ಸೋಮವಾರ, ಮೇ 17, 2021
23 °C

ನಾರಿ ದುಡಿಮೆಗೆ ಹೊಸ ದಾರಿ

ಬಾಬು ಎಂ.ಆರ್. Updated:

ಅಕ್ಷರ ಗಾತ್ರ : | |

ರಾಮನಾಥಪುರ: ಮಹಿಳೆ ದುಡಿಮೆಯ ದಾರಿ ಹಿಡಿದು ಹಲವು ವರ್ಷಗಳಾಗಿವೆ. ಆದರೆ ಆಕೆ ತನ್ನ ದುಡಿಮೆಯ ಜತೆಗೆ ಕುಟುಂಬ ನಿರ್ವಹಣೆ ಮಾಡುವ ಹೆಚ್ಚುವರಿ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕಾಗಿದೆ.ಅರಕಲಗೂಡು ತಾಲ್ಲೂಕಿನ ಬರಗೂರಿನಲ್ಲಿ ಮಹಿಳೆಯರೇ  ನಿರ್ವಹಿಸುವ ಆಹಾರ ಸಂಸ್ಕರಣಾ ಘಟಕ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಗ್ರಾಮೀಣ ಮಹಿಳೆಯರ ಕಾರ್ಯ ತತ್ಪರತೆಗೆ ಈ ಕೇಂದ್ರ ಉತ್ತಮ ನಿದರ್ಶನವಾಗಿದೆ.ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಮಕ್ಕಳು ಹಾಗೂ ಇತರರಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡಲು ಒಂದು ಘಟಕ ಆರಂಭಿಸಿತು. ಈ ಘಟಕದ ನಿರ್ವಹಣೆಯ ಜವಾಬ್ದಾರಿಯನ್ನು ಮಹಿಳೆಯರಿಗೇ ನೀಡಿ ವಿವಿಧ ಸ್ವಸಹಾಯ ಸಂಘಗಳ ಪ್ರತಿನಿಧಿಗಳನ್ನು ಇಲ್ಲಿ ಕೆಲಸಕ್ಕೆ ಹಚ್ಚಿದರು. ಈ ಘಟಕ ಯಶಸ್ಸಿನ ಹಾದಿ ಹಿಡಿದಿದೆ.ಆಹಾರವನ್ನು ಸಂಸ್ಕರಿಸಿ ಸರಬರಾಜು ಮಾಡುವ ಜವಾಬ್ದಾರಿ ಈ ಮಹಿಳೆಯರ ಮೇಲಿದೆ. ರಾಮನಾಥಪುರ ಹೋಬಳಿಯ ಮಹಿಳೆಯರೇ ಹೆಚ್ಚಾಗಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅರಕಲಗೂಡು ಹಾಗೂ ಹಾಸನ ತಾಲ್ಲೂಕಿನ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ಇಲಾಖೆ ಸೂಚನೆ ಮತ್ತು ನಿಯಮಾನುಸಾರ ತಯಾರಿಸಿದ ಆಹಾರವನ್ನು ಈ ಘಟಕದಿಂದಲೇ ಸರಬರಾಜು ಮಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಆರಂಭಿಸಿರುವ ಈ ಘಟಕದಲ್ಲಿ ಒಬ್ಬ ಪುರುಷ ಹೊರತು ಪಡಿಸಿದರೆ ಎಲ್ಲರೂ ಮಹಿಳಾ ಸಿಬ್ಬಂದಿಯೇ ಇದ್ದಾರೆ ಎಂಬುದು ಗಮನಾರ್ಹ.ರಾಮನಾಥಪುರದಿಂದ 8 ಕಿ.ಮೀ. ದೂರದ ಬರಗೂರು ಹುಲ್ಲಿಕಲ್ಲು ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿನ ಬಾಡಿಗೆ ಕಟ್ಟಡದಲ್ಲಿ ಈ ಘಟಕ ಕಾರ್ಯ ನಿರ್ವಹಿಸುತ್ತಿದೆ. ನಿರ್ವ ಹಣೆ ಪೂರ್ಣ ಮಹಿಳೆ ಯರದ್ದೇ. ಬರಗೂರು ಸೇರಿದಂತೆ ಘಟಕದ ಸುತ್ತಲಿನ ಹಲವು ಗ್ರಾಮಗಳ ಸ್ತ್ರೀ ಶಕ್ತಿ ಸಂಘದ ಕೆಲ ಮಹಿಳೆಯರು ಒಂದುಗೂಡಿ ಘಟಕಕ್ಕೆ ಸೀಮಿತ ಗೂಂಡಂತೆ ಒಂದು ಸಮಿತಿ ರಚಿಸಿ ಕೊಂಡಿದ್ದಾರೆ. ತಮ್ಮಲ್ಲೇ ಒಬ್ಬ ವಿದ್ಯಾ ವಂತೆಯನ್ನು ಅಕೌಂಟೆಂಟ್ ಆಗಿ ಹಾಗೂ ಒಬ್ಬ ಪುರುಷನನ್ನು ಟೆಕ್ನೀಷಿ ಯನ್ ಆಗಿ ನೇಮಕ ಮಾಡಿ ಕೊಂಡಿದ್ದಾರೆ. ಒಟ್ಟು 25 ಮಹಿಳೆ ಯರು ಪಾಳಿಯ ಮೇಲೆ ಕೆಲಸ ಮಾಡುತ್ತಿದ್ದಾರೆ.

ಘಟಕದಲ್ಲಿ ಮೂಟೆ ಹೊರುವುದ ರಿಂದ ಹಿಡಿದು ಕಸ ಗುಡಿಸುವ ತನಕ ಎಲ್ಲವೂ ಮಹಿಳೆಯರ ಕೆಲಸ. ಎಲ್ಲವೂ ಅಚ್ಚುಕಟ್ಟು, ಸ್ವಚ್ಚತೆಗೆ ಹೆಚ್ಚು ಗಮನ. ಈ ಎಲ್ಲ ವಿಚಾರಗಳಲ್ಲಿ ಇವರೆಲ್ಲರೂ ತರಬೇತಿ ಪಡೆದು ಬಂದವರೇ.ರಾಗಿ ಪಾಯಸ, ಪೌಷ್ಟಿಕ ಪಾಯಸ, ಪೌಷ್ಟಿಕ ಲಾಡು, ಮಸಾಲೆ ಪುಡಿ, ಸಿಹಿ ಪೊಂಗಲ್ ಇದರ ಜತೆಗೆ ಗರ್ಭಿಣಿ, ಬಾಣಂತಿಯರಿಗಾಗಿ ಕಡಲೇಕಾಯಿ, ಹೆಸರು ಕಾಳು, ಕಡ್ಲೆಬೇಳೆ, ಅಕ್ಕಿ ರಾಗಿ ಬಹುಧಾನ್ಯ ಮಿಶ್ರಣ ತಯಾರಿಕೆಯನ್ನೂ ಈ ಘಟಕದಲ್ಲಿ ಮಾಡಲಾಗುತ್ತಿದೆ. ಇವೆಲ್ಲವೂ ಇಲಾಖೆ ಅಧಿಕಾರಿಗಳ ಮಾರ್ಗ ದರ್ಶನ ಹಾಗೂ ತಾಲ್ಲೂಕು ಆರೋಗ್ಯ ಆಧಿಕಾರಿ ಡಾ. ಸ್ವಾಮೀಗೌಡರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.ಇಲ್ಲಿಂದ ಪ್ರತಿ ತಿಂಗಳು 50 ರಿಂದ 60 ಕ್ವಿಂಟಲ್ ಆಹಾರ ಪದಾರ್ಥ ಸರಬರಾಜು ಆಗುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.