ಶಿವಮೊಗ್ಗ: ನಗರದ ಅಭಿವೃದ್ಧಿ ನಾಗಾಲೋಟದಲ್ಲಿ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಗಾಂಧಿ ಪಾರ್ಕ್, ಶಿವಪ್ಪ ನಾಯಕ ಮಾರುಕಟ್ಟೆ, ವಿನೋಬ ನಗರ ಮಾರುಕಟ್ಟೆ, ವಿದ್ಯಾನಗರದ ಅನಿಲ ಚಿತಾಗಾರ, ಗಾಡಿಕೊಪ್ಪದ ಸೇವಾಲಾಲ್ ಸಮುದಾಯ ಭವನ ಹಾಗೂ ಇನ್ನಿತರ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಅಭಿವೃದ್ಧಿಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇರುವಂತೆ, ಜಿಲ್ಲೆ ರಾಜ್ಯದಲ್ಲಿಯೇ ಮಾದರಿಯಾಗಲಿದ್ದು, ನಗರದ ಅಭಿವೃದ್ಧಿ ನಾಗಾಲೋಟದಲ್ಲಿ ಆಗಲಿದೆ ಎಂದು ಅವರು ಹೇಳಿದರು.
ಯಡಿಯೂರಪ್ಪ, ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಜಿಲ್ಲೆಯ ಅಭಿವೃದ್ಧಿಗೆ ಪ್ರೀತಿಯಿಂದ ಪ್ರಯತ್ನಿಸಿದ್ದಾರೆ. ನಗರಕ್ಕೆ ಬೇಕಾದ ರಸ್ತೆ, ಸೇತುವೆ, ಶಾಲಾ ಕಾಲೇಜುಗಳು, ಕಟ್ಟಡಗಳು, ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಬಡವರಿಗೆ ನಿವೇಶನ ನೀಡುವ, ಹಕ್ಕು ಪತ್ರಗಳನ್ನು ನೀಡುವ ಯೋಜನೆಗಳನ್ನು ಮಾಡಲಾಗಿದೆ ಎಂದರು.

ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಸ್ವಂತ ಗಣಿಯನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಎಂಪಿಎಂ ಕಾರ್ಖಾನೆಯ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಸರ್ಕಾರ ನಗರದ ಅಭಿವೃದ್ಧಿಗೆ ರೂ 250ಕೋಟಿ ರೂಪಾಯಿ ಅನುದಾನವನ್ನು ನಗರಸಭೆಗೆ ನೀಡಿದೆ. ಶಿವಮೊಗ್ಗದ ಚಹರೆಯನ್ನು ಸರ್ಕಾರ ಬದಲಿಸಿದೆ. ಆದರೆ, ಬಡವರಿಗೆ ನೆಲೆಯನ್ನು, ನೆರಳನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿ.

ನೂರಾರು ಎಕರೆ ಜಮೀನನ್ನು ಕೈಗಾರಿಕೆಗಳ ಅಭಿವೃದ್ಧಿಗೆ ನೀಡಲಾಗಿದೆ. ಬಡವರ ನೆಲೆಗಾಗಿ ಅವರಿಗೆ ನಿವೇಶನ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡಲಿ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ಚರಪ್ಪ ಅವರಿಗೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್ ಮಾತನಾಡಿ ಕೊಳಚೆ ಪ್ರದೇಶದ ನಿವಾಸಿಗಾಳಿಗೆ ನಿವೇಶನ ಹಕ್ಕು ಪತ್ರವನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ. ವಿಮಾನನಿಲ್ದಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲಾಗುವುದು. ಸಹ್ಯಾದ್ರಿ ಕಾಲೇಜಿನಿಂದ ತುಂಗಾನದಿ ಸೇತುವೆವರೆಗಿನ ಬಿ.ಎಚ್. ರಸ್ತೆ ಹಾಗೂ ತೀರ್ಥಹಳ್ಳಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಗಾಂಧಿ ಪಾರ್ಕ್ ಉದ್ಘಾಟನೆ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮದ ನಂತರ ಕುವೆಂಪು ರಂಗಮಂದಿರದಿಂದ ಕಾಲ್ನಡಿಗೆಯಲ್ಲಿ ಗಾಂಧಿಪಾರ್ಕ್ಗೆ ತೆರಳಿ, ಪಾರ್ಕ್ ಉದ್ಘಾಟನೆ ಮಾಡಿದರು. ಪಾರ್ಕ್ನಲ್ಲಿ ನಿರ್ಮಿಸಿರುವ ಸಂಗೀತ ಕಾರಂಜಿ ವೀಕ್ಷಿಸಿದರು, ಗಾಂಧಿ ಪಾರ್ಕ್ನ್ನು ಮುಖಂಡರೊಂದಿಗೆ ರೈಲಿನಲ್ಲಿ ಒಂದು ಸುತ್ತು ಹಾಕಿದರು.

ಶಾಸಕ ಕೆ.ಜಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, `ಸೂಡಾ~ ಅಧ್ಯಕ್ಷ ಎಸ್. ದತ್ತಾತ್ರಿ, ನಗರಸಭೆ ಉಪಾಧ್ಯಕ್ಷ ಎಸ್. ರಮೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಸುಂದರಂ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ್, ನಗರಸಭೆ ಆಯುಕ್ತ ಪಿ.ಜೆ. ರಮೇಶ್, ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್ ಉಪಸ್ಥಿತರಿದ್ದರು. ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.