ಬುಧವಾರ, ಜನವರಿ 22, 2020
18 °C

ನಾಗರಿಕ ಪರಮಾಣು ಬಾಧ್ಯತಾ ಕಾಯ್ದೆ: ಸ್ಪಷ್ಟನೆ ಕೋರಿದ ಅರೇವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನಾಗರಿಕ ಪರ ಮಾಣು ಬಾಧ್ಯತಾ ಕಾಯ್ದೆಯಲ್ಲಿನ ಕೆಲ ವಿಧಿಗಳಿಗೆ ಸಂಬಂಧಿಸಿದಂತೆ ಭಾರತದಿಂದ ಹೆಚ್ಚಿನ ವಿವರ ಕೇಳಿರು ವುದಾಗಿ ಜೈತಾಪುರದಲ್ಲಿ ಪರ ಮಾಣು ರಿಯಾಕ್ಟರ್‌ಗಳನ್ನು ಸ್ಥಾಪಿ ಸುತ್ತಿರುವ ಫ್ರಾನ್ಸ್‌ ಕಂಪೆನಿ ಅರೇವಾ ಹೇಳಿದೆ.‘ಕಾಯ್ದೆಯಲ್ಲಿನ ವಿಧಿ 17(ಎ), (ಬಿ) ಮತ್ತು (ಸಿ) ಹಾಗೂ 46ನೇ ವಿಧಿ  ದ್ವಂದ್ವಾರ್ಥದಿಂದ ಕೂಡಿದ್ದು, ಇವುಗಳ ಬಗ್ಗೆ ಹೆಚ್ಚಿನ ವಿವರ ಕೇಳಿರುವುದಾಗಿ ಉನ್ನತ ಮೂಲಗಳು ಹೇಳಿವೆ.ಜೈತಾಪುರ ಪರಮಾಣು ವಿದ್ಯುತ್‌ ಘಟಕವು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಐದು ಗ್ರಾಮಗಳಾದ ಮದಬನ್‌, ಕರೇಲ್‌, ಮಿಥಾಗ್‌ವನೆ, ವರಿಲ್‌ವಾಡಾ ಮತ್ತು ನಿವೇಲಿಯಲ್ಲಿ ತಲೆ ಎತ್ತಲಿವೆ. 1650 ಮೆಗಾವಾಟ್‌ ಸಾಮರ್ಥ್ಯದ ಆರು ಪರಮಾಣು ಸ್ಥಾವರಗಳನ್ನು  ಫ್ರಾನ್ಸ್‌ ಸಹಕಾರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಪ್ರತಿಕ್ರಿಯಿಸಿ (+)