಸ್ಪರ ಅರಿತು ನಡೆಯಲು ಸಹಾಯವಾಗುತ್ತದೆ, ಸೌಹಾರ್ದದ ಸಹಬಾಳ್ವೆ ಸಾಧ್ಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಬಣ್ಣ ಬೋರಬಂಡ ಹೇಳಿದರು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯ ಗೋವಿಂದ್ಯ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಬೀಬ ಅಲ್ವಿ, ಪಟ್ಟಣ ಪಂಚಾಯತಿ ಸದಸ್ಯ ಸೈಯದ ಅಕ್ಬರ್, ಸಿಪಿಐ ಪಿ.ಕೆ.ಚೌದ್ರಿ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಭೀಮರೆಡ್ಡಿ ಉಟ್ಕೂರ್, ನಾರಾಯಣರೆಡ್ಡಿ ಪೊಲೀಸ್ ಪಾಟೀಲ್, ಎಪಿಎಂಸಿ ನವಾಜರೆಡ್ಡಿ ಚಪೆಟ್ಲಾ, ಜೆಡಿಎಸ್ ಅಧ್ಯಕ್ಷ ಜಿ.ತಮ್ಮಣ್ಣ, ಸುಧಿರ್, ಕೃಷ್ಣಾ ಚಪೆಟ್ಲಾ ವೇದಿಕೆಯಲ್ಲಿದ್ದರು. ಪಟ್ಟಣ ಪಂಚಾಯಿತಿ ಸದಸ್ಯ ಮಸಿಯುದ್ದಿನ್ ಆಸೀಮ್, ಎಂ.ಟಿ.ಪಲ್ಲಿಯ ಅಬ್ದುಲ್ ಮಜೀದ್, ಇಮಾಮುದ್ದಿನ್ ಕೋಡ್ಲಾ ಆಯೋಜಿಸಿ ಉಪಸ್ಥಿತರಿದ್ದರು. ದಸಾವಲ್ ಸಾಬ್ ಸ್ವಾಗತಿಸಿದರು, ಶಿಕ್ಷಕ ಮಸಿಯುದ್ದಿನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.