ಉಡುಪಿ: `ನಮಸ್ಕಾರ ತಾಯಿ.... ನಾನ್ಯಾರು ಗೊತ್ತಾ ಅಮ್ಮಾ...~
ಹೀಗೆಂದು ತಮ್ಮ ಮಾಮೂಲಿ ಶೈಲಿಯಲ್ಲಿ ಪರಿಚಯಿಸಿಕೊಂಡಿದ್ದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ.

ಬ್ರಹ್ಮಗಿರಿಯ ದಲಿತರ ಕಾಲೋನಿ ಕಾಡಬೆಟ್ಟುವಿನಲ್ಲಿ ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಿದರು. ಬ್ರಹ್ಮಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಪಕ್ಷದ ಕಾರ್ಯಕರ್ತರು, ಶಾಸಕ ಅಭಯಚಂದ್ರ ಜೈನ್ ಮತ್ತಿತತರ ಮುಖಂಡರೊಂದಿಗೆ ಅಲ್ಲಿಗೆ ತೆರಳಿದ ಅವರು ತಮ್ಮ ಎಂದಿನ ಶೈಲಿಯಲ್ಲಿ `ಕೈ~ ಗುರುತಿಗೇ ಮತ ಹಾಕಬೇಕು ಆಯ್ತಾ...~ ಎಂದು ಮತದಾರರಲ್ಲಿ ವಿನಂತಿಸಿದರು.

`ಈ ಭಾಗದಲ್ಲಿ ಸಿದ್ದರಾಮಯ್ಯ ಅಷ್ಟಾಗಿ ಪರಿಚಿತರಲ್ಲದ ಕಾರಣ ಅವರು ನಾನ್ಯಾರು ಗೊತ್ತಾ ಅಮ್ಮಾ ಎಂದು ಪರಿಚಯಿಸಿಕೊಳ್ಳುತ್ತಲೇ ಸಾಗಿದರು.

`ಇಲ್ಲಿ ವಾಸಿಸಲು ಪ್ರಾರಂಭಿಸಿ ಹತ್ತಾರು ವರ್ಷಗಳಾದರೂ ಈವರೆಗೂ ಹಕ್ಕುಪತ್ರ ಸಿಕ್ಕಿಲ್ಲ~ ಸ್ಥಳೀಯರು ದೂರಿದರು. ಅದಕ್ಕೆ ಸ್ಪಂದಿಸಿ ಸಿದ್ದರಾಮಯ್ಯ, `ನೀವು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೇ ಮತ ಹಾಕಬೇಕು, ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಹಕ್ಕುಪತ್ರ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ~ ಎಂದು ಭರವಸೆ ನೀಡಿದರು.

ಸಿದ್ದರಾಮಯ್ಯ ಅವರನ್ನು ಕಂಡು ಕೆಲವರು `ತಾವು ನಿಮ್ಮ ಅಭಿಮಾನಿಗಳು~ ಎಂದು ಹೇಳಿಕೊಂಡರು. ಈ ಹಿಂದೆ ಕಾಂಗ್ರೆಸ್ನವರು ನಡೆಸಿದ ಬಳ್ಳಾರಿ ಪಾದಯಾತ್ರೆಯಲ್ಲಿ ಕೂಡ ತಾವು ಪಾಲ್ಗೊಂಡಿದ್ದಾಗಿ ಕೆಲವರು ಹೇಳಿಕೊಂಡರು. ಕೆಲವು ನಿಮಿಷ ಮತಯಾಚಿಸಿದ ಸಿದ್ದರಾಮಯ್ಯ ಅಲ್ಲಿಂದ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.