ಹುಬ್ಬಳ್ಳಿ: ರಾಜ್ಯದ ವಾಣಿಜ್ಯ ರಾಜಧಾನಿ, ನೈರುತ್ಯ ರೈಲ್ವೆ ವಲಯ, ವಿಮಾನ ನಿಲ್ದಾಣ, ಕರಾವಳಿಯ ಬಂದರುಗಳಿಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಪ್ರಮುಖ ಸಂಪರ್ಕ ಕೊಂಡಿ ಎಂಬ ಹೆಗ್ಗಳಿಗೆ ಪಾತ್ರವಾದ ಹುಬ್ಬಳ್ಳಿಯನ್ನು ಕೇಂದ್ರ ಸ್ಥಾನವಾಗಿ ಹೊಂದಿರುವ ಧಾರವಾಡ ಜಿಲ್ಲೆ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಹೊಂದಿದೆ.

ಆಟೊಮೊಬೈಲ್, ಕೃಷಿ ಆಧಾರಿತ ಉದ್ಯಮಗಳಿಗೆ ಇಲ್ಲಿ ಹೆಚ್ಚಿನ ಅವಕಾಶವಿದೆ. ಮೂಲಸೌಕರ್ಯ, ಮಾನವ ಸಂಪನ್ಮೂಲ ಲಭ್ಯವಿದ್ದರೂ 2010ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಯಾವುದೇ ಉದ್ದಿಮೆಗಳು ಜಿಲ್ಲೆಗೆ ಬರಲು ಆಸಕ್ತಿ ತೋರಿರಲಿಲ್ಲ. ರಾಜಕೀಯ ಇಚ್ಛಾಸಕ್ತಿಯ ಕೊರತೆಯಿಂದಾಗಿ ಕಳೆದ ಬಾರಿ ಬಂಡವಾಳ ಆಕರ್ಷಣೆಯಲ್ಲಿ ನಿರ್ಲಕ್ಷ್ಯಕ್ಕೀಡಾಗಿದ್ದ ಜಿಲ್ಲೆಯ ಕೈಗಾರಿಕಾ ವಲಯದಲ್ಲಿ ಈ ಬಾರಿಯ ಸಮ್ಮೇಳನ ಹಲವು ನಿರೀಕ್ಷೆ ಮೂಡಿಸಿದೆ.

ಪೂರಕ ಉದ್ದಿಮೆಗಳ ನಿರೀಕ್ಷೆ
ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಉದ್ದಿಮೆ ಸಮೂಹ ಇತ್ತೀಚೆಗೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಲು ಮುಂದಾಗಿದೆ. ಅದಕ್ಕೆ ಅಗತ್ಯವಿರುವ ಪೂರಕ ಉದ್ದಿಮೆದಾರರು (ವೆಂಡರ್ಸ್) ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮ್ಮೇಳನದ ಮೂಲಕ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಹೊಂದಲಾಗಿದೆ.

ದಶಕದ ಹಿಂದೆ ರಾಯಪುರ ಹಾಗೂ ಗೋಕುಲ ರಸ್ತೆಯ ಮೈಸೂರು ಕಿರ್ಲೋಸ್ಕರ್ನ ಘಟಕಗಳು ಮುಚ್ಚಿದ ಪರಿಣಾಮ ಕಿರ್ಲೋಸ್ಕರ್ ಕಂಪೆನಿಗೆ ಪೂರಕ ಸಾಮಗ್ರಿ ಪೂರೈಸುತ್ತಿದ್ದ ಸಣ್ಣ ಕೈಗಾರಿಕಾ ವಲಯಕ್ಕೆ ಮಂಕು ಹಿಡಿದಂತಾಗಿತ್ತು.

ಪ್ರಸ್ತುತ ಬೇಲೂರಿನ ಟಾಟಾ ಸಮೂಹದ ಅಂಗ ಸಂಸ್ಥೆಗಳಾದ ಟಾಟಾ ಮೋಟಾರ್ಸ್ ಹಾಗೂ ಮಾರ್ಕೊಪೊಲೊ ತಮ್ಮ ಘಟಕಗಳನ್ನು ವಿಸ್ತರಿಸಲು ಮುಂದಾಗಿವೆ. ಹಾಲಿ ದಿನಕ್ಕೆ 90 ಬಸ್ಗಳನ್ನು ಉತ್ಪಾದಿಸುತ್ತಿರುವ ಮಾರ್ಕೊಪೊಲೊ ವರ್ಷಾಂತ್ಯದ ವೇಳೆಗೆ ಈ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.

ಅದೇ ರೀತಿ ಟಾಟಾ ಏಸ್ ಹಾಗೂ ಐಶರ್ ಸಣ್ಣ ವಾಹನಗಳನ್ನು ದಿನಕ್ಕೆ 100ರ ಸಂಖ್ಯೆಯಲ್ಲಿ ಉತ್ಪಾದಿಸುತ್ತಿರುವ ಟಾಟಾ ಮೋಟಾರ್ಸ್ ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆಯನ್ನು ದಿನಕ್ಕೆ 1,500ಕ್ಕೆ ಹೆಚ್ಚಿಸಲು ನಿರ್ಧರಿಸಿದೆ ಎನ್ನುತ್ತಾರೆ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಎನ್ಕಾಸಿಯ) ಅಧ್ಯಕ್ಷ ಲಕ್ಷ್ಮಿಕಾಂತ ಎ.ಪಾಟೀಲ.

ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 300 ಎಕರೆಯಲ್ಲಿ ಪೂರಕ ಉದ್ದಿಮೆಗಳ ಘಟಕ ಆರಂಭಕ್ಕೆ ಕಂಪೆನಿ ಮುಂದಾಗಿದೆ ಇದರಿಂದ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಪಾಲಿಗೆ ಅವಕಾಶಗಳ ಬಾಗಿಲು ತೆರೆದಿದೆ. ಒಮ್ಮೆ ವೆಂಡರ್ಸ್ ಪಾರ್ಕ್ ನೆಲೆಗೊಂಡರೆ ಇನ್ನಷ್ಟು ದೊಡ್ಡ ಆಟೊಮೊಬೈಲ್ ಕಂಪೆನಿಗಳು ಜಿಲ್ಲೆಯತ್ತ ಮುಖ ಮಾಡುತ್ತವೆ ಎನ್ನುತ್ತಾರೆ.

ಈಗಾಗಲೇ ಗಾಮನಗಟ್ಟಿ, ರಾಯಪುರ ಕೈಗಾರಿಕಾ ಪ್ರದೇಶದಲ್ಲಿ ತಲಾ 100 ಎಕರೆ ಜಮೀನು ಲಭ್ಯವಿದೆ. ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಯ ಒಂದು ಸಾವಿರ ಎಕರೆ ಜಾಗ ಮೀಸಲಿದೆ. ಬೇಲೂರು ಕೈಗಾರಿಕಾ ಪ್ರದೇಶಕ್ಕೆ ನೀರಿನ ಸೌಕರ್ಯಕ್ಕಾಗಿ ಪ್ರತ್ಯೇಕ ಪೈಪ್ಲೈನ್ ಹಾಕಲು ಎನ್ಕಾಸಿಯಾ ವತಿಯಿಂದ ಈಗಾಗಲೇ ಸರ್ವೆ ಕಾರ್ಯ ನಡೆಸಲಾಗಿದೆ. ಜಿಲ್ಲೆಯಲ್ಲಿ 5 ಎಂಜಿನಿಯರಿಂಗ್ ಹಾಗೂ 8 ಪಾಲಿಟೆಕ್ನಿಕ್ ಕಾಲೇಜುಗಳಿವೆ. ಪ್ರತಿ ವರ್ಷ ಸಾವಿರಾರು ತಂತ್ರಜ್ಞರು ಹೊರಬರುತ್ತಿದ್ದಾರೆ. ಅವರೆಲ್ಲಾ ಉದ್ಯೋಗಕ್ಕಾಗಿ ಪುಣೆ, ಬೆಂಗಳೂರಿಗೆ ಹೋಗುತ್ತಿದ್ದಾರೆ. ಅವರಿಗೆ ಇಲ್ಲಿಯೇ ಉದ್ಯೋಗಾವಕಾಶ ಕಲ್ಪಿಸಬಹುದು ಎಂಬುದು ಪಾಟೀಲ ಅವರ ಅಭಿಮತ.

ಕೃಷಿ ಆಧಾರಿತ ಉದ್ದಿಮೆ ಅವಕಾಶ
ಜಿಲ್ಲೆಯಲ್ಲಿ ಟಾಟಾ ಸಮೂಹದ ಆಟೊಮೊಬೈಲ್ ಉದ್ಯಮ ಹೊರತುಪಡಿಸಿದರೆ ಬೇರೆ ಬೃಹತ್ ಉದ್ಯಮಗಳಿಲ್ಲ. ಈ ಭಾಗದಲ್ಲಿ ಹತ್ತಿ, ಮೆಣಸಿನಕಾಯಿ ಹಾಗೂ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಿಂದ ಟೆಕ್ಸ್ಟೈಲ್ ಉದ್ಯಮ, ಮೆಣಸಿನಕಾಯಿ ಹಾಗೂ ಮೆಕ್ಕಜೋಳ ಸಂಸ್ಕರಣಾ ಘಟಕ ಸ್ಥಾಪನೆಗೆ ಹೆಚ್ಚಿನ ಅವಕಾಶವಿದೆ ಎನ್ನುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಅಧ್ಯಕ್ಷ ಎನ್.ಪಿ.ಜವಳಿ. ಜಿಮ್ ಮೂಲಕ ಸರ್ಕಾರ ಸೂಕ್ತ ಕ್ರಮ ಮೈಗೊಳ್ಳಬೇಕಿದೆ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.