ಮಂಗಳವಾರ, ಜನವರಿ 21, 2020
27 °C

ನದಿಯಲ್ಲಿ ಭಾರತೀಯ ಮಹಿಳೆ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್‌): ಬ್ರಾಡ್‌ಪೋರ್ಡ್‌ನ ನದಿಯಲ್ಲಿ ಶುಕ್ರವಾರ ಮೃತದೇಹವೊಂದು ಪತ್ತೆಯಾಗಿದ್ದು, ಈ ಮೃತದೇಹ ಇತ್ತೀಚೆಗೆ ಕಾಣೆಯಾಗಿರುವ ಭಾರತೀಯ ಮೂಲದ ಮಹಿಳೆಯದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಐರ್ ನದಿಯಲ್ಲಿ ಮಧ್ಯಾಹ್ನ 1.35ರ ಸುಮಾರಿಗೆ ಪತ್ತೆಯಾಗಿರುವ ಈ ಮೃತದೇಹ, ಕಳೆದ ಅಕ್ಟೋಬರ್‌ 23ರಿಂದ ಕಾಣೆಯಾಗಿರುವ ಭಾರತೀಯ ಮೂಲದ ಮಹಿಳೆ ಸೀಮ್‌ಬರ್ಜೀತ್‌ ಕೌರ್  (35) ಅವರದ್ದಾಗಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ ಎಂದು  ಟೆಲಿಗ್ರಾಫ್ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)