ಭಾನುವಾರ, ಏಪ್ರಿಲ್ 11, 2021
23 °C

ನಾಯಕರ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಡುಗಡೆಯಾಗುವ ಮುನ್ನವೇ ಈ ಸಿನಿಮಾ  10 ಕೋಟಿ ರೂಪಾಯಿ ವ್ಯವಹಾರ ಮಾಡಿದೆ ಎಂದರು ನಿರ್ಮಾಪಕ ಶಂಕರಗೌಡ. ಅದು ಅವರ ನಿರ್ಮಾಣದ `ವರದ ನಾಯಕ~ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ.ಚಿತ್ರ ತಡವಾಗಿ ಸಿದ್ಧವಾಗಿದ್ದರೂ ವರ್ಚಸ್ಸು ಜೋರಾಗಿಯೇ ಇದೆ ಎಂಬುದನ್ನು ಅವರು ಖುಷಿಯಿಂದ ಹೇಳಿಕೊಂಡರು. ಅವರ ಪಾಲಿಗೆ ಈ ಚಿತ್ರ ವರವಾಗಿ ಪರಿಣಮಿಸಿದೆಯಂತೆ.

ಸುದೀಪ್‌ರಿಂದಾಗಿ ಈ ಸಿನಿಮಾ ನಿರ್ಮಿಸಿದ್ದೇನೆ ಎಂದ ಶಂಕರಗೌಡ ತಮ್ಮ ಪಾಲಿನ ಸಂತಸದ ದಿನವಿದು ಎಂದರು. ಅವರ ಮಾತುಹೆಚ್ಚಾಗಿ ನಾಯಕ ದ್ವಯರಾದ ಸುದೀಪ್ ಮತ್ತು ಚಿರಂಜೀವಿ ಸರ್ಜಾ ಕುರಿತಾಗಿಯೇ ಇತ್ತು.ತಮಿಳು ಮೂಲದವರಾದ ನಿರ್ದೇಶಕ ಅಯ್ಯಪ್ಪ ಪಿ. ಶರ್ಮ ಇನ್ನೂ ಕನ್ನಡ ಕಲಿಯುತ್ತಿರುವವರು. ಸುದೀಪ್ ಅವರಿಗೆ ಹಳೆಯ ಸ್ನೇಹಿತರಂತೆ. ಕನ್ನಡ ಚಿತ್ರರಂಗದ ಅನೇಕ ಹಳೆಯ ಸ್ನೇಹಿತರು ಈ ಚಿತ್ರದ ಮೂಲಕ ಮತ್ತೆ ಸಿಕ್ಕಿದ್ದಾರೆ ಎಂಬ ಖುಷಿ ಅವರಲ್ಲಿತ್ತು. ತೆಲುಗಿನ `ಲಕ್ಷ್ಯಂ~ ಚಿತ್ರದ ಕನ್ನಡ ಅವತರಣಿಕೆ ಇದು.ಈ ಚಿತ್ರದಲ್ಲಿ ತಾವು ನಟಿಸಲು ಮುಖ್ಯ ಕಾರಣ ಚಿರಂಜೀವಿ ಸರ್ಜಾ ಎಂದರು ನಟ ಸುದೀಪ್. ಚಿರು ನನ್ನ ತಮ್ಮನಿದ್ದಂತೆ ಎಂದ ಅವರು, ಚಿತ್ರಕ್ಕಾಗಿ ಸಾಕಷ್ಟು ಕಠಿಣ ಶ್ರಮ ಪಟ್ಟಿದ್ದಾರೆ. ಚೆನ್ನಾಗಿ ನಟಿಸಿದ್ದಾರೆ ಎಂದು ಬೆನ್ನುತಟ್ಟಿದರು.ಚಿತ್ರದ ಬಗ್ಗೆ ಸುದೀಪ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರ್ದೇಶಕ ಅಯ್ಯಪ್ಪ ಶರ್ಮ ಸುಮಾರು ಒಂದು ವರ್ಷಕ್ಕೂ ಅಧಿಕ ಸಮಯ ಚಿತ್ರದ ಪೂರ್ವ ತಯಾರಿಗೆಂದು ವ್ಯಯಿಸಿದ್ದು ಅವರ ಶ್ರದ್ಧೆಯ ಪ್ರತೀಕ ಎಂದು ಮೆಚ್ಚುಗೆ ಮಾತನ್ನಾಡಿದರು.ಹುಡುಗಾಟದ ದಿನಗಳಲ್ಲಿ ಕಮಲಹಾಸನ್ ಚಿತ್ರಗಳೆಂದರೆ ಬಿಡದೆ ಚಿತ್ರಮಂದಿರಕ್ಕೆ ಓಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು ಉಪಮುಖ್ಯಮಂತ್ರಿ ಆರ್. ಅಶೋಕ್. ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುತ್ತಿವೆ. ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವ ಕಾಲ ಮರುಕಳಿಸಿದೆ ಎಂದವರು ಹರ್ಷ ವ್ಯಕ್ತಪಡಿಸಿದರು.ಚಿತ್ರಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಎಲ್ಲಾ ಹಾಡುಗಳನ್ನೂ ಕನ್ನಡದ ಹೊಸ ಗಾಯಕರಿಂದಲೇ ಹಾಡಿಸಿರುವುದನ್ನು ಅವರು ಹೆಮ್ಮೆಯಿಂದ ಹೇಳಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.