ಭಾನುವಾರ, ಜೂನ್ 20, 2021
21 °C

ನಕ್ಸಲ್‌ಪೀಡಿತ ಪ್ರದೇಶ:ಸೌಕರ್ಯ ಕೊರತೆ: ಸಿಬ್ಬಂದಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ನಕ್ಸಲ್‌ಪೀಡಿತ ಪ್ರದೇಶದ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಸಿಬ್ಬಂದಿ ಕೆಲವೆಡೆ ಮೂಲಸೌಕರ್ಯ ಕೊರತೆಯಿಂದ ಸಂಕಷ್ಟ ಅನುಭವಿಸಬೇಕಾಯಿತು.ಜಡ್ಡಿನಗದ್ದೆಯಲ್ಲಿ ಯಾವುದೇ ಸಂಚಾರ ದೂರವಾಣಿ ಸೌಲಭ್ಯವಿಲ್ಲದೆ ಅಧಿಕಾರಿಗಳು ಪ್ರತಿಗಂಟೆಯ ಫಲಿತಾಂಶವನ್ನು ಮೇಲಾಧಿಕಾರಿಗಳಿಗೆ ತಿಳಿಸಲು ಹರಸಾಹಸ ಪಟ್ಟರು.ಬಳಿಕ ಪೊಲೀಸ್ ಇಲಾಖೆಯ ವಯರ್‌ಲೆಸ್ ಮೂಲಕ ಮಾಹಿತಿಯನ್ನು ನೀಡ ಲಾಯಿತು.ಬಾಡಿಗೆ ವಾಹನ ಮಾಲೀಕರ ಅಸಮಧಾನ:
ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಜಿಲ್ಲೆಯ ಹಲವು ಖಾಸಗಿ ಬಾಡಿಗೆ ವಾಹನ ಚಾಲಕ ಮಾಲೀಕರು 3 ದಿನಗಳಿಂದ ಯಾವುದೇ ಸೌಲಭ್ಯ ಒದಗಿಸದ ಬಗ್ಗೆ ಅಸಮಾದಾನ ವ್ಯಕ್ತ ಪಡಿಸಿದರು.ಚುನಾವಣಾ 5 ದಿನ ಮೊದಲೇ ವಾಹನ ಮಾಲೀಕರು ವಾಹನದೊಂದಿಗೆ ಉಡುಪಿ ಎಸ್ಪಿ ಕಚೇರಿಗೆ ತೆರಳಬೇಕು. ಅಲ್ಲಿ ವಾಹನಕ್ಕೆ ವಯರ್‌ಲೆಸ್ ಸಂಪರ್ಕ ಕಲ್ಪಿಸಲಾಗುತ್ತದೆ. ತದನಂತರ ಅದರ ಚಾಲಕರು ವಾಹನ ಬಿಟ್ಟು ದೂರ ಹೊಗಲಿಕ್ಕಿಲ್ಲ.ನಕ್ಸಲ್ ಪೀಡಿತ ಪ್ರದೇಶಗಳಿಗೆ ಆಗಮಿಸಿದ ಚಾಲಕರಿಗೆ ಕೆಲವೆಡೆ ನಮಗೆ ಭದ್ರತೆ  ಊಟ, ಉಪಹಾರ ವ್ಯವಸ್ಥೆ ಕಲ್ಪಿಸಿಲ್ಲ. ಅಧಿಕಾರಿಗಳು ಮುಂದೆ ಇಂತಹ ಲೋಪ ಆಗದಂತೆ ನೋಡಿಕೊಳ್ಳಬೇಕು ಎಂದು ಕರ್ತವ್ಯ ನಿರತ ವಾಹನ ಮಾಲೀಕರೊಬ್ಬರು `ಪ್ರಜಾವಾಣಿ~ ಜತೆ ಅಸಮಧಾನ ತೋಡಿಕೊಂಡರು.ನಕ್ಸಲ್‌ಪೀಡಿತ ಪ್ರದೇಶಗಳಾದ ಮಧ್ಯಾಹ್ನದ ವೇಳೆಗೆ  ಜಡ್ಡಿನ ಗದ್ದೆ (ಶೇ. 48) ಅಮಾಸೆಬೈಲು ಹಿಪ್ರಾ ಶಾಲೆ, ರಟ್ಟಾಡಿ ಶಾಲೆ (ಶೇ. 40), ನಡಂಬೂರು ಶಾಲೆ (ಶೇ. 45), ಅರಸಮ್ಮಖಾನು ಶಾಲೆ (ಶೇ. 46) ಮಾಂಡಿ ಮೂರುಕೈ ಶಾಲೆ (ಶೇ.48)  ಮತದಾನವಾಗಿದೆ. ಗಾವಳಿ, ಅವರ್ಸೆ, ಹೆಂಗವಳ್ಳಿ, ಆರ್ಡಿ, ಅಲ್ಬಾಡಿ,ಬೆಳ್ವೆ,ಹಾಲಾಡಿ,ಬಿದ್ಕಲ್‌ಕಟ್ಟೆ ಮತಗಟ್ಟೆಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಶೇ 40ರಷ್ಟು ಮತದಾನವಾಗಿತ್ತು.ಪರಿಸರದದಲ್ಲಿ ಜನರು ಬೆಳಿಗ್ಗೆಯಿಂದ ಉತ್ಸಾಹದಿಂದ ಮತ ಚಲಾವಣೆಗೆ ತೆರುಳುತ್ತಿರುವುದು ಕಂಡು ಬಂತು.

ಪದೇ ಪದೇ ಬರುವ  ಚುನಾವಣೆ ಬಗ್ಗೆ ಜಡ್ಡಿನಗದ್ದೆ ಕೆಲಾಸುಂಕ ನಿವಾಸಿ ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.`ಪ್ರಾಯದವರು ಬರುಸಲ ಓಟಿಗೆ ಬತ್ತೇ ಇಲ್ಲೆ~ (ಮುಂದಿನ ಚುನಾವಣೆಗಳಲ್ಲಿ ಪ್ರಾಯದವರು ಚುನಾವಣೆಗೆ ಬರುವುದೇ ಇಲ್ಲ) ಎಂದು ಅವರು ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.ಕ್ಷೇತ್ರದಾಚೆಯೂ ಪ್ರಭಾವ: ಉಡುಪಿ -ಚಿಕ್ಕಮಗಳೂರು ಕ್ಷೇತ್ರವ್ಯಾಪ್ತಿಯಲ್ಲಿ ಬಾರದ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಅಂಪಾರು ಶಂಕರನಾರಾಯಣ, ಸಿದ್ದಾಪುರ, ಸೇರಿದಂತೆ ಬಹುಬಾಗಗಳಿಗೂ ಚುನಾವಣಾ ಬಿಸಿ ತಟ್ಟಿರುವುದು ಕಂಡುಬಂತು. ಇಲ್ಲಿನ ಪೇಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.ಅರ್ಧ ಗ್ರಾಮಕ್ಕೆ ಚುನಾವಣೆ: ಎರಡು ವಿಧಾನ ಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿದ ಅಮಾಸೆಬೈಲು ಗ್ರಾ.ಪಂ ವ್ಯಾಪ್ತಿಯ ಅರ್ಧ ಗ್ರಾಮದ ಜನತೆ ಚುನಾವಣೆಯಲ್ಲಿ ಬಾಗವಹಿಸಿದರೆ, 3ನೇ ಹಣಕಾಸು ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಜಿ ಕೊಡ್ಗಿ ಸೇರಿದಂತೆ ಅಮಾಸೆಬೈಲಿನ ಉಳಿದ ಅರ್ಧ ಭಾಗದ ಗ್ರಾಮಸ್ಥರಿಗೆ  ಚುನಾವಣೆ ಇರಲಿಲ್ಲ.ಶೋಧ ಚುರುಕು: ಶಂಕರನಾರಾಯಣ ಠಾಣೆ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶಗಳಾದ ಗೊಳಿಯಂಗಡಿ ಮತ್ತಿತರ ಕಡೆ ಪೊಲೀಸರು ವಿಶೇಷ ನಿಗಾ ವಹಿಸಿದ್ದರು. ತೊಂಬಟ್ಟು, ಕೆಲ, ಕೂರ್ತಗುಂಡಿ, ಹಳ್ಳಿಹೊಳೆ, ದೇವರಬಾಳು, ದಾಸೀಕಾನು ಹೊಸಂಗಡಿ ಪ್ರದೇಶದಲ್ಲಿ ಹಾಗೂ ಮಡಾಮಕ್ಕಿ ಅಮಾಸೆಬೈಲಿ ನಲ್ಲೂ ಶೋಧ ಕಾರ್ಯ ಚುರುಕಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.