ಸೋಮವಾರ, ಮೇ 17, 2021
29 °C

ನಗರದಲ್ಲಿ ಇಂದು- ಸೆಪ್ಟೆಂಬರ್ 11, ಭಾನುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಪ್ಟೆಂಬರ್ 11, ಭಾನುವಾರ

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ:
ಟೆನ್ನಿಸ್ ಪೆವಿಲಿಯನ್ ಪ್ಯಾಲೇಸ್ ಗ್ರೌಂಡ್, ಮೌಂಟ್ ಕಾರ್ಮೆಲ್ ಕಾಲೇಜು ಬಳಿ, ವಸಂತನಗರ. ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ. ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿಗಳು- ಸಚಿವೆ ಶೋಭಾ ಕರಂದ್ಲಾಜೆ, ಕನ್ನಡ ವಿಶ್ವವಿದ್ಯಾಲಯ ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ.ವಿಜಯ್ ತಂಬಂಡ ಪೂಣಚ್ಚ, ಈಶಾನ್ಯ ವಲಯದ ಡಿಸಿಪಿ ರವಿಕಾಂತೇಗೌಡ. ಬೆಳಿಗ್ಗೆ 11.ವಿವೆಲ್ ಆಕ್ಟಿವ್ ಫೇರ್ ಮತ್ತು ಉದಯ ಫಿಲ್ಮ್ ಅವಾರ್ಡ್ಸ್: ತ್ರಿಪುರ ವಾಸಿನಿ, ಅರಮನೆ ಮೈದಾನ. ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ. ಅತಿಥಿಗಳು- ಸಚಿವ ಆರ್.ಅಶೋಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್‌ಕುಮಾರ್ ಪಾಟೀಲ್, ಕನ್ನಡ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್, ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನಂ ನಾಯ್ಡು, ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ. ಅಧ್ಯಕ್ಷತೆ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಸಂಜೆ 6.30.ಪತಂಜಲಿ ಯೋಗ ಶಿಕ್ಷಣ ಸಮಿತಿ:
ಯುವಜನ ಮತ್ತು ಸಾಂಸ್ಕೃತಿಕ ವಿಕಾಸ ಕೇಂದ್ರ, ಜೈನ್ ದೇವಸ್ಥಾನದ ಎದುರು, ಓಕಳಿಪುರ. ರಾಜ್ಯ ಮಟ್ಟದ 54ನೇ ಸ್ನೇಹ ಮಿಲನ ಕಾರ್ಯಕ್ರಮ. ಉದ್ಘಾಟನೆ- ಸಚಿವ ಎಸ್.ಸುರೇಶ್‌ಕುಮಾರ್. ಅತಿಥಿಗಳು- ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಪ್ರಾಂತ ಸಂಯೋಜಕ ಚನ್ನಬಸಪ್ಪ, ತುಮಕೂರು ವಿಭಾಗದ ಪ್ರಾಂತ ಸಂಯೋಜಕ ಆರ್.ಎ.ಸುರೇಶ್‌ಕುಮಾರ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯೆ ಡಾ.ವಿಜಯಲಕ್ಷ್ಮಿ ದೇಶಮನೆ, ಸಮರ್ಪಣಾ ಸಮಾಜ ಸ್ಪಂಧನ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹೊಸಮನಿ, ವೈದ್ಯರಾದ ಡಾ.ಕ್ಯಾಪ್ಟನ್ ಅಮರೇಂದ್ರ, ಗಾಯಕ ಶಂಕರ್ ಶಾನಬಾಗ್. ಅಧ್ಯಕ್ಷತೆ- ಸಮಿತಿಯ ಕರ್ನಾಟಕ, ತುಮಕೂರು ವಿಭಾಗದ ಅಧ್ಯಕ್ಷ ಸಿ.ವಿ.ಮಹದೇವಯ್ಯ. ಬೆಳಿಗ್ಗೆ 9. ಸಮಾರೋಪ ಸಮಾರಂಭ. ಅತಿಥಿಗಳು-  ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಪ್ರಾಂತ ಸಂಯೋಜಕ ಚನ್ನಬಸಪ್ಪ, ಸಮಿತಿಯ ಮಡಿವಾಳ ಶಾಖೆಯ ಕಾರ್ಯದರ್ಶಿ ಚಂದ್ರಶೇಖರ್, ರಾಜಾಜಿನಗರ ಶಾಖೆ ಉಪಾಧ್ಯಕ್ಷ ರಾಮಣ್ಣ. ಅಧ್ಯಕ್ಷತೆ- ಕರ್ನಾಟಕ ಪ್ರಾಂತ ಸೇವಾ ಪ್ರಮುಖ ಡಾ.ಎ.ಎಂ.ಶಿವಕುಮಾರ್. ಮಧ್ಯಾಹ್ನ 3.ಶಾಂಡಿಲ್ಯ ಇನ್‌ಸ್ಟಿಟ್ಯೂಟ್ ಆಫ್ ನರ್ಚರಿಂಗ್‌ಎಕ್ಸಲೆನ್ಸ್: ತೋಪಗಾನಹಳ್ಳಿ, ಕನಕಪುರ ರಸ್ತೆ 48ನೇ ಕಿ.ಮೀ. ಧ್ಯಾನ ಮಂದಿರ, ಉಪನ್ಯಾಸ ಸಭಾಂಗಣದ ಶಿಲಾನ್ಯಾಸ ಸಮಾರಂಭ ಮತ್ತು ಉಚಿತ ವ್ಯಕ್ತಿತ್ವ ವಿಕಸನ ಕಾರ್ಯಾಗಾರ. ಅತಿಥಿಗಳು- ಸಚಿವರಾದ ಡಾ.ವಿ.ಎಸ್.ಆಚಾರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ, ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಮಾಜಿ ಶಾಸಕ ಮಹಿಮಾ ಪಟೇಲ್. ಅಧ್ಯಕ್ಷತೆ- ಶಾಸಕ ಡಿ.ಕೆ.ಶಿವಕುಮಾರ್. ಬೆಳಿಗ್ಗೆ 11.ಕ್ರೈಸ್ಟ್ ಕಾನೂನು ವಿದ್ಯಾಲಯ: ಸಭಾಂಗಣ. `2ನೇ ರಾಷ್ಟ್ರೀಯ ಅಣಕು ನ್ಯಾಯಾಲಯ~ ಸ್ಪರ್ಧೆಯ ಸಮಾರೋಪ ಸಮಾರಂಭ. ಅತಿಥಿಗಳು- ಸಚಿವ ಆರ್.ಅಶೋಕ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮುಕುಂದನ್ ಶರ್ಮಾ, ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಾಗ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರ‌್ನಹಳ್ಳಿ. ಬೆಳಿಗ್ಗೆ  11.ರಂಗಸ್ಥಳ: ಎಡಿಎ ರಂಗ ಮಂದಿರ, ಜೆ.ಸಿ.ರಸ್ತೆ. 11ನೇ ವಾರ್ಷಿಕೋತ್ಸವ ಹಾಗೂ 2011ನೇ ಸಾಲಿನ ರಂಗಸ್ಥಳ ಪ್ರಶಸ್ತಿ ಪ್ರದಾನ ಸಮಾರಂಭ. ಪ್ರಶಸ್ತಿ ಪುರಸ್ಕೃತರು- ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ್ವರರಾವ್, ಚಂಡೆ ವಾದಕ ಕೊಲ್ಲೂರು ಕೊಗ್ಗ ಆಚಾರ್ಯ. ಅತಿಥಿಗಳು- ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಡಾ.ದೊಡ್ಡರಂಗೇಗೌಡ, ಉದ್ಯಮಿಗಳಾದ ನೀಲಾವರ ಸಂಜೀವರಾವ್, ಸೋಮನಾಥ ಆಚಾರ್ಯ. ಅಧ್ಯಕ್ಷತೆ- ಉದ್ಯಮಿ ಡಾ.ಪಿ.ದಯಾನಂದ ಪೈ. ಸಂಜೆ 4.ಅಂಕಿತ ಪುಸ್ತಕ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ `ಅಕ್ಕಚ್ಚುವಿನ ಅರಣ್ಯಪರ್ವ~, ಜಿ.ಎನ್.ರಂಗನಾಥ ರಾವ್ ಅವರ `ಇವತ್ತು- ನಿನ್ನೆ~, ಗೀತಾ ವಸಂತ ಅವರ `ಚೌಕಟ್ಟಿನಾಚೆಯವರು~, ಟಿ.ಆರ್.ಅನಂತರಾಮ್ ಅವರ `ಮರ್ಫಿಲಾ~ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ. ಅತಿಥಿಗಳು- ಕವಿ ಡಾ.ಜಿ.ಎಸ್.ಶಿವರುದ್ರಪ್ಪ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ. ಬೆಳಿಗ್ಗೆ 10.30.ಸ್ವಾಮಿ ವಿವೇಕಾನಂದ ಆದರ್ಶ ಸಾಧನಾ ಕೇಂದ್ರ ಟ್ರಸ್ಟ್: ವಾಸ್ಕ್ ಯೋಗ ಕೇಂದ್ರ, `ಪ್ರಣವ~, 4ನೇ ಮುಖ್ಯರಸ್ತೆ, ಹಾವನೂರು ಬಡಾವಣೆ, ಹೆಸರಘಟ್ಟ ಮುಖ್ಯರಸ್ತೆ. `ಗ್ರಾಮೀಣ ನಾಟಕೋತ್ಸವ 2011~ ಸಮಾರೋಪ ಸಮಾರಂಭ. ಅತಿಥಿಗಳು- ಬಿಬಿಎಂಪಿ ಸದಸ್ಯ ಬಿ.ಆರ್.ಚಂದ್ರಶೇಖರ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಮಿಕ ಮೋರ್ಚಾ ಅಧ್ಯಕ್ಷ ಬಿ.ಕೃಷ್ಣಮೂರ್ತಿ, ಕಲಾವಿದರಾದ ಸಿ.ಪಿ.ಶೆಟ್ಟಿ, ಶ್ರೀನಿವಾಸ್. ಅಧ್ಯಕ್ಷತೆ- ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಟಿ.ಎಸ್.ಗಂಗರಾಜು. ಸಂಜೆ 7.ಬೆಂಗಳೂರು ಕೊಡವ ಸಮಾಜ: ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣ, 1ನೇ ಮುಖ್ಯರಸ್ತೆ, ವಸಂತನಗರ. ಕೈಲ್‌ಪೊಳ್ದ್ ಹಬ್ಬ ಆಚರಣೆ. ಅತಿಥಿಗಳು- ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪುಲಿಯಂಡ ಕೆ.ಸುಬ್ಬಯ್ಯ, ಪೂರ್ವ ಸಂಚಾರ ವಿಭಾಗದ ಡಿಸಿಪಿ ಬಿದ್ದಾಟಂಡ ಎ.ಮುತ್ತಣ್ಣ, ಕೊಡಗು ಜಿಲ್ಲಾ ಪಂಚಾಯತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ. ಅಧ್ಯಕ್ಷತೆ- ಸಮಾಜದ ಅಧ್ಯಕ್ಷ ಚೆಪ್ಪುಡಿರ ಎಂ.ಸುಬ್ಬಯ್ಯ. ಬೆಳಿಗ್ಗೆ 9.ಸ್ನೇಹ ಸೇತು: ನಾಟಕ ಅಕಾಡೆಮಿ ಚಾವಡಿ, ಕನ್ನಡ ಭವನ. ಹನುಮಂತ ಹಾಲಿಗೇರಿ ಅವರ `ಕತ್ತಲಗರ್ಭದ ಮಿಂಚು~ ಪುಸ್ತಕ ಲೋಕಾರ್ಪಣೆ. ಅತಿಥಿಗಳು- ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕವಿ ಪ್ರೊ.ಎಲ್.ಎನ್.ಮುಕುಂದರಾಜ್, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಡಾ.ವಿರೇಶ್ ಬಳ್ಳಾರಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ. ಸಂಜೆ 5.30.ನಾಟ್ಯಾಂತರಂಗ: ರವೀಂದ್ರ ಕಲಾಕ್ಷೇತ್ರ. ಮಾನಸ ಕಂಬಣ್ಣ ಭರತನಾಟ್ಯ ರಂಗಪ್ರವೇಶ. ಅತಿಥಿಗಳು- ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಡಾ.ಎಚ್.ಎನ್.ಕೃಷ್ಣ, ಲೋಕಾಯುಕ್ತ ಜಾಗೃತದಳದ ನಿರ್ದೇಶಕ ಡಿ.ಎನ್.ಮುನಿಕೃಷ್ಣ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ.ಮಹೇಶ್ ಜೋಶಿ, ರಾಜ್ಯ ಲೆಕ್ಕಪತ್ರ ಇಲಾಖೆ ನಿಯಂತ್ರಕ ಆರ್.ಎಸ್.ಪೊಂಡೆ. ಬೆಳಿಗ್ಗೆ 10.30.ಬಾಬಾ ಮಹಾರಾಜ ಸೇವಾ ಸಮಿತಿ: ಸಿದ್ಧಾರೂಢಾಶ್ರಮ, ಮೈಸೂರು ರಸ್ತೆ, ಬಿಎಚ್‌ಇಎಲ್ ಹತ್ತಿರ. 50ನೇ ಮಾಸಿಕ ಸತ್ಸಂಗ ಕಾರ್ಯಕ್ರಮ ಹಾಗೂ ಸಿದ್ಧೇಶ್ವರ ಸ್ವಾಮೀಜಿ ಅವರ `ಉಪದೇಶ ವೈವಿಧ್ಯ~ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ. ಅತಿಥಿಗಳು- ಸಿದ್ಧಾರೂಢಾಶ್ರಮದ ಶಿವಾನಂದ ಭಾರತಿ ಸ್ವಾಮೀಜಿ, ಸುಜ್ಞಾನ ಕುಟೀರದ ಮಲ್ಲನಗೌಡ, ನಾಗರಾಜಸ್ವಾಮೀಜಿ. ಬೆಳಿಗ್ಗೆ 11.ಕಲಾಪ್ರೇಮಿ ಪ್ರತಿಷ್ಠಾನ: ಸೇವಾ ಸದನ, ಮಲ್ಲೇಶ್ವರ. ಅಷ್ಟಾವಧಾನ ಉಪನ್ಯಾಸ- `ಶತಾವಧಾನಿ~ ಡಾ.ಆರ್.ಗಣೇಶ್. ಸಂಜೆ 5.ಸುಚಿತ್ರ ಕಲಾಕೇಂದ್ರ: ಕಿ.ರಂ.ನುಡಿಮನೆ, 9ನೇ ಮುಖ್ಯರಸ್ತೆ, 2ನೇ ಹಂತ, ಬನಶಂಕರಿ. ಸಾಹಿತ್ಯ ಸಂಜೆ. `ಕನ್ನಡ ಭಾಷೆಯ ಸೊಗಡು~ ಕುರಿತು ಉಪನ್ಯಾಸ- ಡಾ.ಕೆ.ಪಿ.ಪುತ್ತೂರಾಯ. ಸಂಜೆ 6.

ರಂಗದರ್ಶಿ

ಸೃಷ್ಟಿ ವೆಂಚರ್ಸ್‌: ಇಎಟಿ ರಸ್ತೆ, ಬಸವನಗುಡಿ. `ಸಾಯುವವನೇ ಚಿರಂಜೀವಿ~ ಏಕವ್ಯಕ್ತಿ ನಾಟಕ ಪ್ರದರ್ಶನ. ಸಂಜೆ 4.30.ರಂಗಸ್ಥಳ: ಎಡಿಎ ರಂಗ ಮಂದಿರ, ಜೆ.ಸಿ.ರಸ್ತೆ. `ವೀರ ಅಭಿಮನ್ಯು~ ಯಕ್ಷಗಾನ ಪ್ರದರ್ಶನ. ಯಕ್ಷಸಂಭ್ರಮ ತಂಡ. ಮಧ್ಯಾಹ್ನ 2.30.ರಂಗಶಂಕರ: 2ನೇ ಹಂತ, ಜೆ.ಪಿ.ನಗರ. `ದಿ ಬಾಲ್ಡ್ ಸೋಪ್ರಾನೋ~ ಇಂಗ್ಲಿಷ್ ನಾಟಕ ಪ್ರದರ್ಶನ. ಮಧ್ಯಾಹ್ನ 3.30.

ಧಾರ್ಮಿಕ ಕಾರ್ಯಕ್ರಮ

ಭಗವಾನ್ ಆದಿನಾಥ ದಿಗಂಬರ ಜಿನಮಂದರ: ಚಕ್ರೇಶ್ವರಿ ಮಹಿಳಾ ಸಮಾಜ, ಜಯನಗರ. ದಶಲಕ್ಷಣ ಮಹಾಪರ್ವ. `ಉತ್ತಮ ಬ್ರಹ್ಮಚರ್ಯ ಧರ್ಮ~ ಪ್ರವಚನ- ಪ್ರಾಧ್ಯಾಪಕರಾದ ಜಯಲಕ್ಷ್ಮಿ ಅಭಯಕುಮಾರ್ ಅವರಿಂದ. ಮಧ್ಯಾಹ್ನ 2.30.ವಿದ್ಯಾರಣ್ಯ ಯುವಕರ ಸಂಘ: ಎಪಿಎಸ್ ಕಾಲೇಜು ಆವರಣ. ಬೆಂಗಳೂರು ಗಣೇಶ ಉತ್ಸವ. ಸತ್ಯ ನಾರಾಯಣ ಪೂಜೆ. ಬೆಳಿಗ್ಗೆ 9. ಗಣೇಶ ವಿಸರ್ಜನೆ. ಸಂಜೆ 5.ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: `ರಾಮಕೃಷ್ಣ ಉಪದೇಶಾಮೃತ ಭಾವಧಾರೆ; ಪ್ರವಚನ- ಸ್ವಾಮಿ ಚಂದ್ರೇಶಾನಂದಜಿ. ಸಂಜೆ 5.ಪ್ರಸನ್ನ ವೀರಾಂಜನೇಯಸ್ವಾಮಿ ಟ್ರಸ್ಟ್: ಭಜನೆ- ಮಾರುತಿ ಪ್ರಸಾದ್ ಮತ್ತು ತಂಡ. ಬೆಳಿಗ್ಗೆ 9.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿರಸ್ತೆ, ನರಸಿಂಹರಾಜ ಬಡಾವಣೆ. ಡಿವಿಜಿ ಕವನಗಳ ಉಪನ್ಯಾಸ- ಆರ್.ಎ.ದಕ್ಷಿಣಮೂರ್ತಿ. ಸಂಜೆ 6.30.ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆರಸ್ತೆ, ತ್ಯಾಗರಾಜನಗರ. `ಮಾಂಡಕ್ಯೋಪನಿಷತ್ತು~ ಪ್ರವಚನ- ಶಿವರಾಮ ಅಗ್ನಿಹೋತ್ರಿ. ಬೆಳಿಗ್ಗೆ 9.30.ದೇವಗಿರಿ ಗುರುಸೇವಾ ಸಮಿತಿ: 24ನೇ ಮುಖ್ಯರಸ್ತೆ, 2ನೇ ಹಂತ, ಬನಶಂಕರಿ. `ದ್ವಾದಶ ಸ್ತೋತ್ರ ಹಾಗೂ ಪ್ರೋಷ್ಠಪದಿ~ ಪ್ರವಚನ- ಅಂಬರೀಷಾಚಾರ್ಯ. ಸಂಜೆ 7.ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: 9ನೇ ಬಡಾವಣೆ, ಜಯನಗರ. ದೇವರನಾಮ ಗಾಯನ- ಎನ್.ಎಸ್.ಅಭಿಷೇಕ ಮತ್ತು ತಂಡ. ಸಂಜೆ 6.ಕರ್ನಾಟಕ ಹರಿದಾಸ ಸೈಂಟಿಫಿಕ್ ರೀಸರ್ಚ್ ಸೆಂಟರ್: ವಿಜಯರಂಗ, 17ನೇ ಅಡ್ಡರಸ್ತೆ, ವಿಜಯನಗರ. ಜಗನ್ನಾಥದಾಸರ 202ನೇ ಆರಾಧಾನಾ ಮಹೋತ್ಸವ. `ಸಕಲದುರಿತ ನಿವಾರಣ ಸಂಧಿ~ ಉಪನ್ಯಾಸ- ಡಾ.ಆನಂದ ತೀರ್ಥಾಚಾರ್ಯ ಮಳಗಿ. ಸಂಜೆ 5.30.ರಾಮಸೇವಾ ಮಂಡಳಿ: ನಾರಾಯಣಸ್ವಾಮಿ ರಾವ್ ಮಾರ್ಗ, ಚಾಮರಾಜಪೇಟೆ. ಗಣೇಶೋತ್ಸವ ಅಂಗವಾಗಿ ಗಾಯನ ಕಾರ್ಯಕ್ರಮ- ಪಟ್ಟಾಭಿರಾಮ ಪಂಡಿತ್ ಮತ್ತು ವೃಂದ. ಸಂಜೆ 6.ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ: 2ನೇ ಮುಖ್ಯರಸ್ತೆ, ಅರಮನೆ ನಗರ. ನವಧಾನ್ಯ ಅಲಂಕಾರ. ಬೆಳಿಗ್ಗೆ 7.ಕೋದಂಡರಾಮ ದೇವಸ್ಥಾನ ಸಮಿತಿ: ಶ್ರೀರಾಮಂದಿರ ರಸ್ತೆ, ಸಂಪಂಗಿರಾಮನಗರ. ಹೆಸರುಬೇಳೆ ಅಲಂಕಾರ. ಬೆಳಿಗ್ಗೆ 7.ಗಣೇಶ ಮಂದಿರ: ತ್ಯಾಗರಾಜನಗರ. ನಾದಸ್ವರ- ಪರಮೇಶ್ ಮತ್ತು ತಂಡ. ಸಂಜೆ 7.ಲೋಕಕಲ್ಯಾಣ ವಿಘ್ನೇಶ್ವರ ಮಹೋತ್ಸವ ಸಮಿತಿ: ಲೋಕಸೇವಾ ಬಡಾವಣೆ, 2ನೇ ಹಂತ, ಜ್ಞಾನ ಭಾರತಿ. ಭಕ್ತಿಗೀತೆ- ದೀಕ್ಷಿತ್ ಭಟ್ ಮತ್ತು ವೃಂದ. ಸಂಜೆ 6.30.ಪ್ರಸನ್ನ ವಿದ್ಯಾಗಣಪತಿ ಭಕ್ತ ಮಂಡಳಿ: ಲಕ್ಷ್ಮಣರಾವ್ ರಸ್ತೆ, ಹುರಿಯೋಪೇಟೆ. ಅನಂತ ಪದ್ಮನಾಭ ಪೂಜಾ ಉತ್ಸವ ಅಂಗವಾಗಿ ರಜತಾಭರಣ ಅಲಂಕಾರ. ಬೆಳಿಗ್ಗೆ 7.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.