ಶನಿವಾರ, ಮೇ 15, 2021
24 °C

ನಾಪತ್ತೆಯಾಗಿದ್ದ ಗ್ರಾ.ಪಂ. ಉಪಾಧ್ಯಕ್ಷರ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ನಾಪತ್ತೆಯಾಗಿದ್ದ ತಾಲ್ಲೂಕಿನ ಜಾಲಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಸಲಾಮ್ ದಾಮ್ದಾ (55) ಅಲಿಯಾಸ್ ಮೆಡಿಕಲ್ ಸಲಾಮ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಕುಮಟಾದ ಕತಗಾಲ ಸಮೀಪದ ದೇವಿಮನೆ ಘಟ್ಟದ ಅರಣ್ಯ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ.ಭೂಮಿ ವ್ಯವಹಾರ ನಡೆಸುತ್ತಿದ್ದ ಅವರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ವ್ಯವಹಾರ ನಿಮಿತ್ತವೇ ಸೆ.6ರಂದು ಕುಮಟಾಕ್ಕೆ ಹೋಗಿ, ಅಲ್ಲಿಂದ ಶಿರಸಿಗೆ ತೆರಳುವುದಾಗಿ ಮನೆಯವರಿಗೆ ತಿಳಿಸಿದ್ದರಂತೆ.ದಾಮ್ದಾ ಅವರು ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬಹದು ಎನ್ನಲಾಗಿದೆ. ಸೆ.6ರಂದು ಬೆಳಿಗ್ಗೆ ಮನೆಯಿಂದ ಹೊರಟವರು, ದೂರವಾಣಿಯಲ್ಲೂ ಸಂಪರ್ಕಿಸದೇ ಈವರೆಗೆ ಮನೆಗೆ ಹಿಂತಿರುಗಿ ಬಂದಿಲ್ಲವೆಂದು ಮೃತರ ಮಗ ಶುಕ್ರವಾರವಷ್ಟೇ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಆದರೆ ಭಾನುವಾರ ಶವ ಪತ್ತೆಯಾಗಿದೆ. ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಹಚ್ಚುವುದಕ್ಕೆ ಅವರ ಕುಟುಂಬದವರೂ ಸಹ ತೀವ್ರ ಪ್ರಯಾಸಪಟ್ಟು, ಕೊನೆಗೆ ಅವರು ಹಾಕಿಕೊಂಡಿದ್ದ ಅಂಗಿ ಮತ್ತು ಸೊಂಟದಲ್ಲಿದ್ದ ಬೆಲ್ಟ್‌ನಿಂದ ಗುರುತು ಹಿಡಿದರು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.