ಶುಕ್ರವಾರ, ಜನವರಿ 24, 2020
20 °C
1500 ಕ್ರೀಡಾಪಟುಗಳು

ನಾಳೆಯಿಂದ ರಾಷ್ಟ್ರೀಯ ಕೊಕ್ಕೊ ಪಂದ್ಯಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಡಿ.4ರಿಂದ 8ರವರೆಗೆ ನಗರದಲ್ಲಿ ಕೊಕ್ಕೊ ಕಲರವ. 25ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ಬಾಲಕ–ಬಾಲಕಿಯರ ಹಾಗೂ 24ನೇ ಪುರುಷ– ಮಹಿಳೆಯರ ಫೆಡರೇಷನ್‌ ಕಪ್‌ ಕೊಕ್ಕೊ ಪಂದ್ಯಾವಳಿಗೆ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನ ಸಿದ್ಧವಾಗಿದೆ.ಪಂದ್ಯಾವಳಿಯಲ್ಲಿ ಭಾಗವಹಿಸಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ, ವಿವಿಧ ವಲಯಗಳಿಂದ ಒಟ್ಟು 75 ತಂಡಗಳ 1500 ಕ್ರೀಡಾಪಟುಗಳು ಆಗಮಿಸಲಿದ್ದಾರೆ ಎಂದು ರಾಜ್ಯ ಕೊಕ್ಕೊ ಫೆಡರೇಷನ್‌ ಕಾರ್ಯದರ್ಶಿ ಲೋಕೇಶ್ವರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಡಿ. 4ರ ಸಂಜೆ 4 ಗಂಟೆಗೆ ಡಾ.ಶಿವಕುಮಾರ ಸ್ವಾಮೀಜಿ ಕ್ರೀಡಾ­ಕೂಟದ ಜಾಥಾಗೆ ಚಾಲನೆ ನೀಡ­ಲಿದ್ದು, ಬಿ.ಎಚ್‌.ರಸ್ತೆ, ಅಶೋಕ ರಸ್ತೆ ಹಾಗೂ ಎಂ.ಜಿ.ರಸ್ತೆಗಳಲ್ಲಿ ಜಾಥಾ ನಡೆಯಲಿದೆ. 5ರ ರಾತ್ರಿ 7 ಗಂಟೆಗೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಾ.ಜಿ.­ಪರಮೇಶ್ವರ್‌ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದು, 6ರಂದು ಪ್ರಿಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿವೆ. 8ರಂದು ಮುಕ್ತಾಯ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.ರಾಜ್ಯ ಕೊಕ್ಕೊ ಫೆಡರೇಷನ್‌ ಕಾರ್ಯದರ್ಶಿ ಲೋಕೇಶ್ವರ, ವಿವೇಕಾನಂದ ಕ್ರೀಡಾ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮುಖಂಡರಾದ ಧನಿಯಾಕುಮಾರ್‌, ಬಾಲಕೃಷ್ಣ ಇತರರು ಇದ್ದರು. 

ಪ್ರತಿಕ್ರಿಯಿಸಿ (+)