ನವದೆಹಲಿ/ ಶ್ರೀನಗರ (ಪಿಟಿಐ):  ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ಗಡಿಯಿಂದ ದೇಶದೊಳಗೆ ನುಸಳಲು ಯತ್ನಿಸಿದ ನಾಲ್ವರು ಭಯೋತ್ಪಾದಕರನ್ನು ಕೊಂದು ಹುತಾತ್ಮರಾದ ಸೇನಾಪಡೆಯ ಯುವ ಲೆಫ್ಟಿನೆಂಟ್ ನವದೀಪ್ ಸಿಂಗ್ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ಸೇನಾ ಪ್ರಶಸ್ತಿ `ಅಶೋಕ ಚಕ್ರ~ ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮೂವರು ಸೇನಾಧಿಕಾರಿಗಳಿಗೆ ಎರಡನೇ ಅತ್ಯುನ್ನತ ಸೇನಾ ಪ್ರಶಸ್ತಿ `ಕೀರ್ತಿ ಚಕ್ರ~ವನ್ನು ನೀಡಲಾಗಿದೆ.

ಗ್ರೆನೇಡಿಯರ್ಸ್ ರೆಜಿಮೆಂಟ್ನ ಲೆಫ್ಟಿನೆಂಟ್ ಸುಶೀಲ್ ಖಜೂರಿಯಾ (ಮರೋಣತ್ತರ), 18 ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಲೆಫ್ಟಿನೆಂಟ್ ಕರ್ನಲ್ ಕಮಲದೀಪ್ ಸಿಂಗ್ ಮತ್ತು ರಜಪೂತ್ ರೈಫಲ್ಸ್ನ ಅಶುತೋಷ್ ಕುಮಾರ್ ಕೀರ್ತಿಚಕ್ರ ಪಡೆದ ಸೇನಾಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.