ಬೆಂಗಳೂರು: ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ 224 ಮಂದಿ ಪೈಕಿ, 213 ಶಾಸಕರು ಚುನಾವಣೆಯಲ್ಲಿ ಸರಾಸರಿ 7.43 ಲಕ್ಷರೂಪಾಯಿ ವೆಚ್ಚ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ 16 ಲಕ್ಷ ರೂಪಾಯಿ ವೆಚ್ಚ ಮಾಡಲು ಅವಕಾಶ ಇದೆ. ಆದರೆ, ಬಹುತೇಕ ಶಾಸಕರು ಮಾಡಿರುವ ವೆಚ್ಚ 7.43 ಲಕ್ಷಕ್ಕಿಂತ (ನಿಗದಿಪಡಿಸಿದ ಮೊತ್ತದ ಶೇ 46ರಷ್ಟು) ಕಡಿಮೆ ಇದೆ ಎಂದು ರಾಷ್ಟ್ರೀಯ ಚುನಾವಣಾ ಕಾವಲು ಸಮಿತಿ ತಿಳಿಸಿದೆ.

ಚುನಾವಣಾ ವೆಚ್ಚದ ಮಾಹಿತಿಯನ್ನು ಶಾಸಕರು ಚುನಾವಣಾ ಆಯೋಗಕ್ಕೆ ನೀಡಿದ್ದು, ಅವರು ನೀಡಿರುವ ಮಾಹಿತಿ ಆಧರಿಸಿ ಸಮಿತಿಯು ಕ್ಷೇತ್ರವಾರು ಶಾಸಕರ ವಿಶ್ಲೇಷಣೆ ಮಾಡಿದೆ.

ಬಸವಕಲ್ಯಾಣ ಶಾಸಕರಾದ ಜೆಡಿಎಸ್ನ ಮಲ್ಲಿಕಾರ್ಜುನ ಖುಬಾ ಅವರು ಆಯೋಗ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿಗೆ (16.03 ಲಕ್ಷ ರೂಪಾಯಿ) ಖರ್ಚು ಮಾಡಿದ್ದಾರೆ. ಪಕ್ಷೇತರ ಶಾಸಕರಾದ ಬಾಗೇಪಲ್ಲಿಯ ಎಸ್.ಎನ್.ಸುಬ್ಬಾರೆಡ್ಡಿ ಅತಿ ಕಡಿಮೆ ಅಂದರೆ 1.13 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ.

ಜಗಳೂರು ಶಾಸಕರಾದ ಕಾಂಗ್ರೆಸ್ನ ಎಚ್ .ಪಿ.ರಾಜೇಶ್ ಅವರು ಘೋಷಿತ ಆಸ್ತಿಗಿಂತ ಹೆಚ್ಚಿಗೆ ಖರ್ಚು ಮಾಡಿದ್ದಾರೆ. ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಟ್ಟು ಆಸ್ತಿಯ ಮೌಲ್ಯ 7.50 ಲಕ್ಷರೂಪಾಯಿ ಎಂದು ಘೋಷಿಸಿಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ಮಾಡಿರುವ ವೆಚ್ಚ 11.89 ಲಕ್ಷ ರೂಪಾಯಿ.

ಕಾಂಗ್ರೆಸ್ನ 117 ಶಾಸಕರು ಮಾಡಿರುವ ಮಾಹಿತಿ ಲಭ್ಯವಾಗಿದ್ದು, ಸರಾಸರಿ 7.53 ಲಕ್ಷ ರೂಪಾಯಿ (ನಿಗದಿಪಡಿಸಿದ ಮೊತ್ತದ ಶೇ 47ರಷ್ಟು), ಬಿಜೆಪಿಯ 37 ಶಾಸಕರು ಸರಾಸರಿ 7.20 ಲಕ್ಷ ರೂಪಾಯಿ (ನಿಗದಿಪಡಿಸಿದ ಮೊತ್ತದ ಶೇ 45), ಜೆಡಿಎಸ್ನ 37 ಶಾಸಕರು ಸರಾಸರಿ 7.47 ಲಕ್ಷ ರೂಪಾಯಿ (ನಿಗದಿಪಡಿಸಿದ ಮೊತ್ತದ ಶೇ 47) ವೆಚ್ಚ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಕೆಜೆಪಿಯ ಆರು ಶಾಸಕರು ಸರಾಸರಿ 7.20 ಲಕ್ಷ ರೂಪಾಯಿ (ನಿಗದಿಪಡಿಸಿದ ಮೊತ್ತದ ಶೇ 45), ಬಿಎಸ್ಆರ್ ಕಾಂಗ್ರೆಸ್ನ ನಾಲ್ಕು ಮಂದಿ ಶಾಸಕರು ಸರಾಸರಿ 6.09 ಲಕ್ಷ ರೂಪಾಯಿ (ನಿಗದಿಪಪಡಿಸಿದ ಮೊತ್ತದ ಶೇ 38) ವೆಚ್ಚ ಮಾಡಿದ್ದಾರೆ.

ಕಡಿಮೆ ವೆಚ್ಚ: 15 ಶಾಸಕರು ಸರಾಸರಿ ನಾಲ್ಕು ಲಕ್ಷ ರೂಪಾಯಿ (ನಿಗದಿಪಡಿಸಿದ ಮೊತ್ತದ ಶೇ 25ರಷ್ಟು) ವೆಚ್ಚ ಮಾಡಿದ್ದಾರೆ. ಸಾರ್ವಜನಿಕ ಸಭೆ, ಮೆರವಣಿಗೆ ಇತ್ಯಾದಿಗಳಿಗೆ ವೆಚ್ಚ ಮಾಡಿಲ್ಲ ಎಂದು 28 ಶಾಸಕರು ಹಾಗೂ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಯಾವುದೇ ವೆಚ್ಚ ಮಾಡಿಲ್ಲ ಎಂದು 73 ಶಾಸಕರು ಘೋಷಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಕಾರ್ಯಕರ್ತರಿಗೆ ಯಾವುದೇ ರೀತಿಯ ವೆಚ್ಚ ಮಾಡಿಲ್ಲ ಎಂದು 102 ಶಾಸಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.