ಕೊಲ್ಲಿ (ಬೆಳ್ತಂಗಡಿ ತಾ.): `ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಆರೋಗ್ಯ ಸವಲತ್ತು ಕಲ್ಪಿಸಲು ಸಂಚಾರಿ ಪ್ರಾಥಮಿಕ ಆರೋಗ್ರ ಕೇಂದ್ರ ಕಲ್ಪಿಸಲಾಗಿದೆ. ನಿಗದಿತ ದಿನ, ಪ್ರದೇಶ, ನಿರ್ದಿಷ್ಟ ಸಮಯದಲ್ಲಿ ಈ ವಾಹನ ಆರೋಗ್ಯ ಸೇವೆ ನೀಡಲಿದೆ~ ಎಂದು ಎಸ್ಪಿ ಅಭಿಷೇಕ್ ಗೋಯಲ್ ಹೇಳಿದರು.

ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ `ನಕ್ಸಲ್ ಪೀಡಿತ ಗ್ರಾಮಗಳ ಜನ ಸಂಪರ್ಕ ಸಭೆ~ಯಲ್ಲಿ ಅವರು ಮಾತನಾಡಿದರು.

ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಸಿದ್ಧವಾಗಿದ್ದು, ಚಾಲಕ ಕಂ ನಿರ್ವಾಹಕ ಹುದ್ದೆಗೆ 85 ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸಿ ಅರ್ಹರಿಗೆ ತರಬೇತಿ ನೀಡಿ ಉದ್ಯೋಗ ನೀಡಲಾಗುವುದು. ಸ್ವ ಉದ್ಯೋಗದ ಮಾಹಿತಿಯನ್ನೂ ನೀಡಲಾಗುವುದು ಎಂದರು. ನಕ್ಸಲ್ ಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊ ಳ್ಳುವವರಿಗೆ ಇದುವರೆಗೆ ರೂ.10 ಲಕ್ಷ ನೀಡಲಾಗುತ್ತಿತ್ತು. ಇನ್ನು ಮುಂದೆ ಅವರ ಜಮೀನಿನ ಮೌಲ್ಯಮಾಪನ ಮಾಡಿ ಹಣ ನೀಡಲಾಗುವುದು ಎಂದು ಗೋಯಲ್ ಹೇಳಿದರು.

ಋಣಾತ್ಮಕ ಮನೋಭಾವ ಬೇಡ:ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಮಾತನಾಡಿ, ಕಾಮಗಾರಿ ಕುರಿತು ಕೇವಲ ಭರವಸೆ ನೀಡುತ್ತಾರೆ ಎಂಬ ಭಾವನೆ ಬೇಡ. ಕಳೆದ ಬಾರಿ ತೆಗೆದುಕೊಂಡ ಕಾಮಗಾರಿಗಳ ಪೈಕಿ ಕುತ್ಲೂರಿನ 36 ಮನೆಗಳಿಗೆ ಈಗಾಗಲೇ ಸೋಲಾರ್ ದೀಪ ಅಳವಡಿಸಲಾಗಿದೆ. ಇಲ್ಲಿನ ವಿದ್ಯಾವಂತ ಯವಕರಿಗೆ ಉದ್ಯೋಗ ನೀಡಲಾಗಿದೆ.

ನಾರಾವಿಯ ದೇವಪ್ಪ ಮಲೆಕುಡಿಯ, ಸುಧಾಕರ ಮಲೆ ಕುಡಿಯ ಅವರನ್ನು ಗ್ರಾಮ ಸಹಾಯಕರಾಗಿ ನೇಮಕ ಮಾಡಲಾಗಿದೆ. ಆಶ್ರಮ ಶಾಲೆಗಳಲ್ಲಿ ಅಡುಗೆ ಮಾಡಲು ಇಬ್ಬರನ್ನು, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿಯ ಅಂಗ ಸಂಸ್ಥೆಗಳಿಂದ ಸವಲತ್ತು ಒದಗಿಸಲಾಗಿದೆ ಎಂದರು.

ಜುಲೈ ಬಳಿಕ ಕಾಮಗಾರಿ: ಭರವಸೆ ನೀಡಿರುವ ಕಡೆ ಜುಲೈ ಮೊದಲ ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಆಗಸ್ಟ್ ವೇಳೆಗೆ ಪ್ರತಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಗುವುದು. ಒಂದು ತಿಂಗಳಲ್ಲಿ ಎಲ್ಲ ಸೋಲಾರ್ದೀಪಗಳನ್ನು ದುರಸ್ತಿ ಮಾಡಲಾಗುವುದು. ದಿಡುಪೆ- ಎಳನೀರು ರಸ್ತೆಗೆ ಪಣಿಕ್ಕಲ್ ಮತ್ತು ದಿಡುಪೆಯಲ್ಲಿ ಎರಡು ಸೇತುವೆಗಳು ಆಗಬೇಕಿವೆ. ಎಂಜಿನಿಯರ್ಗಳು ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಕೆಲಸ ಆರಂಭಿಸಲಾಗುವುದು. ಆದ್ಯತೆ ಆಧಾರದಲ್ಲಿ ಒಂದೊಂದು ಕಾಮಗಾರಿಗಳನ್ನು ಆರಂಭಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಬಲವಂತದ ಸ್ಥಳಾಂತರ ಇಲ್ಲ: ನಕ್ಸಲ್ ಪೀಡಿತ, ಕುದುರೆಮುಖ ಅಭಯಾರಣ್ಯ ಪ್ರದೇಶದ ಕುಟುಂಬ ಗಳನ್ನು ಬಲವಂತವಾಗಿ ಸ್ಥಳಾಂತರಿ ಸುವುದಿಲ್ಲ. 235 ಕುಟಂಬಗಳ ಪೈಕಿ ವೈಯಕ್ತಿಕವಾಗಿ ಮುಂದೆ ಬಂದರೆ ಅವರ ಆಸ್ತಿ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.