ಮಂಗಳವಾರ, ಏಪ್ರಿಲ್ 20, 2021
24 °C

ನಾಲ್ಕು ವೇದಗಳ ಭಾಷ್ಯ ಪುಸ್ತಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಯೋಗ ಮತ್ತು ವೇದಗಳು ಸಾಮಾನ್ಯ ಜನರ ಜೀವನದಿಂದ ಬಹಳ ದೂರ ಉಳಿದಿವೆ ಎಂಬ ಕಲ್ಪನೆ ತಪ್ಪು. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವೇದ ಪಂಡಿತರು ಶ್ರಮಿಸಬೇಕು~ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಸಲಹೆ ನೀಡಿದರು.ವೇದ ಸೌರಭ ಸಂಸ್ಥೆಯು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಆರ್.ಎಲ್. ಕಶ್ಯಪ ಅವರ `ನಾಲ್ಕು ವೇದಗಳ ಭಾಷ್ಯ~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಕಶ್ಯಪ ಅವರು ತಮ್ಮ ಕೃತಿಯಲ್ಲಿ ಯೋಗವನ್ನು ಆಧುನಿಕ ಜೀವನಶೈಲಿಯ ದೃಷ್ಟಿಕೋನದಿಂದ ಮರು ವ್ಯಾಖ್ಯಾನಿಸಿದ್ದು, ಬದುಕಿನಲ್ಲಿ ಎದುರಾಗುವ ಹಲವು ಪ್ರಶ್ನೆಗಳಿಗೆ ಸರಳವಾಗಿ ಉತ್ತರ ನೀಡಿದ್ದಾರೆ~ ಎಂದು ತಿಳಿಸಿದರು. `ಆಧುನಿಕ ಸಮಾಜದಲ್ಲಿ ಧ್ಯಾನ ಮತ್ತು ಯೋಗಾಭ್ಯಾಸವು ಮನೋನಿಗ್ರಹದ ಮಾರ್ಗವಾಗಿ ಹೇಗೆ ರೂಪುಗೊಂಡಿದೆ ಎಂಬುದನ್ನು ಸಹ ಈ ಕೃತಿಯಲ್ಲಿ ವಿಸ್ತೃತವಾಗಿ ತಿಳಿಸಲಾಗಿದೆ. ಪವಾಡ ದೃಶ್ಯಗಳನ್ನು ದೈವೀಕರಣದ ನೆಲೆಯಲ್ಲಿ ತರ್ಕಿಸುವ ಮೂಲಕ ಹೊಸ ಆಯಾಮ  ನೀಡಲಾಗಿದೆ~ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.