ನಾಯಕನಹಟ್ಟಿ: ಇಲ್ಲಿ ಶನಿವಾರ ಜರುಗಲಿರುವ ರಾಜ್ಯದ ಪ್ರಸಿದ್ಧ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಮಂಗಳವಾರ ಕಳಶ ಸ್ಥಾಪನೆಯನ್ನು ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.

ಕಳಶವನ್ನು ಒಳಮಠದಿಂದ ರಥದ ಬಳಿಗೆ ಸಕಲವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತಂದು ಪೂಜೆ ಸಲ್ಲಿಸಿ, ರಥಕ್ಕೆ ಪ್ರತಿಷ್ಠಾಪಿಸಲಾಯಿತು.

ನಂತರ ರಥವನ್ನು ಬಣ್ಣ ಬಣ್ಣದ ಪಟಗಳಿಂದ ಅಲಂಕೃತಗೊಳಿಸುವ ಕಾರ್ಯಾಕ್ಕೆ ಚಾಲನೆ ನೀಡಲಾಯಿತು. ಬೃಹತ್ ಗಾತ್ರದ ರಥ ಸುಮಾರು 70 ಟನ್ ತೂಕವಿದ್ದು, ಒಂಬತ್ತು ಮಜಲಿನಿಂದ ಕೂಡಿದೆ.

ಈ ಮೊದಲು 11 ಮಜಲಿನಿಂದ ಕೂಡಿದ್ದ ರಥವನ್ನು ತೂಕ ಮತ್ತು ಎತ್ತರವನ್ನು ಕಡಿಮೆ ಮಾಡುವ ಸಲುವಾಗಿ 9 ಮಜಲಿಗೆ ಇಳಿಸಲಾಗಿದೆ. ಸಾಮಾನ್ಯವಾಗಿ ರಥಗಳು ನಾಲ್ಕು ಗಾಲಿಗಳಿಂದ ಕೂಡಿರುತ್ತವೆ. ಆದರೆ, ಈ ರಥ 5 ಚಕ್ರಗಳಿಂದ ಕೂಡಿದೆ. ರಾಜದ್ಯ ಎರಡನೇ ಅತೀ ದೊಡ್ಡರಥ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಹಟ್ಟಿ ಪರಿಷೆ ಎಂದರೆ ರಥವೇ ಕೇಂದ್ರ ಬಿಂದು. ಇಂತಹ ರಥಕ್ಕೆ ಮಂಗಳವಾರದಿಂದ ಶೃಂಗರಿಸುವ ಕಾರ್ಯಕ್ಕೆ ಕಳಶ ಸ್ಥಾಪನೆ ಮೂಲಕ ಚಾಲನೆ ನೀಡಲಾಯಿತು.

ಕಳಶ ಸ್ಥಾಪನೆಯಲ್ಲಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಎಚ್. ಹಾಲಪ್ಪ, ಮತ್ತು ದೇವಸ್ಥಾನದ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.

ಜಾತ್ರೆಗೆ 100 ವಿಶೇಷ ಬಸ್
ಚಿತ್ರದುರ್ಗ: ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ಜಾತ್ರಾ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಲು ಅನುಕೂಲವಾಗಲು ಮಾರ್ಚ್ 9ರಿಂದ 11ರವರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ಮತ್ತು ಚಿತ್ರದುರ್ಗ ಘಟಕಗಳಿಂದ ಒಟ್ಟು ಒಂದು ನೂರು ಜಾತ್ರಾ ವಿಶೇಷ ಬಸ್ಗಳನ್ನು ಓಡಿಸಲಾಗುತ್ತದೆ. ವಿಶೇಷ ಬಸ್ಗಳು ಈ ಕೆಳಕಂಡ ಮಾರ್ಗಗಳಲ್ಲಿ ಸಂಚರಿಸುತ್ತವೆ.

1) ದಾವಣಗೆರೆ-ನಾಯಕನಹಟ್ಟಿ ಮಾರ್ಗ ಅಣಜಿ, ಜಗಳೂರು, ದೊಣೆಹಳ್ಳಿ.
2) ಚಿತ್ರದುರ್ಗ-ನಾಯಕನಹಟ್ಟಿ ಮಾರ್ಗ ಬೆಳಘಟ್ಟ, ತುರುವನೂರು, ಮುಷ್ಟೂರು.
3) ಚಿತ್ರದುರ್ಗ-ನಾಯಕನಹಟ್ಟಿ ಮಾರ್ಗ ಬೆಳಗಟ್ಟ, ಹಾಯಕಲ್, ಚಳ್ಳಕೆರೆ
4) ಚಳ್ಳಕೆರೆ-ನಾಯಕನಹಟ್ಟಿ ಮಾರ್ಗ ನೇರ್ಲಗುಂಟೆ
5) ಹಿರಿಯೂರು-ನಾಯಕನಹಟ್ಟಿ ಮಾರ್ಗ ಸಾಣಿಕೆರೆ, ಚಳ್ಳಕೆರೆ, ನೇರ್ಲಗುಂಟೆ,
6) ನಾಯಕನಹಟ್ಟಿ- ಪರಶುರಾಂಪುರ ಮಾರ್ಗ ಚಳ್ಳಕೆರೆ
7) ನಾಯಕನಹಟ್ಟಿ-ಬಳ್ಳಾರಿ ಮಾರ್ಗ ಹಾನಗಲ್, ರಾಂಪುರ
8) ಚಿತ್ರದುರ್ಗ-ನಾಯಕನಹಟ್ಟಿ ಮಾರ್ಗ ಕಲ್ಲೇದೇವರಪುರ
9) ನಾಯಕನಹಟ್ಟಿ- ಮೊಳಕಾಲ್ಮೂರು ಮಾರ್ಗ ತಳಕು ಕ್ರಾಸ್.

ಭಕ್ತರು, ಪ್ರಯಾಣಿಕರ ಜನದಟ್ಟಣೆಗಾಗಿ ಈ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ಗಳು ಸಂಚರಿಸಲಿದ್ದು, ಭಕ್ತರು ಇದರ ಸದುಪಯೋಗ ಪಡೆಯುವಂತೆ ಸಂಸ್ಥೆಯ ವಿಭಾಗೀಯ ನಿಯಂತ್ರಣ ಅಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮದ್ಯದಂಗಡಿ ಮುಚ್ಚಲು ಆದೇಶ
ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ನಿಮಿತ್ತ ಸಾರ್ವಜನಿಕ ಶಾಂತಿಪಾಲನೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮುಂಜಾಗ್ರತಾ ಕ್ರಮದ ಸಲುವಾಗಿ ಮಾರ್ಚ್ 10ರ ಬೆಳಿಗ್ಗೆ 6ರಿಂದ 11ರ ಬೆಳಿಗ್ಗೆ 6ರವರೆಗೆ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಗೆಯ ಮದ್ಯದ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವಿಪುಲ್ಬನ್ಸಲ್ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.