ನರಸಿಂಹರಾಜಪುರ: ಬೂತ್ ಸಮಿತಿ ಚುನಾವಣೆ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ನರಸಿಂಹರಾಜಪುರ: ಬೂತ್ ಸಮಿತಿ ಚುನಾವಣೆ

Published:
Updated:

ನರಸಿಂಹರಾಜಪುರ: ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಹಾಗೂ ಪಕ್ಷದಲ್ಲಿ ಆಂತರಿಕ ಪ್ರಜಾ ಪ್ರಭುತ್ವ ಬೆಳೆಸುವ ರಾಹುಲ್ ಗಾಂಧಿ ಅವರ ಕನಸಿನಂತೆ ಯುವ ಕಾಂಗ್ರೆಸ್‌ನ ಬೂತ್ ಮಟ್ಟದ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾ ಗು ತ್ತಿದೆ ಎಂದು ಯುವ ಕಾಂಗ್ರೆಸ್  ಚುನಾವಣಾಧಿಕಾರಿ ರಾಮ ರಾವ್ ತಿಳಿಸಿದರು.ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಯುವ ಕಾಂಗ್ರೆಸ್‌ಗೆ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಂದರ್ಭ ಅವರು ಮಾತ ನಾಡಿದರು. ಈ ಚುನಾವಣೆಯಲ್ಲಿ ಆಯ್ಕೆ ಯಾದವರು ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆ ಪದಾಧಿಕಾರಿಗಳನ್ನು ಆಯ್ಕೆ ಮಾಡ ಬಹುದು ಹಾಗೂ ಚುನಾವಣೆಗೂ ಸ್ಪರ್ಧಿಸ ಬಹುದಾಗಿದೆ  ಎಂದರು.ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಸುಬ್ಬರಾಜು, ದುರ್ಗರಾಜು, ತಾಲ್ಲೂಕು ಘಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶು ಮಂತ್, ಎಐಸಿಸಿ ಸದಸ್ಯೆ ಬಿ.ಸಿ. ಗೀತಾ, ಅಲ್ಪಸಂಖ್ಯಾತರ ವಿಭಾಗದ ಟಿ.ವಿ.ರಾಜು, ತಾಲ್ಲೂಕು ಕಾಂಗ್ರೆಸ್ ಘಟಕದ ಮಹಿಳಾ ಅಧ್ಯಕ್ಷೆ ಮೀನಾಕ್ಷಿ ಕಾಂತ್‌ರಾಜ್,ಮುಖಂ ಡರಾದ ಕೆ.ಅಬುಬಕರ್, ಬಿ.ಎಸ್.ಸುಬ್ರಹ್ಮಣ್ಯ ಇದ್ದರು. ತಾಲ್ಲೂಕಿನ 45 ಬೂತ್‌ಗಳಿಂದ ತಲಾ ಒಂದು ಬೂತ್‌ನಿಂದ 5ಜನರಂತೆ 84 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು 875 ಸದಸ್ಯರು ಮತದಾನ ಮಾಡಿದರು.  

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry