ಮಂಗಳವಾರ, ಮೇ 18, 2021
22 °C
ಮದ್ದರಕಿ ಗಚ್ಚಿನಮಠದ ನೂತನ ಮಠಾಧ್ಯಕ್ಷ ಶಿವಯೋಗಿ ಸ್ವಾಮೀಜಿ ಗುರುವಂದನೆ

`ಧರ್ಮ, ದೇವರಿಂದ ಬದುಕು ಹಸನು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: `ಪಂಚಾಚಾರ್ಯರು ಹಿಂದಿನ ಕಾಲದಲ್ಲಿಯೇ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಂದೇಶ ನೀಡಿದ್ದಾರೆ. ಇದು ಧರ್ಮಾತೀತವಾಗಿದ್ದು, ಈ ದಾರಿಯಲ್ಲಿ ನಡೆದಾಗ ಮಾತ್ರ ದೇವರು, ಜನರು ರಕ್ಷಣೆ ನೀಡುತ್ತಾರೆ, ಧರ್ಮ ಮತ್ತು ದೇವರನ್ನು ನಂಬಿ ನಡೆದಾಗ ಬದುಕು ಹಸನವಾಗುತ್ತದೆ' ಎಂದು ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.ನಗರದ ಹೊರ ವಲಯದಲ್ಲಿ ಗಂಗಾಪುರ ರಸ್ತೆಯ ಬಳಿ ಇರುವ ಹಿರೇಮಠದ ಶನೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಹಿರೇಮಠದ ಸಮಿತಿಯವರು ಏರ್ಪಡಿಸಿದ್ದ ರಾಣೆಬೆನ್ನೂರು ಹಿರೇಮಠ ಮತ್ತು ಸರಪುರ ತಾಲ್ಲೂಕು ಮದ್ದರಕಿ ಗಚ್ಚಿನಮಠದ ನೂತನ ಮಠಾಧ್ಯಕ್ಷ ಶಿವಯೋಗಿ ಸ್ವಾಮೀಜಿ ಗುರುವಂದನಾ ಸಮಾರಂಭ, ಶನೇಶ್ವರ ಸ್ವಾಮಿಗೆ ತೈಲಾಭಿಷೇಕ, ತಿಲ ಹೋಮ, ನೂತನ ಶಾಸಕರು ಮತ್ತು ನಗರಸಭೆ ಸದಸ್ಯರಿಗೆ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.ನೆಗಳೂರು ಹಿರೇಮಠದ ಗುರಶಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರೇಕೆರೂರು ತಾಲ್ಲೂಕು ಶಾಸಕ ಯು.ಬಿ.ಬಣಕಾರ, ಶಾಸಕ ರುದ್ರಪ್ಪ ಲಮಾಣಿ ಮತ್ತು ಸುರಪುರ ತಾಲ್ಲೂಕು ಮದ್ದರಕಿ ಗಚ್ಚಿನಮಠ ಮತ್ತು ಹಿರೇಮಠದ ಮಠಾಧ್ಯಕ್ಷ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರು ನಗರಕ್ಕೆ ಪುರ ಸಪ್ರವೇಶ ಮಾಡಿದ್ದಕ್ಕೆ ಸಮಿತಿಯವರು ಸ್ವಾಮೀಜಿ ಅವರನ್ನು ಸನ್ಮಾನಿಸಿದರು.ನಗರಸಭಾ ಸದಸ್ಯರಾದ ಶಕುಂತಲಾ ಬಿದರಿ, ಶೇಖಪ್ಪ ಹೊಸಗೌಡ್ರ, ರಾಘವೇಂದ್ರ ಚಿನ್ನಿಕಟ್ಟಿ, ಸೈದ್‌ಬಾಷಾ ಕಾಟೇನಹಳ್ಳಿ, ನೀಲಮ್ಮ ಬುರಡಿಕಟ್ಟಿ, ಶಿವಪ್ಪಮಣೆಗಾರ, ವೀರಪ್ಪ ಮಾಕನೂರು, ನುರುಲ್ಲಾ ಖಾಜಿ, ಫಾತಿಮಾಬಿ ಹಾಂಶಫೀರ ಶೇಖ್, ಶಿವರಾಜ ಬ್ಯಾಡಗಿ, ಶಾರದಾ ಜಂಬಿಗಿ, ಮೊಬಿನಾ ಹರಪನಹಳ್ಳಿ,ಆಶಾ ಗುಂಡೇರ, ವಸಂತಮ್ಮ ಕೊಪ್ಪಳ, ಜಯಶ್ರೀ ಶಿವಮೊಗ್ಗಿ, ಹನುಮಂತಪ್ಪ ದೇವರಗುಡ್ಡ, ಲಿಂಗನಗೌಡ ಪಾಟೀಲ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.ನೆಗಳೂರಿನ ಗದುಗೆಯ್ಯ ಶಾಸ್ತ್ರಿ, ಸುಜಿತ ಜಂಬಿಗಿ, ಚಂದ್ರಣ್ಣ ರಮಾಳದ, ಶಿವಾನಂದ ಸಾಲಗೇರಿ, ವೀರಯ್ಯ ಫಕ್ಕೀರಯ್ಯ ಹಿರೇಮಠ, ಸಿದ್ದಣ್ಣ ಹಾದಿಮನಿ, ಮಲ್ಲೇಶ ರೇಖಾನವರ, ನಿಂಗರಾಜ ಹೆಳವರ, ಮಹಾದೇವಪ್ಪ ಪಾಸ್ತೆ, ಚಂದ್ರಕಾಂತ ಯಲಿ, ಗೋವಿಂದಪ್ಪ ಕುಪ್ಪೇಲೂರು, ವೆಂಕಪ್ಪ ಕೆಂಚರಡ್ಡಿ, ಬಸವರಾಜ ರೊಡ್ಡನವರ ಉಪಸ್ಥಿತರಿದ್ದರು. ಪ್ರಭುಲಿಂಗಸ್ವಾಮಿ ಕರ್ಜಿಗಿಮಠ ಸ್ವಾಗತಿಸಿದರು. ಸಿದ್ದಣ್ಣ ಹಾದಿಮನಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.