ಶುಕ್ರವಾರ, ಫೆಬ್ರವರಿ 26, 2021
28 °C

ನಾಳೆಯಿಂದ ಗೋಕುಲಾಷ್ಟಮಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆಯಿಂದ ಗೋಕುಲಾಷ್ಟಮಿ ಸಂಭ್ರಮ

ಎಸ್‌.ಜಿ.ಬಿ.ಎಸ್‌ ಉನ್ನತಿ ಫೌಂಡೇಷನ್‌ 39ನೇ ವರ್ಷದ ಗೋಕುಲಾಷ್ಟಮಿ ಸರಣಿಯ ‘ಉತ್ಸವ’ 2016 ಕಾರ್ಯಕ್ರಮ ಆಯೋಜಿಸಿದೆ.ಶನಿವಾರದಿಂದ (ಆ.6) ಆರಂಭವಾಗುವ ‘ಉತ್ಸವ’ ಆ.28ರವರೆಗೂ ನಡೆಯಲಿದೆ. ಪ್ರತಿದಿನ ನೃತ್ಯ, ಸಂಗೀತದ ರಸದೌತಣ.ಶನಿವಾರ (ಆ.6) ಸಂಜೆ 6.30ಕ್ಕೆ ಟಿ.ಎಂ.ಕೃಷ್ಣ (ಮ್ಯಾಗ್ಸೆಸೆ ಪುರಸ್ಕೃತ) ಮತ್ತು ತಂಡದ ಗಾಯನದೊಂದಿಗೆ ಉತ್ಸವ ಆರಂಭವಾಗಲಿದೆ.ಕಾರ್ಯಕ್ರಮದ ಕೊನೆಯ ದಿನವಾದ ಆ.28ರಂದು ರಾತ್ರಿ 8.30ಕ್ಕೆ ಎವಿಕೆ ರಾಜಸಿಂಹನ್‌ ಅವರಿಂದ ರಾಧಾಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ. 9.30ಕ್ಕೆ ಜೆ.ಎಸ್‌. ಈಶ್ವರ ಪ್ರಸಾದ್‌ ನೇತೃತ್ವದಲ್ಲಿ ‘ನಮ್ಮ ಸಂಪ್ರದಾಯ’ ವೇದಪಾಠಶಾಲೆ ವಿದ್ಯಾರ್ಥಿಗಳಿಂದ ವೇದಕೋಶಂ ಪ್ರಸ್ತುತಿ ಇದೆ.

ಕಾರ್ಯಕ್ರಮದ ವಿವರ ಇಂತಿದೆ...ಆ.7: ಷಣ್ಮುಗಪ್ರಿಯಾ, ಹರಿಪ್ರಿಯಾ (ಪ್ರಿಯಾ ಸಹೋದರಿಯರು) ಅವರಿಂದ ಗಾಯನ. ಸಂಜೆ 5.30.ಆ.8: ಟಿ.ಎಸ್‌. ಪಟ್ಟಾಭಿರಾಮ ಪಂಡಿತ್‌ ತಂಡದಿಂದ ಗಾಯನ. ಸಂಜೆ 6.ಆ.9: ಜಿಜೆಆರ್‌ ಕೃಷ್ಣನ್‌, ವಿಜಯಲಕ್ಷ್ಮಿ ಅವರಿಂದ ದ್ವಂದ್ವ ಪಿಟೀಲು ವಾದನ.  ಸಂಜೆ 6.ಆ.10: ಸಾಕೇತರಾಮನ್‌ ತಂಡದಿಂದ ಗಾಯನ. ಸಂಜೆ 6.ಆ.11: ಸಿಕ್ಕಿಲ್‌ ಮಾಲಾ ಚಂದ್ರಶೇಖರ್‌ ಅವರಿಂದ ಕೊಳಲು ವಾದನ. ಸಂಜೆ 6.ಆ.12: ಶ್ರೀಕೃಷ್ಣಮೋಹನ್‌, ರಾಮಕುಮಾರ್‌ ಮೋಹನ್‌ (ತ್ರಿಚೂರು ಸಹೋದರರು) ಅವರಿಂದ ಗಾಯನ. ಸಂಜೆ 6.ಆ.13: ವಿಶಾಖಾ ಹರಿ ತಂಡದಿಂದ ಗಾಯನ. ಸಂಜೆ 6.ಆ.14: ನಿತ್ಯಶ್ರೀ ತಂಡದಿಂದ ಗಾಯನ. ಸಂಜೆ 5.30.ಆ.15: ಸಂಜೆ 4.45ಕ್ಕೆ ಆದೇಶ್‌ ಸುಂದರೇಶನ್‌ ತಂಡದಿಂದ ಗಾಯನ. ಸಂಜೆ 6ಕ್ಕೆ ಸಿಕ್ಕಿಲ್ ಗುರುಚರಣ್‌ ತಂಡದಿಂದ ಗಾಯನ.ಆ.16: ಎನ್‌. ರವಿಕಿರಣ್‌ ಅವರಿಂದ ಗಾಯನ. ಸಂಜೆ 6.ಆ.17: ರಾಮಕೃಷ್ಣನ್‌ ಮೂರ್ತಿ ತಂಡದಿಂದ ಗಾಯನ. ಸಂಜೆ 6.ಆ.18: ಸಂದೀಪ್‌ ನಾರಾಯಣ್‌ ತಂಡದಿಂದ ಗಾಯನ. ಸಂಜೆ 6.ಆ.19: ಎಂ. ವೆಂಕಟೇಶಕುಮಾರ್‌ ತಂಡ. ಸಂಜೆ 6.ಆ.20: ಸುಧಾ ರಘುನಾಥನ್‌ ತಂಡ. ಸಂಜೆ 6.

ಆ.21: ಒ.ಎಸ್‌. ಅರುಣ್‌ ತಂಡ. ಸಂಜೆ 5.30.ಆ.22: ಪಿ. ಉನ್ನಿಕೃಷ್ಣನ್‌ ತಂಡ. ಸಂಜೆ 6.ಆ.23: ಸಂಜೆ 7ಕ್ಕೆ ಸೊಲಿನ್‌ ಸೆಲ್ವಿ ಸಲೀಮ್‌ ರುಕ್ಮಿಣಿ ಅವರಿಂದ ಪ್ರವಚನ.ಆ.23: ರಿಂದ 26: ಶ್ಯಾಮ್‌ ಕೃಷ್ಣ ಸತೀಶ್‌, ಉಷಾ ಸಾವಿತ್ರಿ, ಆರ್‌. ಸಿಂಧು, ಶ್ವೇತಾ ಮಲ್ಲಿಕಾರ್ಜುನ ಅವರಿಂದ ಭಕ್ತಿ ಗೀತೆಗಳ ಗಾಯನ. ಸಂಜೆ 5.55.ಆ.25: ರಾತ್ರಿ 8ಕ್ಕೆ ರಾಧಾ ಮಾಮಿ ಅವರಿಂದ ಸಂಪೂರ್ಣ ನಾರಾಯಣೀಯಂ. ರಾತ್ರಿ 9ಕ್ಕೆ ಮಂಜಪ್ರ ಮೋಹನ್‌ ಅವರಿಂದ ಭಜನೆ.ಆ.27: ಮಧ್ಯಾಹ್ನ 3.30ಕ್ಕೆ ಚೆನ್ನೈನ ಎವಿಕೆ ರಾಜಸಿಂಹನ್‌ ತಂಡದಿಂದ ಪಂಚಪದಿ. ಸಂಜೆ 6.30ಕ್ಕೆ ಹೈದರಾಬಾದ್‌ನ ಜೆ.ಎಸ್‌.ಈಶ್ವರ ಪ್ರಸಾದ್‌, ಜೆ.ಎಸ್‌.ಶ್ರೀರಾಮ್‌ ತಂಡದಿಂದ  ‘ದಾಸ ವಿಧ ರೂಪ ನಮೋ, ನಮೋ’ ನೃತ್ಯ ಸಂಕೀರ್ತನಂ.ಸ್ಥಳ: ಉನ್ನತಿ ಸೆಂಟರ್‌, ನಂ1, ಗಣೇಶ ದೇವಸ್ಥಾನದ ರಸ್ತೆ, ಎನ್‌ಜಿಇಎಫ್‌ ಲೇಔಟ್‌ (ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣ ಹಿಂಭಾಗ), ಸದಾನಂದನಗರ.

ಮಾಹಿತಿಗೆ: 080–25384642

ವೆಬ್‌ಸೈಟ್‌: www.unnatiblr.org

ಎಲ್ಲಾ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.