ಭಾನುವಾರ, ಜನವರಿ 26, 2020
28 °C

ಧ್ರುವ್‌, ಸಬೀನಾಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧ್ರುವ್‌, ಸಬೀನಾಗೆ ಗೆಲುವು

ಬೆಂಗಳೂರು: ತಮಿಳುನಾಡಿನ ಸಬೀನಾ ಅತಿಕಾ ಮತ್ತು ದೆಹಲಿಯ ಧ್ರುವ ಸರ್ದಾ ಇಲ್ಲಿ ನಡೆಯುತ್ತಿರುವ 25ನೇ ರಾಷ್ಟ್ರೀಯ ಟೆನ್‌ ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.ಈ ಮೂಲಕ ಇವರು ನಾಕೌಟ್‌ ಹಂತದಲ್ಲಿ ‘ಪೋಲ್‌ ಪೋಸಿಷೆನ್‌’ ಪಡೆದುಕೊಂಡಿದ್ದಾರೆ. ಸಬೀನಾ 1512 ಪಾಯಿಂಟ್‌ಗಳನ್ನು ಕಲೆ ಹಾಕಿದ್ದಾರೆ. ಕರ್ನಾಟಕದ ಪೂಜಾ ಹೆಗ್ಡೆ 1263 ಪಾಯಿಂಟ್‌ ಹೊಂದಿದ್ದು ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.ಪುರುಷರ ವಿಭಾಗದಲ್ಲಿ ಧ್ರುವ್ 1773 ಮತ್ತು ತಮಿಳುನಾಡಿನ ಶಬ್ಬೀರ್‌ ಧನ್ಕೋಟ್‌ ಕ್ರಮವಾಗಿ ಮೊದಲ ಎರಡು ಸ್ಥಾನ ಹೊಂದಿದ್ದಾರೆ.

ನಾಕೌಟ್‌ ಹಂತದ ಅರ್ಹತಾ ಸುತ್ತಿನ ಫಲಿತಾಂಶ: ಪುರುಷರ ವಿಭಾಗ: ಧ್ರುವ್‌ ಸರ್ದಾ (ಒಟ್ಟು 6683)–1, ಶಬ್ಬೀರ್‌ ಧನ್ಕೋಟ್‌ (6,535)–2, ಆಕಾಶ್‌ ಅಶೋಕ್‌ ಕುಮಾರ್‌ (6,303)–3, ಗಿರೀಶ್‌ ಗಾಬಾ (6,176)–4.ಮಹಿಳಾ ವಿಭಾಗ: ಸಬೀನಾ (ಒಟ್ಟು 3,835)–1, ಪೂಜಾ ಹೆಗ್ಡೆ (3,465)–2, ಜೂಡ್‌ ಅಲ್ಬನ್‌ (3,388)–3, ಸುಗಂಧಾ ಸರ್ದಾ (3,362)–4.

ಪ್ರತಿಕ್ರಿಯಿಸಿ (+)