ಇಂದು ಮಹಿಳೆ ಕಾಲಿಡದ ಕ್ಷೇತ್ರವೇ ಇಲ್ಲ ಎನ್ನಬಹುದು. ಆದರೂ ಒಬ್ಬ ಮಹಿಳಾ ತತ್ವಜ್ಞಾನಿಯನ್ನಾಗಲೀ, ನಾಟಕ ಕರ್ತೃವನ್ನಾಗಲೀ ವಿಶ್ವ ದಾಖಲೆಯ ಮಟ್ಟದಲ್ಲಿ ಕಾಣಲಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಆದರೆ ಈ ಮಾತುಗಳಲ್ಲಿರುವ ತಥ್ಯವೆಷ್ಟು ಎಂಬುದನ್ನು ಕಂಡುಕೊಳ್ಳಬೇಕಿದೆ. ನಾಟಕ ರಚನೆಯ ವಿಷಯವನ್ನು ಗಮನಿಸಿದಾಗ ಅನೇಕ ಲೇಖಕಿಯರು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳುತ್ತಿದ್ದಾರೆ. ಆ ನಿಟ್ಟಿನಲ್ಲಿ ಅಂತರ ರಾಷ್ಟ್ರೀಯ ನಾಟಕಕಾರ್ತಿಯರ ಸಮಾವೇಶ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು.

ಪುಟ್ಟ ಪುಟ್ಟ ಹೆಜ್ಜೆಯಿಟ್ಟು...
ಈ ಸಮಾವೇಶ ಮೊದಲ ಬಾರಿಗೆ ನಡೆದದ್ದು 1988ರಲ್ಲಿ, ನ್ಯೂಯಾರ್ಕ್ನ ಬಫೆಲೊ ನಗರದಲ್ಲಿ. ವಿಶ್ವದ ಮೂವತ್ತು ರಾಷ್ಟ್ರಗಳಿಂದ 200 ನಾಟಕಕಾರ್ತಿಯರನ್ನು ಮೊದಲ ಬಾರಿಗೆ ಒಗ್ಗೂಡಿಸಿದ್ದು ಈ ಸಮಾವೇಶದ ಹೆಗ್ಗಳಿಕೆ. ಅಂದಿನಿಂದ ತಪ್ಪದೇ ಪ್ರತಿ ಮೂರು ವರ್ಷಗಳಿಗೊಮ್ಮೆ ಸಮಾವೇಶ ನಡೆದುಕೊಂಡು ಬಂದಿದೆ. ನಂತರ 1989ರಲ್ಲಿ ಜಗತ್ತಿನೆಲ್ಲ ನಾಟಕಕಾರ್ತಿಯರ ಸಂಪರ್ಕ ಕೊಂಡಿಯಾಗಿ ಇದೇ ಬಫೆಲೊ ನಗರದಲ್ಲೇ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ವಿಮೆನ್ ಪ್ಲೇರೈಟ್ಸ್ (ಐಸಿಡಬ್ಲ್ಯುಪಿ) ಸ್ಥಾಪಿಸಲಾಯಿತು. ಹೀಗೆ ನ್ಯೂಯಾರ್ಕ್ನಿಂದ ಆರಂಭಿಸಿ ಟೊರಾಂಟೊ (ಕೆನಡಾ), ಅಡಿಲೇಡ್ (ಆಸ್ಟ್ರೇಲಿಯ), ಗಾಲ್ವೆಗಳಲ್ಲೆಲ್ಲಾ (ಐರ್ಲ್ಯಾಂಡ್) ಸಂಚರಿಸಿ ಅನೇಕ ನಾಟಕಕಾರ್ತಿಯರಿಗೆ ಇದು ಜಾಗತಿಕ ಮಟ್ಟದಲ್ಲಿ ವೇದಿಕೆಯನ್ನೊದಗಿಸಿದೆ. 1997ರಲ್ಲಿ ಐರ್ಲ್ಯಾಂಡ್ನ 4ನೇ ಸಮಾವೇಶದಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಸಲುವಾಗಿ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಲಾಯಿತು. ಭಾರತವೂ ಸೇರಿದಂತೆ ಹತ್ತು ರಾಷ್ಟ್ರಗಳ 22 ಮಹಿಳೆಯರನ್ನು ಈ ಸಮಿತಿ ಒಳಗೊಂಡಿದೆ.
ಸಂಸ್ಥೆಯ ಕಾರ್ಯಚಟುವಟಿಕೆಗಳನ್ನೆಲ್ಲ ಸಮಿತಿ ನಿಯಂತ್ರಿಸುತ್ತದೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ನಾಟಕಕಾರ್ತಿಯರನ್ನು ಒಂದೆಡೆ ಸೇರಿಸಿ, ಚರ್ಚೆಗೆ ಅವಕಾಶ ಮಾಡಿಕೊಡುವುದು ಪ್ರಮುಖ ಉದ್ದೇಶ. ಸಮಾವೇಶದಲ್ಲಿ ವಿವಿಧ ದೇಶಗಳ, ಭಿನ್ನ ಸಂಸ್ಕೃತಿಗೆ ಸೇರಿದ ನಾಟಕಗಳ ಮನನ, ವಿಚಾರ ಸಂಕಿರಣ, ಕಾರ್ಯಾಗಾರ, ಪ್ರದರ್ಶನಗಳಿರುತ್ತವೆ.

2003ರಲ್ಲಿ ಫಿಲಿಪ್ಪೀನ್ಸ್ನ ಮನಿಲಾದಲ್ಲಿ ನಡೆದ 6ನೇ ಸಮಾವೇಶದಲ್ಲಿ ನಮ್ಮ ದೇಶದ ಇಂಗ್ಲಿಷ್ ನಾಟಕಕಾರ್ತಿ ಪೊಯ್ಲಿಸೆನ್ ಗುಪ್ತ ತಮ್ಮ ರಂಗಭೂಮಿಯ ಅನುಭವಗಳನ್ನು, ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದರು. ಪ್ರತಿ ಸಮಾವೇಶದಲ್ಲೂ ಒಂದು ವಿಷಯವನ್ನು ಆಧರಿಸಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಜಕಾರ್ತದಲ್ಲಿ ನಡೆದ 7ನೇ ಸಮಾವೇಶದ ವಿಷಯ `ವೈವಿಧ್ಯಮಯ ಜಗತ್ತಿನಲ್ಲಿ ಸಾಂಸ್ಕೃತಿಕ ಸ್ವಾತಂತ್ರ್ಯ~ ಎಂಬುದಾಗಿತ್ತು.

ಕಳೆದ ಬಾರಿ 2009ರಲ್ಲಿ ಮುಂಬೈ ನಗರಿಗೆ ಈ ಸಮಾವೇಶ ನಡೆಸುವ ಅವಕಾಶ ಒಲಿದುಬಂದಿತ್ತು. `ಸ್ವಾತಂತ್ರ್ಯ ಮತ್ತು ಸಹಿಷ್ಣುತೆ~ ಎಂಬ ವಿಷಯವನ್ನು ಮುಂದಿಟ್ಟು ಮುಂಬೈ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾವೇಶ ಸಾಕಷ್ಟು ಯಶಸ್ವಿಯಾಗಿತ್ತು. ಇಡೀ ಜಗತ್ತಿಗೆ ಭಾರತೀಯ ರಂಗಭೂಮಿಯ ಪರಿಚಯದೊಂದಿಗೆ, ಇಲ್ಲಿನ ಜನಪದ ಕಲೆಗಳ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ಸಾಂಪ್ರದಾಯಿಕ ರಂಗಭೂಮಿ, ಭಾರತೀಯ ನಾಟಕಗಳ ಅಂತಃಸತ್ವವಾಗಿರುವ ಸಂಸ್ಕೃತ ನಾಟಕಗಳ ಪರಂಪರೆ, ಪಾಶ್ಚಾತ್ಯ ನಾಟಕಗಳ ಪ್ರಭಾವ ಎಲ್ಲವೂ ಚರ್ಚೆಗೊಳಪಟ್ಟವು.

ನಮ್ಮದೂ ಪಾಲಿದೆ...
ಈ ಬಾರಿ ಸ್ಟಾಕ್ಹೋಮ್ನಲ್ಲಿ ನಡೆಯುತ್ತಿರುವ ಒಂಬತ್ತನೇ ಸಮಾವೇಶದಲ್ಲಿ ನಾಲ್ಕು ಭಾರತೀಯ ನಾಟಕಗಳು ಆಯ್ಕೆಯಾಗಿವೆ. ಗೌರಿ ರಾಮ್ನಾರಾಯಣ್, ಜ್ಯೋತಿ ಗಜಭಿಯೆ, ಅನುರಾಧ ಮಾರ್ವಾ ಹಾಗೂ ಜ್ಯೋತಿ ಮಾಪ್ಶೇಕರ್ ಅವರ ನಾಟಕಗಳಿಗೆ ಈ ಅವಕಾಶ ಲಭ್ಯವಾಗಿದೆ. ಅಮೆರಿಕ, ಕ್ಯೂಬಾ, ಚೀನಾ, ಕೆನಡಾ ಮುಂತಾದ ದೇಶಗಳಿಗೆ ಸೇರಿದ ಸುಮಾರು 400 ಮಹಿಳೆಯರು ಭಾಗವಹಿಸಲಿದ್ದಾರೆ. ವಿವಿಧ ದೇಶ, ಭಾಷೆ, ಸಂಸ್ಕೃತಿಗೆ ಸೇರಿದ ಮಹಿಳೆಯರೆಲ್ಲರಿಗೂ ತಮ್ಮ ತಮ್ಮ ದೇಶದ ರಂಗಭೂಮಿ, ಮಹಿಳೆಯರ ಪಾತ್ರ ಹಾಗೂ ಸವಾಲುಗಳಿಗೆ ಸಂಬಂಧಿಸಿದ ಚರ್ಚೆಗೆ ಸಮಾವೇಶ ವೇದಿಕೆ ಒದಗಿಸಿದೆ.

ನಮ್ಮಲ್ಲೂ ನಾಟಕಕಾರ್ತಿಯರಿಗಾಗಿ ದೇಸೀಯವಾಗಿ ಇಂತಹ ಸಮಾವೇಶಗಳು ನಡೆದರೆ, ಬೆಳಕಿಗೆ ಬಾರದ ಅನೇಕರಿಗೆ ಅವಕಾಶ ಸಿಕ್ಕಿದಂತಾಗುತ್ತದೆ. ಆ ಮೂಲಕ ಇನ್ನಷ್ಟು ಸ್ಫೂರ್ತಿ, ಉತ್ಸಾಹ ತುಂಬಿದಂತಾಗುತ್ತದೆ. ಈಗಲೂ ಕನ್ನಡದಲ್ಲಿ ಅನೇಕ ನಾಟಕಕಾರ್ತಿಯರಿಗೆ ಸಿಗಬೇಕಾದ ಸ್ಥಾನಮಾನಗಳು ಸಿಕ್ಕಿಲ್ಲ. ಪ್ರತಿ ಬಾರಿ ಕೇವಲ ಬೆರಳೆಣಿಕೆಯಷ್ಟು ನಾಟಕಕಾರ್ತಿಯರ ಹೆಸರನ್ನೇ ಮತ್ತೆ ಮತ್ತೆ ಉಲ್ಲೇಖಿಸಲಾಗುತ್ತಿದೆ ಹೊರತು ಹೊಸಬರಿಗೆ ಅವಕಾಶವೇ ಇಲ್ಲದಂತಾಗಿದೆ. ಕಳೆದ ವರ್ಷ ಕರ್ನಾಟಕ ನಾಟಕ ಅಕಾಡೆಮಿ `ಮಹಿಳಾ ರಂಗ ಸಮಾವೇಶ~ವನ್ನು ಏರ್ಪಡಿಸಿದ್ದು ಕೊಂಚ ಸಮಾಧಾನಕರ ಸಂಗತಿ. ಆದರೂ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ.

ದೆಹಲಿಯ ಜಾಕಿರ್ ಹುಸೇನ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿರುವ ಅನುರಾಧ ಮಾರ್ವಾ ಅವರಿಗೆ ರಂಗಭೂಮಿಯೆಡೆಗೆ ವಿಶೇಷ ಸೆಳೆತ. ನಾಟಕಗಳ ಜೊತೆಗೆ ಅವರು ಅನೇಕ ಕಾದಂಬರಿಗಳನ್ನೂ ಬರೆದಿದ್ದಾರೆ. ಸಮಾವೇಶಕ್ಕೆ ಆಯ್ಕೆಯಾಗಿರುವ ಅವರ ನಾಟಕ- `ಎ ಪೈಪ್ ಡ್ರೀಮ್ ಇನ್ ಡೆಲ್ಲಿ~ ಬೀದಿ ಮಕ್ಕಳನ್ನು ಕುರಿತಾಗಿದೆ. ದೆಹಲಿಯ ಕೊಳೆಗೇರಿಯೊಂದರ ಮಕ್ಕಳು ಪೈಡ್ಪೈಪರ್ (ಕಿಂದರಿ ಜೋಗಿ) ನಾಟಕವಾಡುವ ಆಶಯ ಇದರ ವಸ್ತು.
ಅನುರಾಧಾ ಮಾರ್ವಾ

ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಜ್ಯೋತಿ ಮಾಪ್ಶೇಕರ್, ಅದಕ್ಕಾಗಿಯೇ ಮುಂಬೈನಲ್ಲಿ ಸ್ತ್ರೀ ಮುಕ್ತಿ ಸಂಘಟನ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಚಿಂದಿ ಆಯುವವರ ಅಭಿವೃದ್ಧಿಗಾಗಿ ಈ ಸಂಘಟನೆ ಬಹಳಷ್ಟು ಕೆಲಸ ಮಾಡಿದೆ. ಜ್ಯೋತಿ ಗ್ರಂಥಪಾಲಕಿಯಾಗಿಯೂ ಅನೇಕ ವರ್ಷಗಳ ಅನುಭವ ಹೊಂದಿದ್ದಾರೆ. ನಿವೃತ್ತರಾದ ಮೇಲೆ ಸಂಪೂರ್ಣವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಇವರು, ಇಂಟರ್ನ್ಯಾಷನಲ್ ವಿಮೆನ್ ಪ್ಲೇರೈಟ್ಸ್ನ ಕಾರ್ಯಕಾರಿ ಸಮಿತಿಯ ಸದಸ್ಯೆ ಸಹ. ಇವರ `ಮಾರ್ಚ್ ಟುವರ್ಡ್ಸ್ ಈಕ್ವಾಲಿಟಿ~ ನಾಟಕ ಈ ಬಾರಿಯ ಸಮಾವೇಶಕ್ಕೆ ಆಯ್ಕೆಯಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಭಾರತದಲ್ಲಿ ನಡೆದ ಮಹಿಳಾ ಹೋರಾಟಗಳ ಸ್ವರೂಪವನ್ನು ಈ ನಾಟಕ ತೆರೆದಿಡಲಿದೆ.

ಜ್ಯೋತಿ ಮಾಪ್ಶೇಕರ್

ಹೆಸರಾಂತ ನಾಟಕಕಾರ್ತಿ, ರಂಗ ನಿರ್ದೇಶಕಿ ಗೌರಿ ರಾಮ್ನಾರಾಯಣ್ ಅವರ `ನೈಟ್ಸ್ ಎಂಡ್~ ನಾಟಕ ಒಬ್ಬ ಕಥಕ್ಕಳಿ ನೃತ್ಯ ಪಟುವನ್ನು ಕುರಿತದ್ದು. ತನ್ನೂರಾದ ಕೇರಳದಿಂದ ರಾಜಸ್ತಾನಕ್ಕೆ ಓಡಿಬರುವ ಹುಡುಗನೊಬ್ಬ ಕಾಡಿನಲ್ಲಿ ಸಿಕ್ಕ ಹುಲಿಮರಿಯನ್ನು ಸಲಹುವುದರ ಸುತ್ತ ನಾಟಕದ ಕಥೆ ಹೆಣೆದುಕೊಳ್ಳುತ್ತದೆ. ಗೌರಿ ತಮ್ಮದೇ ತಂಡವೊಂದನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಗಾಯನ ಕಲಾವಿದೆ ಸಹ. ಎಂ.ಎಸ್.ಸುಬ್ಬುಲಕ್ಷ್ಮಿ ಅವರೊಂದಿಗೆ ಹಾಡಿದ ಹಿರಿಮೆಯೂ ಅವರದು. 22 ವರ್ಷಗಳ ಕಾಲ ಆಂಗ್ಲ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿರುವ ಗೌರಿಯವರ ಈ ವೈವಿಧ್ಯಪೂರ್ಣ ಅನುಭವ ಅವರ ನಾಟಕಗಳಿಗೆ ವಿಸ್ತಾರವಾದ ಹಿನ್ನೆಲೆಒದಗಿಸಿದೆ.
ಗೌರಿ ರಾಮ್ನಾರಾಯಣ್

ಸ್ತ್ರೀ ಕೇಂದ್ರಿತ ಕಥಾವಸ್ತು ಹೊಂದಿರುವ ಇವರ ನಾಟಕ `ದಾಹಾಗ್ನಿ~ (ದಿ ಕನ್ಸ್ಯೂಮಿಂಗ್ ಫೈರ್) ಸಮಾವೇಶದಲ್ಲಿ ಪ್ರದರ್ಶನಗೊಳ್ಳಲಿದೆ. ಮುಂಬೈ ಮೂಲದ ಗಜಭಿಯೆ, ಕವಯಿತ್ರಿಯಾಗಿಯೂ ಹೆಸರು ಮಾಡಿದ್ದಾರೆ.
ಜ್ಯೋತಿ ಗಜಭಿಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.