ಮಂಗಳವಾರ, ಮಾರ್ಚ್ 2, 2021
31 °C
ಒಟ್ಟು ₹95.77 ಲಕ್ಷ ವೆಚ್ಚ; ಮಾಹಿತಿ ಹಕ್ಕು ಕಾಯ್ದೆ ಅಡಿ ವಿವರ

ನಷ್ಟದಲ್ಲಿದ್ದರೂ 8 ಕಾರು ಖರೀದಿಸಿದ ಬಿಡಿಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಷ್ಟದಲ್ಲಿದ್ದರೂ 8 ಕಾರು ಖರೀದಿಸಿದ ಬಿಡಿಎ

ಬೆಂಗಳೂರು: ಈಗಾಗಲೇ ಆರ್ಥಿಕ ನಷ್ಟ ಎದುರಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎರಡು ವರ್ಷಗಳಲ್ಲಿ  ಒಟ್ಟು 8 ಕಾರುಗಳನ್ನು ಖರೀದಿಸಿದೆ. ಇದಕ್ಕಾಗಿ ಬಿಡಿಎ ಮಾಡಿರುವ ಒಟ್ಟು ವೆಚ್ಚ ₹ 95.77 ಲಕ್ಷ!ಸಾಯಿದತ್ತ ಎಂಬವರು 2014ರಿಂದ 2016 ಜುಲೈವರೆಗೆ  ಬಿಡಿಎ ಎಷ್ಟು ಕಾರುಗಳನ್ನು ಖರೀದಿಸಿದೆ ಎಂಬ ಬಗ್ಗೆ ಮಾಹಿತಿ ಹಕ್ಕಿನಡಿ ವಿವರಗಳನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಬಿಡಿಎ, ಎರಡು ವರ್ಷಗಳಲ್ಲಿ  ₹ 24.44 ಲಕ್ಷ ಬೆಲೆಯ ಇನೋವಾ ಕ್ರಿಸ್ಟ ಕಾರು ಸಹಿತ ಒಟ್ಟು 8 ಹೊಸ ಕಾರುಗಳನ್ನು ಖರೀದಿಸಲಾಗಿದೆ ಎಂದು ತಿಳಿಸಿದೆ.ಬಿಡಿಎಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರೇ ಅಧ್ಯಕ್ಷರಾಗಿರುತ್ತಾರೆ. ಅವರು ಬಿಡಿಎ ಕಚೇರಿಗೆ ಭೇಟಿ ನೀಡುವುದು ಅಪರೂಪಕ್ಕೊಮ್ಮೆ. ಅವರ ಬಳಿ  ಸರ್ಕಾರಿ ಕಾರು ಇರುತ್ತದೆ. ಆದರೂ, ಬಿಡಿಎ ವತಿಯಿಂದ ₹ 24.44 ಲಕ್ಷ ಮೌಲ್ಯದ ಇನೊವ ಕ್ರಿಸ್ಟ ಕಾರನ್ನು ಖರೀದಿಸಲಾಗಿದೆ.ಜಿ–ಕೆಟಗರಿ ನಿವೇಶನದ ಹಂಚಿಕೆ ಹಗರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಫಾರೂಕ್‌ ಸಮಿತಿ ಸಲುವಾಗಿ ಮೂರು ಟೊಯೋಟಾ ಇಟಿಯೋಸ್‌ ಕಾರುಗಳನ್ನು ಖರೀದಿಸಲಾಗಿದೆ. ಈ ಮೂರು ಕಾರುಗಳ  ಒಟ್ಟು ಬೆಲೆ ₹ 26.82.‘ಬೆಂಗಳೂರು ನಗರಾಭಿವೃದ್ಧಿ ಸಚಿವರ ಸಚಿವಾಲಯಕ್ಕಾಗಿ ₹ 18.93 ಲಕ್ಷ ಮೌಲ್ಯದ ಇನೊವಾ ಕಾರನ್ನು ಖರೀದಿಸಲಾಗಿದೆ.   ಸಚಿವರಿಗೆ ಪ್ರತ್ಯೇಕ ಸರ್ಕಾರಿ ಕಾರನ್ನು ಒದಗಿಸಲಾಗಿರುತ್ತದೆ. ಅಧಿಕಾರಿಗಳಿಗೆ ಈಗಾಗಲೇ ಕಾರುಗಳನ್ನು ಒದಗಿಸಲಾಗಿದೆ. ಹಾಗಿರುವಾಗ ಈ ಕಾರಿನ ಅವಶ್ಯಕತೆ ಇತ್ತೇ’ ಎಂದು  ಪ್ರಶ್ನಿಸುತ್ತಾರೆ ಅವರು.‘ಮುಖ್ಯಮಂತ್ರಿ ಕಚೇರಿಗೆ ಓಡಾಟ ಮಾಡುವ ಸಲುವಾಗಿ ₹ 7.23 ಲಕ್ಷ ಮೌಲ್ಯದ ಸ್ವಿಫ್ಟ್‌ ಡಿಸೈರ್‌ ಕಾರನ್ನು ಖರೀದಿಸಲಾಗಿದೆ. ಇದನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂದು ಗೊತ್ತಾಗುತ್ತಿಲ್ಲ’ ಎಂದರು.  ‘ಇಷ್ಟೊಂದು ಕಾರು ಖರೀದಿಸಿದ ಬಳಿಕವಾದರೂ ಸಾರ್ವಜನಿಕರಿಗೆ ಆಗಿರುವ ಪ್ರಯೋಜನವಾದರೂ ಏನು’ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.