ಮರಿಯಮ್ಮನಹಳ್ಳಿ (ಬಳ್ಳಾರಿ): ತಮಿಳುನಾಡು ಬಾಲಕರ ತಂಡ ಶ್ರೀ ವಿನಾಯಕ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 14 ವರ್ಷದೊಳಗಿನ ಶಾಲಾಮಕ್ಕಳ 57ನೇ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಗುರುವಾರ ಸಂಜೆ 3-2(25-10, 25-27, 25-12, 25-20)ರಿಂದ ಮಹಾರಾಷ್ಟ್ರ ತಂಡವನ್ನು ಪರಾಭವಗೊಳಿಸುವ ಮೂಲಕ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು.

ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ತಮಿಳುನಾಡು ತಂಡದ ಅರಸನ್, ಕೆವಿನ್ ಸ್ಯಾಮುವೆಲ್ಸ್, ಅಜಿತ್ ಸೆಹವಾಲೆ ಅವರ ಅತ್ಯುತ್ತಮ ಪ್ರದರ್ಶನದಿಂದ ಮಹಾರಾಷ್ಟ್ರ ತಂಡದ ಬಾಲಕರಿಗೆ ಚೇತರಿಸಿಕೊಳ್ಳಲು ಅವಕಾಶ ಸಿಗಲಿಲ್ಲ.

ಮತ್ತೊಂದು ಪಂದ್ಯದಲ್ಲಿ ಮಣಿಪುರ ತಂಡ 25-13, 25-14, 25-15ರಿಂದ ರಾಜಾಸ್ತಾನ ತಂಡವನ್ನು ಪರಾಭವಗೊಳಿಸಿ ಸೆಮಿಫೈನಲ್ಗೆ ಪದಾರ್ಪಣೆ ಮಾಡಿದರು. ಆಂಧ್ರಪ್ರದೇಶ ತಂಡ 3-2(25-20, 16-25, 25-18, 17-25, 15-10 )ರಿಂದ ಹರಿಯಾಣ ತಂಡವನ್ನು ಮಣಿಸಿತು.

ಬಾಲಕಿಯರ ವಿಭಾಗದಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡ 3-1(25-20, 25-23, 19-25, 25-15)ರಿಂದ ದೆಹಲಿ ತಂಡವನ್ನು ಸೋಲಿಸುವದರ ಮೂಲಕ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರು. ಆಂಧ್ರ ಪ್ರದೇಶದ ನಾಯಕಿ ನಿರೋಷ, ಪ್ರಿಯಾಂಕ, ಕಲ್ಯಾಣಿ, ಭವಾನಿ, ಅನುಷಾ, ಕೀರ್ತಿ, ಸ್ವಾತಿ, ಐಶ್ವರ್ಯ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

ಮತ್ತೊಂದು ಪಂದ್ಯದಲ್ಲಿ ರಾಜಾಸ್ತಾನ 23-25, 25-18, 25-16, 25-19ರಿಂದ ಹಿಮಾಚಲ ಪ್ರದೇಶ ತಂಡವನ್ನು ಪರಾಭವಗೊಳಿಸಿ ದರೆ, ಪಶ್ಚಿಮ ಬಂಗಾಳದ 25-12, 25-12, 25-11ರಿಂದ ಮಧ್ಯ ಪ್ರದೇಶವನ್ನು ಪರಾಭಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.