ಶನಿವಾರ, ಏಪ್ರಿಲ್ 17, 2021
31 °C

ನಾಲ್ವರು ಸಾಧಕರಿಗೆ ರಾಜಗುರು ಸಮ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಪಂ.ರಾಜಗುರು ಅವರ ಹೆಸರಿನಲ್ಲಿ ನೀಡುವ ರಾಷ್ಟ್ರೀಯ ಸಮ್ಮಾನ ಪ್ರಶಸ್ತಿಯನ್ನು ಈ ಬಾರಿ ದೆಹಲಿಯ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಪಂ.ರಾಜನ್ ಹಾಗೂ ಪಂ.ಸಾಜನ್ ಮಿಶ್ರಾ ಅವರಿಗೆ ಪ್ರದಾನ ಮಾಡಲಾಗುವುದು~ ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಆ 24ರಂದು ಇಲ್ಲಿಯ ಡಾ.ಅಣ್ಣಾಜಿರಾವ್ ಶಿರೂರ ರಂಗಮಂದಿರದಲ್ಲಿ ಸಂಜೆ 6ಕ್ಕೆ ರಾಷ್ಟ್ರೀಯ ಸಮ್ಮಾನ ಹಾಗೂ ಹಿಂದೂಸ್ತಾನಿ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯ ಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿಯು ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.ಪಂ. ಪ್ರಸನ್ನ ಗುಡಿ ಮತ್ತು ವೀಣಾ ಮರಡೂರ ಅವರನ್ನು `ಯುವ ಪ್ರತಿಭೆ~ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು 25 ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ.ಆ 28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಗುರು ಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಜಗದೀಶ ಶೆಟ್ಟರ ರಾಷ್ಟ್ರೀಯ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡುವರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ಪಂ.ಬಸವರಾಜ ರಾಜಗುರು ಅವರ ಜೀವನ ಚರಿತ್ರೆ ಒಳಗೊಂಡ ಚಿತ್ರ ಸಂಪುಟ ಬಿಡುಗಡೆ ಮಾಡುವರು ಎಂದರು.`ಹಿಂದೂಸ್ತಾನಿ ಸಂಗೀತವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪಂ.ಬಸವರಾಜ ರಾಜಗುರು ಅವರ ಮನೆಯ ಕೊಠಡಿಯನ್ನು ಮರು ನವೀಕರಣ ಮಾಡಲಾಗಿದ್ದು, ಸೆಪ್ಟೆಂಬರ್ 10ರಿಂದ ಸಂಗೀತ ಶಾಲೆ ಆರಂಭವಾಗಲಿದೆ.ಟ್ರಸ್ಟ್ ವತಿಯಿಂದ ಒಬ್ಬ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಡಬೇಕು ಎಂಬ ಉದ್ದೇಶದಿಂದ  ಸದ್ಯದಲ್ಲಿಯೇ ತುರ್ತು ಸಭೆ ಕರೆದು ಯೋಗ್ಯ ಸಂಗೀತ ಶಿಕ್ಷಕರ ನೇಮಕಾತಿಗೆ ಕ್ರಮ ತೆಗೆದು ಕೊಳ್ಳಲಾಗುವುದು~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ..ಹಿರೇಗೌಡರ ಹೇಳಿದರು.ಟ್ರಸ್ಟ್‌ನ ಸದಸ್ಯರಾದ ಭಾರತಿದೇವಿ ರಾಜಗುರು, ನಿಜಗುಣ ರಾಜಗುರು, ಪಂ.ಸೋಮನಾಥ ಮರಡೂರ, ಡಾ.ಜಿ.ಎಂ.ಹೆಗಡೆ, ಉದಯ ದೇಸಾಯಿ,ಡಾ.ವಿ.ವಿ.ಪಾವಟೆ ಮತ್ತಿತಿತರರು ಪ್ರತಿಕಾ ಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.