ಮಂಗಳವಾರ, ಮೇ 18, 2021
22 °C

ನಿಧನ ವಾರ್ತೆ:ಮಾಜಿ ಶಾಸಕಿ ಭಾಗೀರಥಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಹಿರಿಯ  ಸ್ವಾತಂತ್ರ್ಯ  ಹೋರಾಟ ಗಾರ್ತಿ, ಮಾಜಿ  ಶಾಸಕಿ  ಜೆ.ಸಿ.ಭಾಗೀರ ಥಮ್ಮ (90)  ನಗರದಲ್ಲಿ ಭಾನುವಾರ ನಿಧನರಾದರು.ಅವರ ಅಂತ್ಯಕ್ರಿಯೆಯು ನಗರದಲ್ಲಿ ಭಾನುವಾರ ಸಂಜೆ ನಡೆಯಿತು.

 ಭಾಗೀರಥಮ್ಮ ಅವರಿಗೆ ಇಬ್ಬರು ಪುತ್ರಿಯರು, ಮೂವರು ಪುತ್ರರು ಇದ್ದಾರೆ.ಭಾಗೀರಥಮ್ಮ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ 19 ತಿಂಗಳ ಜೈಲುವಾಸ ಅನುಭವಿಸಿದ್ದರು. ಇವರ ಪತಿ ಜೆ.ಆರ್.ಚೆಂಗಲಾರಾಧ್ಯ ಕೂಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.1960ರಲ್ಲಿ ತುಮಕೂರು ತಾಲ್ಲೂಕು ಬೋರ್ಡ್ ಸದಸ್ಯೆಯಾಗಿ ಆಯ್ಕೆಯಾಗಿದ್ದ ಭಾಗೀರಥಮ್ಮ, ನಂತರ 1962ರಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕರ್ನಾಟಕ ಸೋಷಿಯಲ್ ವೆಲ್‌ಫೇರ್ ಅಡ್ವೈಸರಿ ಬೋರ್ಡ್‌ನ ಸದಸ್ಯೆಯಾಗಿ 18 ವರ್ಷ ಕಾಲ ಸೇವೆ ಸಲ್ಲಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.