ಭುವನೇಶ್ವರ: ನಕ್ಸಲೀಯರು ಶುಕ್ರವಾರದಿಂದ ಒಡಿಶಾದ ನಾರಾಯಣ ಪಟ್ಟಣ ಹಾಗೂ ಕೊರಾಪುಟ್ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ 48 ಗಂಟೆಗಳ ಬಂದ್ ಆಚರಣೆಯಲ್ಲಿ ತೊಡಗಿದ್ದಾರೆ.

ಶಾಸಕ ಹಿಕಾಕ ಅವರನ್ನು ಒತ್ತೆ ಇರಿಸಿಕೊಂಡಿರುವ ನಕ್ಸಲೀಯ ಸಂಘಟನೆಯೇ ಈ ಬಂದ್ಗೆ ಕರೆ ನೀಡಿರುವುದು ಸರ್ಕಾರಕ್ಕೆ ಮತ್ತೊಂದು ತಲೆನೋವಾಗಿದೆ. ಆದರೆ ಹಿಕಾಕ ಅಪಹರಣಕ್ಕೂ ಬಂದ್ಗೂ ಸಂಬಂಧವಿಲ್ಲ ಎಂದು ಮೂಲಗಳು ತಿಳಿಸಿವೆ.

ನಕ್ಸಲೀಯರು ರಸ್ತೆಗಳ ಮೇಲೆ ಮರಗಳನ್ನು ಕೆಡವಿದ್ದರಿಂದ ನಾರಾಯಣ ಪಟ್ಟಣವು ಶುಕ್ರವಾರ ಬೆಳಿಗ್ಗೆಯಿಂದಲೇ ಸಂಪರ್ಕ ಕಡಿದುಕೊಂಡಿದೆ ಎಂದು ಹೇಳಲಾಗಿದೆ. ಕೆಲವು ಕಡೆ ಈ ಮರಗಳ ಮೇಲೆ ನಕ್ಸಲೀಯರು ತಮ್ಮ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ಅಂಟಿಸಿದ್ದಾರೆ.

ತಮ್ಮ ವಿರುದ್ಧ ನಡೆಯುತ್ತಿರುವ `ಆಪರೇಶನ್ ಗ್ರೀನ್ ಹಂಟ್~ ನಿಲ್ಲಿಸಬೇಕು, ತಮ್ಮ ಪ್ರದೇಶದಲ್ಲಿ ನಿಯೋಜಿಸಿರುವ ಕೇಂದ್ರ ಪಡೆಗಳೂ ಸೇರಿದಂತೆ ಭದ್ರತಾ ಪಡೆಯನ್ನು ವಾಪಸ್ ಕರೆಸಿಕೊಳ್ಳಬೇಕು ಹಾಗೂ ಕೊರಾಪುಟ್ನ ಜೈಲಿನಲ್ಲಿರುವ `ರಾಜಕೀಯ ಕೈದಿಗಳನ್ನು~ ತಕ್ಷಣವೇ ಬಿಡುಗಡೆ ಮಾಡಬೇಕು ಎನ್ನುವುದು ಮಾವೊವಾದಿಗಳ 3 ಬೇಡಿಕೆಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.