ಶುಕ್ರವಾರ, ಏಪ್ರಿಲ್ 16, 2021
25 °C

ನಾಳೆ ಜಿಲ್ಲಾಡಳಿತ ಭವನ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ:  ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜಿಲ್ಲೆಯಲ್ಲಿ ನ. 17ರಂದು ಪ್ರವಾಸ ಕೈಗೊಂಡಿದ್ದಾರೆ.

17ರಂದು ಬೆಳಿಗ್ಗೆ 10ಕ್ಕೆ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಆವರಣದಲ್ಲಿ ನಿರ್ಮಿಸಿರುವ ಆಸ್ಪತ್ರೆ ದಾನಿಗಳಾದ ಧರ್ಮಪ್ರಕಾಶ ಚಿಗಟೇರಿ ಮುರಿಗೆಪ್ಪ ಅವರ ಪುತ್ಥಳಿ ಅನಾವರಣ ಮಾಡುವರು.

 

ನಂತರ ಬೆಳಿಗ್ಗೆ 10.10ಕ್ಕೆ ನಗರದ ಪಿ.ಬಿ. ರಸ್ತೆಯ ಕರೂರು ಕ್ರಾಸ್‌ನಲ್ಲಿ ನಿರ್ಮಿಸಲಾಗಿರುವ ದಾವಣಗೆರೆಯ ನೂತನ ಜಿಲ್ಲಾಡಳಿತ ಭವನ ಉದ್ಘಾಟಿಸುವರು. ನಂತರ ಹೊನ್ನಾಳಿ ತಾಲೂಕಿನ ನ್ಯಾಮತಿ ಗ್ರಾಮದಲ್ಲಿ ನಡೆಯುವ 40ನೇ ಜನಸ್ಪಂದನ ಕಾರ್ಯಕ್ರಮ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭಾಂಗಣ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿ ಎಸ್.ಎ. ರವೀಂದ್ರನಾಥ್  ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಸತಿ ಸಚಿವ ವಿ. ಸೋಮಣ್ಣ, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಮುಖ್ಯಸಚೇತಕ  ಡಾ.ಎ.ಎಚ್. ಶಿವಯೋಗಿಸ್ವಾಮಿ ಭಾಗವಹಿಸುವರು.ಸ್ವಯಂ ಪ್ರಮಾಣ ಪತ್ರ ಸಲ್ಲಿಕೆಗೆ ಸೂಚನೆ

ಪ್ರಸ್ತುತ ಜಾರಿಯಲ್ಲಿರುವ ಕಂದಾಯ ಇಲಾಖೆಯ ನೆಮ್ಮದಿ ಸೇವೆಗಳಿಗೆ ಅರ್ಜಿದಾರರು, ಸಾರ್ವಜನಿಕರು ಮನವಿ ಸಲ್ಲಿಸಿದಾಗ ಕೆಲವು ಸೇವೆಗಳಿಗೆ ನೋಟರಿ ಸಮಕ್ಷಮ ದೃಢೀಕೃತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ಈ ದಾಖಲೆಯನ್ನು ಪಡೆಯಲು ಅರ್ಜಿದಾರರು ್ಙ 150ರಿಂದ 200 ರವರೆಗೆ ವೆಚ್ಚವಾಗುತ್ತಿತ್ತು. ಸಾರ್ವಜನಿಕರಿಗೆ ಈ ವೆಚ್ಚವು ಅನಗತ್ಯ ಹೊರೆಯೆಂದು ಸರ್ಕಾರವು ಪರಿಗಣಿಸಿರುತ್ತದೆ.ಪ್ರಯುಕ್ತ ಉಲ್ಲೆೀಖದ ಸರ್ಕಾರದ ಸುತ್ತೋಲೆಯನ್ವಯ ಸಾರ್ವಜನಿಕರು ನೆಮ್ಮದಿ ಯೋಜನೆಯಡಿ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸುವಾಗ ನೋಟರಿ ಸಮಕ್ಷಮ ದೃಢೀಕೃತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಿರುವುದಿಲ್ಲ. ಇದಕ್ಕೆ ಬದಲಾಗಿ ಬಿಳಿ ಕಾಗದದಲ್ಲಿ ಸ್ವಯಂ ಪ್ರಮಾಣಪತ್ರ (ಟಜಿ ಆಛಿಟಚಿಡಿಚಿಣಟಿ)ವನ್ನು ಹಾಜರು ಪಡಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನಾಳೆ ನಗರಕ್ಕೆ ಚಕ್ರವರ್ತಿ ಸೂಲಿಬೆಲೆನಗರದ ಬಾಪೂಜಿ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಮಹಾವಿದ್ಯಾಲಯದ ಮೈದಾನದಲ್ಲಿ ನಡೆಯುತ್ತಿರುವ ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಕಾರ್ಯಕ್ರಮಕ್ಕೆ ನ. 17ರಂದು ಚಕ್ರವರ್ತಿ ಸೂಲಿಬೆಲೆ ಹಾಗೂ ಪೊನ್ನಂಪೇಟೆಯ ಶ್ರೀರಾಮ ಕೃಷ್ಣಾಶ್ರಮದ ಸ್ವಾಮಿ ಜಗದಾತ್ಮನಂದಜೀ ಅವರು ಆಗಮಿಸುವರು.

ಅಂದು ಬೆಳಿಗ್ಗೆ 6.30ಕ್ಕೆ ಎಂದಿನಂತೆ ಪ್ರವಚನ ನಡೆಯಲಿದೆ ಎಂದು ಪ್ರವಚನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.