ಮಂಗಳವಾರ, ಮೇ 24, 2022
27 °C

ನಾವಿಕರ ಕಥನ

ಎಚ್.ಎಸ್. ರೋಹಿಣಿ Updated:

ಅಕ್ಷರ ಗಾತ್ರ : | |

ಒಬ್ಬ ಬಿಲ್ಲು ಎತ್ತಿದ್ದರೆ ಮತ್ತೊಬ್ಬ ಬಾಣ ಬಿಡುತ್ತಾನೆ. ಬಿಲ್ಲು ಎತ್ತಿದವನು ಬಾಣ ಯಾಕೆ ಬಿಡಲಿಲ್ಲ? ಬಾಣ ಬಿಟ್ಟವನು ಬಿಲ್ಲು ಯಾಕೆ ಎತ್ತಲಿಲ್ಲ? ಈ ಪ್ರಶ್ನೆಗಳಿಗೆಲ್ಲ ಉತ್ತರ `ನಾವಿಕ~ ಚಿತ್ರದಲ್ಲಿದೆ~ ಎಂದರು ಚಿತ್ರದ ನಾಯಕ ಮನೀಷ್ ಚಂದ್ರ.ಕಿರುತೆರೆಯಲ್ಲಿ ನಿರೂಪಕರಾಗಿರುವ ಮನೀಷ್ ಚಂದ್ರ ಮತ್ತು ಶ್ರವಂತ್ ನಾಯಕರಾಗಿರುವ `ನಾವಿಕ~ ಚಿತ್ರದ ಸೀಡಿ ಬಿಡುಗಡೆ ಸಮಾರಂಭ ಅದು.

ಕಳೆದ ಆಗಸ್ಟ್‌ನಲ್ಲಿ ಆರಂಭವಾದ ಈ ಸಿನಿಮಾದ ಆಡಿಯೋ ಇದೀಗ ಬಿಡುಗಡೆಯಾಗಿದೆ.ಅದಕ್ಕೆ ಕಾರಣ ನೀಡಿದ ನಿರ್ದೇಶಕ ಸೇನ್ ಪ್ರಕಾಶ್, `ಚಿತ್ರವನ್ನು ಉತ್ತಮವಾಗಿ ತೆರೆಗೆ ಸಿದ್ಧಪಡಿಸಬೇಕು ಎಂಬ ಕಾರಣದಿಂದ ನಿಧಾನವಾಗಿ ಕೆಲಸ ಮಾಡಿದೆವು. ಇದೀಗ ಚಿತ್ರೀಕರಣ ನಂತರದ ಎಲ್ಲಾ ತಾಂತ್ರಿಕ ಕೆಲಸಗಳೂ ಮುಗಿದಿವೆ. ಪ್ರಥಮ ಪ್ರತಿ ಸಿದ್ಧವಾಗುತ್ತಿದೆ~ ಎಂದರು.ಬೆಂಗಳೂರಿನಲ್ಲಿಯೇ 32 ದಿನಗಳ ಕಾಲ ಚಿತ್ರೀಕರಣ ಮುಗಿಸಿರುವ ಅವರು ತಮ್ಮ ಚಿತ್ರದ ಕತೆ ಪ್ರಸ್ತುತ ನಡೆಯುತ್ತಿರುವ ವಾಸ್ತವ ಅಂಶಗಳನ್ನು ಆಧಾರವಾಗಿ ಹೊಂದಿದೆ~ ಎಂದರು.`ಇದೊಂದು ಹೊಸ ಸಬ್ಜೆಕ್ಟ್. ರಂಗನಾಥ ಎಂಬುವರು ಕತೆ ಬರೆದಿದ್ದಾರೆ. ಈ ಚಿತ್ರದಲ್ಲಿ ಇಬ್ಬರೂ ನಟರ ಸ್ವಭಾವ ಪರಸ್ಪರ ವೈರುಧ್ಯದಿಂದ ಕೂಡಿದೆ. ನಮ್ಮ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದರೆ ಇಬ್ಬರು ಪ್ರತಿಭಾವಂತ ನಾಯಕ ನಟರು ಚಿತ್ರರಂಗಕ್ಕೆ ಸಿಕ್ಕಂತಾಗುತ್ತದೆ~ ಎಂದು ನಾಯಕರ ಬೆನ್ನು ತಟ್ಟಿದರು.ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಸಿಕ್ಕಿದ್ದರಿಂದ ದೇಹವನ್ನು ಅದಕ್ಕೆ ತಕ್ಕಂತೆ ರೂಪಿಸಿಕೊಂಡು ನಟಿಸಿದ್ದ ಶ್ರವಂತ್ `ಚಿಕ್ಕಮಗಳೂರು ಚಿಕ್ಕಮಲ್ಲಿಗೆ~ ಚಿತ್ರದ ನಂತರ ನಾಯಕನಾಗುವ ಅವಕಾಶ ಸಿಕ್ಕಿದ್ದನ್ನು ಸಂತಸದಿಂದ ಹಂಚಿಕೊಂಡರು. `ಹಿಂದಿನ ಚಿತ್ರದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಈ ಸಿನಿಮಾ ಮಾಡಿರುವೆ~ ಎಂದರು.ಮನೀಷ್, ಶ್ರವಂತ್ ಅವರ ಬದ್ಧತೆಯನ್ನು ಮೆಚ್ಚಿಕೊಂಡರು. ಒಳ್ಳೆಯವನಾ? ಕೆಟ್ಟವನಾ? ಎಂಬ ಗೊಂದಲ ಹುಟ್ಟುಹಾಕುವ ಡಬಲ್ ಶೇಡ್ ಇರುವ ಪಾತ್ರ ಮನೀಷ್ ಅವರದಂತೆ.ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮತ್ತು ಸಾ.ರಾ.ಗೋವಿಂದು ಸೀಡಿಗಳನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. ಸಂಗೀತ ನಿರ್ದೇಶಕ ರಾಜ್ ನಾರಾಯಣ್, ಸಂಭಾಷಣೆಕಾರ ಯೋಗಿ, ಸಂಕಲನಕಾರ ರವಿ ಹಾಜರಿದ್ದರು. ನಾಯಕಿಯರಾದ ಸ್ವಾತಿ, ಎಸ್ತಾರ್ ಜನ್ನತ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.