ಯಾದಗಿರಿ: ನಗರಸಭೆಯ ಆಸ್ತಿಗಳಿಂದ ಬರಬಹುದಾದ ಆದಾಯ ಸರಿಯಾಗಿ ನಿಗದಿ ಮಾಡದೇ ಇರುವುದರಿಂದ ಕೊರತೆ ಬಜೆಟ್ ಮಂಡಿಸುವಂತಾಗಿದೆ. ಇದರಲ್ಲಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ನಗರಸಭೆ ಅಧ್ಯಕ್ಷರು ಅಧಿಕಾರಿಗಳ ಮೇಲೆ ನಿಯಂತ್ರಣ ಹೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ನಗರಸಭೆಯ ಪ್ರತಿಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡನೆಯ ನಂತರ ಮಾತನಾಡಿದ ಕಾಂಗ್ರೆಸ್ ಸದಸ್ಯ ಬಸವರಾಜ ಜೈನ್, 42 ಸಿಬ್ಬಂದಿ ಹಾಗೂ 60 ದಿನಗೂಲಿ ನೌಕರರನ್ನು ಇಟ್ಟುಕೊಂಡು ಏನು ಕೆಲಸ ಮಾಡುತ್ತೀರಿ. ನಗರಸಭೆಯ ಆದಾಯದಲ್ಲಿ ಕೊರತೆ ಎದುರಾಗಿದೆ. ಅಧಿಕಾರಿಗಳು, ಸಿಬ್ಬಂದಿ ಮೇಲೆ ನಿಯಂತ್ರಣ ಇಲ್ಲದಿದ್ದರೆ ಅಧ್ಯಕ್ಷರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಆಡಳಿತದ ಬಗ್ಗೆ ಕಾಳಜಿ ಇಲ್ಲ. ನಗರಸಭೆ ಆದಾಯದಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಕೊರತೆ ಉಂಟಾಗಿದೆ. ನಗರಸಭೆಗೆ ಸರ್ಕಾರದ ಯೋಜನೆಗಳ ಶೇ 60ರಷ್ಟು ಅನುದಾನ ಬಂದಿಲ್ಲ. ನಿರೀಕ್ಷೆಯಂತೆ ನೀವು ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಪೌರಾಯುಕ್ತ ಖಾಜಾ ಮೈನೋದ್ದೀನ್, ಸರ್ಕಾರ ಯೋಜನೆಗಳಿಗೆ ನಿಗದಿ ಮಾಡಿದಷ್ಟು ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದರು.

ಕಟ್ಟಡದ ಬಾಡಿಗೆಯನ್ನು ಸರಿಯಾಗಿ ನಿಗದಿಪಡಿಸುವಲ್ಲಿಯೂ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದು, ಇದರಿಂದ ನಗರಸಭೆ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಅಲ್ಲದೇ ನಗರಸಭೆಯ ಆಸ್ತಿಗಳ ಮಾರಾಟದಿಂದ ಬರುವ ಆದಾಯದ ಬಗ್ಗೆ ಬಜೆಟ್ನಲ್ಲಿ ಸ್ಪಷ್ಟತೆ ಇಲ್ಲ ಎಂದು ಹೇಳಿದರು.

ಒಳಚರಂಡಿ ಯೋಜನೆಯಿಂದ ನಗರದಲ್ಲಿ ಸಾರ್ವಜನಿಕರಿಗೆ ಹಲವು ತೊಂದರೆಗಳಾಗುತ್ತಿವೆ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಆಗುತ್ತಿಲ್ಲ. ಎಲ್ಲೆಂದರಲ್ಲಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಮ್ಯಾನ್ಹೋಲ್ಗಳನ್ನು ನಿರ್ಮಿಸಲಾಗಿದ್ದರೂ, ಅವುಗಳಿಗೆ ಕ್ಯೂರಿಂಗ್ ಮಾಡದೇ ಮುಚ್ಚಲಾಗುತ್ತದೆ ಎಂದು ಸದಸ್ಯ ಮರೆಪ್ಪ ಚಟ್ಟೇರಕರ್ ಆರೋಪಿಸಿದರು.

ಸದಸ್ಯರೇ ಇಷ್ಟೆಲ್ಲ ಆರೋಪ ಮಾಡುತ್ತಿದ್ದಾರೆ. ಒಳಚರಂಡಿ ಕಾಮಗಾರಿ ಪರಿಶೀಲಿಸಿ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಸದಸ್ಯ ಬಸವರಾಜ ಜೈನ್ ಒತ್ತಾಯಿಸಿದರು.

ಅಧ್ಯಕ್ಷ ಮಹ್ಮದ್ ಇಸಾಕ್ ಮಾತನಾಡಿ, ಯೋಜನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಸೂಚಿಸಿದರೂ ಪೌರಾಯುಕ್ತರು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದಿದ್ದರೆ ರಾಜೀನಾಮೆ ನೀಡಿ ಎಂದು ಸದಸ್ಯ ಜೈನ್ ಮತ್ತೊಮ್ಮೆ ಆಗ್ರಹಿಸಿದರು.
ನಗರಸಭೆ ಉಪಾಧ್ಯಕ್ಷೆ ರಾಚಮ್ಮ ಅನಪೂರ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣರಾವ ಚವ್ಹಾಣ, ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ರೂ 2.80 ಕೋಟಿ ಕೊರತೆ ಬಜೆಟ್ ಮಂಡನೆ
ಯಾದಗಿರಿ: ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ 2014–-15 ನೇ ಸಾಲಿಗೆ ರೂ 2.80 ಕೋಟಿ ಕೊರತೆ ಬಜೆಟ್ ಮಂಡಿಸಲಾಗಿದೆ.

ಇಲ್ಲಿಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಸೋಮವಾರ ಬಜೆಟ್ ಮಂಡಿಸಿದ ಲೆಕ್ಕ ಅಧೀಕ್ಷಕ ಟಿ.ವೆಂಕಟೇಶ, ಈ ವರ್ಷ ರೂ59.26 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದ್ದು, ರೂ62.06 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರಿಂದಾಗಿ ರೂ 2.80 ಕೋಟಿ ಕೊರತೆ ಎದುರಾಗಲಿದೆ ಎಂದರು.

ರಾಜಸ್ವ ಸ್ವೀಕೃತಿಗಳಿಂದ ರೂ 10.01 ಕೋಟಿ, ಬಂಡವಾಳ ಸ್ವೀಕೃತಿಗಳಿಂದ ರೂ1.60 ಕೋಟಿ, ಅಸಾಧಾರಣ ಸ್ವೀಕೃತಿಗಳಿಂದ ರೂ 47.64 ಕೋಟಿ, ಆದಾಯವನ್ನು ನಿರೀಕ್ಷಿಸಲಾಗಿದೆ. ಇನ್ನು ರಾಜಸ್ವ ಪಾವತಿಗೆ ರೂ 7.84 ಕೋಟಿ, ಬಂಡವಾಳ ಪಾವತಿಗೆ ರೂ 6.77 ಕೋಟಿ, ಅಸಾಧಾರಣ ಪಾವತಿಗಾಗಿ ರೂ47.45 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ ಎಂದು ವಿವರಿಸಿದರು.

ಎಸ್ಎಫ್ಸಿ ವೇತನ ಅನುದಾನದಿಂದ ರೂ 45 ಲಕ್ಷ, ಕಟ್ಟಡ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ ರೂ 4.58 ಲಕ್ಷ, ಕಟ್ಟಡ ಕಾಯ್ದೆಗಳಿಗೆ ಸಂಬಂಧಿಸಿದ ಶುಲ್ಕಗಳಿಂದ ರೂ 10.25 ಲಕ್ಷ, ಅಭಿವೃದ್ಧಿ ಶುಲ್ಕಗಳಿಂದ ರೂ 44.69 ಲಕ್ಷ, ದಿನಗೂಲಿ ನೌಕರರ ವೇತನ ಅನುದಾನದಿಂದ ರೂ 60 ಲಕ್ಷ, ಎಂಜಿನಿಯರ್ ವೇತನ ಅನುದಾನದಿಂದ ರೂ 15 ಲಕ್ಷ, ಪೌರ ಕಾರ್ಮಿಕರ ವೇತನ ಅನುದಾನದಿಂದ ರೂ 95 ಲಕ್ಷ, ಘನತ್ಯಾಜ್ಯ ನಿರ್ವಹಣಾ ಶುಲ್ಕದಿಂದ ರೂ 1.20 ಕೋಟಿ, ನೀರು ಮತ್ತು ಒಳಚರಂಡಿ ಬಳಕೆದಾರರ ಶುಲ್ಕದಿಂದ ರೂ22.52 ಲಕ್ಷ, ವಿದ್ಯುತ್ಗೆ ಸಂಬಂಧಿಸಿದ ಅನುದಾನದಿಂದ ರೂ 96.44 ಲಕ್ಷ, ಆಸ್ತಿ ತೆರಿಗೆಯಿಂದ ರೂ 71.99 ಲಕ್ಷ, ಖಾತೆ ಬದಲಾವಣೆ ಶುಲ್ಕದಿಂದ ರೂ 66.36 ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದೆ.

ವೇತನ ಹಾಗೂ ಭತ್ಯೆಗಳಿಗೆ ರೂ 35.23 ಲಕ್ಷ, ಕೂಲಿಗಾಗಿ ರೂ 29.30 ಲಕ್ಷ, ಸೇವಾಂತ್ಯ ಹಾಗೂ ಪಿಂಚಣಿ ಸೌಲಭ್ಯಕ್ಕಾಗಿ ರೂ 13.03 ಲಕ್ಷ, ದೇಣಿಗೆಗೆ ರೂ 20 ಲಕ್ಷ, ಬೀದಿ ದೀಪಗಳಿಗೆ ರೂ1.50 ಕೋಟಿ, ಹೊರಗುತ್ತಿಗೆ ಕಾರ್ಯಾಚರಣೆ ವೆಚ್ಚಗಳಿಗಾಗಿ ರೂ 1.20 ಕೋಟಿ, ಕಾರ್ಯಕ್ರಮ ವೆಚ್ಚಕ್ಕಾಗಿ ರೂ 30 ಲಕ್ಷ, ಪಾದಚಾರಿ ಮಾರ್ಗಗಳಿಗೆ ರೂ 93.02 ಲಕ್ಷ, ರಸ್ತೆ ಬದಿಯ ಚರಂಡಿ ನಿರ್ಮಾಣಕ್ಕೆ ರೂ 96.96, ಉದ್ಯಾನ, ತೋಟಗಳಿಗೆ ರೂ20 ಲಕ್ಷ, ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.