ಹುಬ್ಬಳ್ಳಿ: ’ವಿಶ್ವ ಕನ್ನಡ ಸಮ್ಮೇಳನ ಕೇವಲ ಬೆಳಗಾವಿ ಸಮ್ಮೇಳನ ಅಲ್ಲ, ರಾಜಕೀಯ ಸಮ್ಮೇಳನವೂ ಅಲ್ಲ. ಸಮಗ್ರ ಕನ್ನಡಿಗರ ಸಮ್ಮೇಳನ. ಆದರೆ ಸಂಘಟಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಯಾರ ಅಭಿಪ್ರಾಯವನ್ನೂ ಕೇಳಲಿಲ್ಲ. ಹೀಗಾಗಿ ಸಮ್ಮೇಳನದ ’ಅಜೆಂಡಾ’ ಏನು ಎಂಬುದೇ ಗೊತ್ತಾಗುತ್ತಿಲ್ಲ’

ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತಿದು. ’ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಬಂಧಿಸಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿದಂತೆ ರಾಜ್ಯದ ಪ್ರಮುಖ ಸಂಘ-ಸಂಸ್ಥೆಗಳಿಗೆ ಆಹ್ವಾನವನ್ನೇ ನೀಡಲಿಲ್ಲ.

ತಮಗೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ ಆಹ್ವಾನ ಬಂದಿದ್ದರೂ ಹೇಗೆ ಬರಬೇಕು ಎಂಬುದನ್ನು ತಿಳಿಸಿಲ್ಲ. ಕೊಟ್ಟು ಕರೆದುಕೊಂಡು ಹೋದರೆ ಭಾಗವಹಿಸುತ್ತೇನೆ’ ಎಂದು ತಿಳಿಸಿದರು.’ಸಮ್ಮೇಳನದ ಬಗ್ಗೆ ನನ್ನದೇನೂ ತಕರಾರು ಇಲ್ಲ. ನಾರಾಯಣಮೂರ್ತಿಯವರನ್ನು ಕರೆದದ್ದಕ್ಕೆ ಭಿನ್ನಾಭಿಪ್ರಾಯವೂ ಇಲ್ಲ. ಅವರ ಬದಲಿಗೆ ಬೇರೆಯವರು ಬಂದರೆ ಸಮ್ಮೇಳನ ಬೇರೆಯದಾಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.