ಬೆಂಗಳೂರು: `ನಗರಾಭಿವೃದ್ಧಿ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿರುವುದರಿಂದ ಇದಕ್ಕಾಗಿ ಸುಸ್ಥಿರ ಯೋಜನೆ ರೂಪಿಸಬೇಕು~ ಎಂದು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ಕುಮಾರ್ ಹೇಳಿದರು.

ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ (ಐಇಐ) ಸಂಸ್ಥೆಯು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಾಸ್ತುಶಿಲ್ಪ ಎಂಜಿನಿಯರ್ಗಳ 27ನೇ ರಾಷ್ಟ್ರೀಯ ಸಮ್ಮೇಳನದಲ್ಲಿ `ಸುಸ್ಥಿರ ನಗರಾಭಿವೃದ್ಧಿ ಸವಾಲು ಮತ್ತು ಅವಕಾಶಗಳು~ ವಿಷಯ ಕುರಿತು ಅವರು ಮಾತನಾಡಿದರು.

ಕಡಿಮೆ ವೆಚ್ಚದ ಗೃಹ ನಿರ್ಮಾಣ ಕಾರ್ಯದಲ್ಲಿ ಖಾಸಗಿ ಸಂಸ್ಥೆಗಳು ಹೆಚ್ಚು ತೊಡಗಿಸಿಕೊಂಡಿವೆ. ನಗರಗಳಲ್ಲಿ ಕೊಳಚೆ ಪ್ರದೇಶಗಳು ನಿರ್ಮಾಣವಾಗದಂತೆ ನೋಡಿಕೊಳ್ಳಲು ಬಡವರಿಗೆ ಸೂರು ಒದಗಿಸುವ ಕೆಲಸವನ್ನು ಮಾಡಬೇಕು. ಸುಸ್ಥಿರ ಅಭಿವೃದ್ಧಿಯ ಮೂಲಕ ಜಾಗತಿಕ ತಾಪಮಾನದ ದುಷ್ಪರಿಣಾಮಗಳನ್ನು ತಡೆಯಬೇಕು ಎಂದು ಅವರು ಹೇಳಿದರು.

`ಅಭಿವೃದ್ಧಿ ಕಾರ್ಯ ನಡೆದ ಹಾಗೆ ಸಹಜವಾಗಿಯೇ ನೈಸರ್ಗಿಕ ಸಂಪನ್ಮೂಲಗಳು ಕಡಿಮೆಯಾಗುತ್ತವೆ. ಆದ್ದರಿಂದ ತತ್ವಗಳ ಆಧಾರದ ಮೇಲೆ ನಗರಗಳ ಅಭಿವೃದ್ಧಿ ಮಾಡಬೇಕು. ಸಾಮಾಜಿಕ, ಆರ್ಥಿಕ ಮತ್ತು ಭೌಗೋಳಿಕ ಅಭಿವೃದ್ಧಿ ಒಟ್ಟಾಗಿ ಆಗಬೇಕು. ನಮ್ಮಲ್ಲಿ ಯೋಜನೆರಹಿತ ಅಭಿವೃದ್ಧಿಯಾಗುತ್ತಿದೆ. ಹೀಗೆ ಆದಾಗ ಋಣಾತ್ಮಕ ಅಂಶಗಳು ಹೆಚ್ಚಾಗಿ ನೈಸರ್ಗಿಕ ಸಂಪನ್ಮೂಲ ಕಡಿಮೆಯಾಗಿ ಸಮಸ್ಯೆಗಳು ಉದ್ಭವಿಸುತ್ತವೆ.

ಪರಿಸರಕ್ಕೂ ಧಕ್ಕೆಯಾಗುತ್ತದೆ~ ಎಂದು ಮುಖ್ಯಮಂತ್ರಿ ಅವರ ಸಲಹೆಗಾರ (ನಗರಾಭಿವೃದ್ಧಿ) ಡಾ.ಎ.ರವೀಂದ್ರ ಹೇಳಿದರು.ನಗರೀಕರಣದಲ್ಲಿ ಸಂಚಾರ ದಟ್ಟಣೆ ಮತ್ತಿತರ ಸಮಸ್ಯೆಗಳು ಉದ್ಭವಿಸುತ್ತವೆ. ನಮ್ಮಲ್ಲಿ ಸಂಚಾರ ಸಮಸ್ಯೆ ಇದ್ದರೂ ಆಟೊಮೊಬೈಲ್ ಕ್ಷೇತ್ರಕ್ಕೆ ಆದ್ಯತೆ ನೀಡುತ್ತೇವೆ. ಮೂರನೇ ಎರಡು ಭಾಗದಷ್ಟು ಇಂಧನ ನಗರ ಪ್ರದೇಶಗಳಲ್ಲಿ ಬಳಕೆಯಾಗುತ್ತಿದೆ. ನಮ್ಮಲ್ಲಿ ಸಾರ್ವಜನಿಕ ವಾಹನಗಳಿಗಿಂತ ಖಾಸಗಿ ವಾಹನಗಳ ಸಂಖ್ಯೆ ಮತ್ತು ಬಳಕೆ ಹೆಚ್ಚಾಗುತ್ತಿದೆ.

ಸ್ವಿಟ್ಜರ್ಲೆಂಡ್ನಲ್ಲಿ ಕಾರು ಸವಾರನಿಗಿಂತ ಸೈಕಲ್ ಸವಾರ ಬೇಗನೆ ನಿರ್ದಿಷ್ಟ ಪ್ರದೇಶ ತಲುಪಲು ಅನುಕೂಲ ಮಾಡಿಕೊಡಲಾಗಿದೆ. ಪಾದಚಾರಿಗಳ ಓಡಾಟಕ್ಕೂ ಅಧಿಕ ಸೌಲಭ್ಯ ನೀಡುವ ಮೂಲಕ ಬೆಂಬಲಿಸಲಾಗುತ್ತಿದೆ. ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು ಇದರ ಉದ್ದೇಶ ಎಂದರು.

ನೀರಿನ ಪುನರ್ ಬಳಕೆಗೆ ಸಂಬಂಧಿಸಿದಂತೆ ಮಳೆ ನೀರು ಸಂಗ್ರಹಣೆಯನ್ನು ಬೆಂಗಳೂರಿನಲ್ಲಿ ಕಡ್ಡಾಯ ಮಾಡಲಾಯಿತು. ಅಳವಡಿಕೆಗೆ ಕೊನೆಯ ದಿನಾಂಕವನ್ನು ನಿಗದಿ ಮಾಡಲಾಯಿತು. ಎಲ್ಲರೂ ಅಳವಡಿಸಿಕೊಳ್ಳದ ಕಾರಣ ದಿನಾಂಕವನ್ನು ಮುಂದೂಡಲಾಗಿದೆ. ಆದರೆ, ಜನರಿಗೆ ಸ್ವತಃ ನೀರಿನ ಮಹತ್ವ ತಿಳಿಯಬೇಕು. ಈ ಬಗ್ಗೆ ಜಾಗೃತಿ ಮತ್ತು ಕಾಳಜಿ ಮೂಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಹಿರಿಯ ಎಂಜಿನಿಯರ್ಗಳಾದ ವಿ.ಎಚ್.ಆರ್.ನಾಯ್ಡು, ಪ್ರೊ.ಎಲ್.ಆರ್.ವಾಗ್ಲೆ, ಕಿರಣ್ಶಂಕರ್ ಮತ್ತು ಪ್ರೊ.ಎನ್.ಎಸ್.ನಾಡಿಗರ್ ಅವರನ್ನು ಸನ್ಮಾನಿಸಲಾಯಿತು. ಐಇಐ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಗೋಪಾಲಕೃಷ್ಣನ್, ಸಮ್ಮೇಳನದ ಸಂಚಾಲಕ ಡಾ.ಎ.ಎಸ್.ಕೋದಂಡಪಾಣಿ, ಐಇಐ ವಾಸ್ತುಶಿಲ್ಪ ವಿಭಾಗದ ಮುಖ್ಯಸ್ಥ ಪ್ರೊ.ಜಿತೇಂದ್ರಸಿಂಗ್, ಗೌರವ ಕಾರ್ಯದರ್ಶಿ ಜಿ.ಶ್ರೀಕಾಂತ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.