ಬುಧವಾರ, ಮೇ 25, 2022
24 °C

ನಮ್ಮ ಮೆಟ್ರೊ ನಮ್ಮ ಮಾತು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಮೆಟ್ರೊ ನಮ್ಮ ಮಾತು...

ಬೆಂಗಳೂರಿನ ಸೌಂದರ್ಯ ಕಾಪಾಡಿಕೊಳ್ಳಿ

`ಮಧ್ಯಪ್ರದೇಶದವನಾದ ನನ್ನ ದೃಷ್ಟಿಯಲ್ಲಿ ಬೆಂಗಳೂರು ಸುಂದರ ನಗರ. ಕರ್ನಾಟಕ ಉತ್ತಮ ರಾಜ್ಯ. ಬೆಳವಣಿಗೆಯ ಭರಾಟೆಯಲ್ಲಿ ಬೆಂಗಳೂರಿನ ಸೌಂದರ್ಯ ಹಾಳಾಗದಂತೆ ಎಚ್ಚರ ವಹಿಸಿ. ವ್ಯವಸ್ಥಿತವಾಗಿ ವೈಜ್ಞಾನಿಕವಾಗಿ ಬೆಳವಣಿಗೆ ಆಗುವಂತೆ ನೋಡಿಕೊಳ್ಳಿ.~

- ಕಮಲ್‌ನಾಥ್, ಕೇಂದ್ರ ನಗರಾಭಿವೃದ್ಧಿ ಸಚಿವಗರಿಷ್ಠ ಪ್ರಯೋಜನ ಪಡೆದುಕೊಳ್ಳಿ

`ನಾಗರಿಕರು ಸುರಕ್ಷತೆಗೆ ಸಂಬಂಧಿಸಿದಂತೆ ಮೆಟ್ರೊ ನಿಗಮ ವಿಧಿಸಿರುವ ನಿಬಂಧನೆಗಳನ್ನು ಪಾಲಿಸಬೇಕು. ನಿಲ್ದಾಣ ಮತ್ತು ರೈಲುಗಳ ಒಳಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮೆಟ್ರೊದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬೇಕು~

- ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿಪ್ರಾಣತೆತ್ತ ಕಾರ್ಮಿಕರಿಗೆ ನಮನ

ಮೆಟ್ರೊ ಕನಸು ನನಸಾಗಲು ಹಗಲು ರಾತ್ರಿ ದುಡಿದಿದ್ದಲ್ಲದೇ ತಮ್ಮ ಪ್ರಾಣವನ್ನೂ ಕಳೆದುಕೊಂಡ ಕಾರ್ಮಿಕರಿಗೆ ನನ್ನ ಅನಂತ ನಮನಗಳು.

- ಎಸ್.ಸುರೇಶಕುಮಾರ್, ಕಾನೂನು ಸಚಿವ

ಮೆಟ್ರೊ ಬಳಕೆ ಹೆಚ್ಚಾಗಲಿ

ದ್ವಿಚಕ್ರ ವಾಹನ, ಕಾರುಗಳ ಬಳಕೆಯನ್ನು ಸಾಧ್ಯವಾದ ಮಟ್ಟಿಗೆ ಕಡಿಮೆ ಮಾಡಬೇಕು. ಮೆಟ್ರೊ ಖಾಸಗಿ ವಾಹನದಷ್ಟೇ ಆರಾಮದಾಯಕ ಅನುಭವ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಮೆಟ್ರೊ ಬಳಕೆಗೆ ಹೆಚ್ಚು ಜನ ಮುಂದಾಗಬೇಕು.

- ಜ್ಯೋತಿ ಪ್ರಕಾಶ್ ಮಿರ್ಜಿ, ನಗರ ಪೊಲೀಸ್ ಕಮಿಷನರ್ನಮ್ಮ ಮೆಟ್ರೊ ನಮ್ಮ ಆಸ್ತಿ. ಅದರ ರಕ್ಷಣೆ ನಮ್ಮ ಕರ್ತವ್ಯ. ಸಾರ್ವಜನಿಕರು ಯಾವುದೇ ತೊಂದರೆ ಉಂಟಾಗದ ರೀತಿಯಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕಿದೆ.

- ಸುಧಾಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆಕೊನೆಗೂ ಮೆಟ್ರೊ ಸಂಚಾರ ಆರಂಭವಾಗಿರುವುದು ಖುಷಿ ತಂದಿದೆ. ಆದರೆ ಆಗಬೇಕಾದ ಕಾರ್ಯ ಬಹಳಷ್ಟಿದೆ. ಸರ್ಕಾರ ಆದಷ್ಟು ಬೇಗ ಮೆಟ್ರೊ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.

- ನೆ.ಲ.ನರೇಂದ್ರಬಾಬು, ಶಾಸಕಮೆಟ್ರೊ ರೈಲು ಎಲ್ಲ ಮಾರ್ಗಗಳಲ್ಲಿ ಸಂಚರಿಸುವಂತಾದರೆ ಸುಮಾರು 15 ಲಕ್ಷ ಜನ ರಸ್ತೆಯಲ್ಲಿ ಸಂಚರಿಸುವುದು ತಪ್ಪುತ್ತದೆ. ಇಬ್ಬರಿಗೆ ಒಂದು ವಾಹನ ಎಂದು ಅಂದಾಜಿಸಿದರೂ ಸುಮಾರು 7 ಲಕ್ಷ ವಾಹನಗಳ ಬಳಕೆ ಕಡಿಮೆಯಾಗುತ್ತದೆ. ಮೆಟ್ರೊ ಬಳಸುವ ಮೂಲಕ ಜನರು ಸಂಚಾರ ದಟ್ಟಣೆ ಕಡಿಮೆ ಮಾಡಬೇಕು.

- ಪ್ರವೀಣ್ ಸೂದ್, ಪೊಲೀಸ್ ಕಂಪ್ಯೂಟರ್ ವಿಭಾಗದ ಮುಖ್ಯಸ್ಥದೆಹಲಿಯಲ್ಲಿ ಕಂಡಿದ್ದ ಮೆಟ್ರೊ ರೈಲು ನಮ್ಮ ಊರಿಗೆ ಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನನ್ನ ಕೃತಜ್ಞತೆಗಳು.

- ಸೈಯದ್ ಯೂಸೂಫ್, ಶಿವಾಜಿನಗರದ ವ್ಯಾಪಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.