ಸುರೇಶ್ ಮುಂಡವಾಡ್, ಹೂವಿನ ಹಡಗಲಿ

ನಮ್ಮ 2 ವರ್ಷ ಮಗುವಿಗೆ 2011ರಲ್ಲಿ ಪಿಡಿಎ ಡಿವೈಸ್ ಕ್ಲೋಷರ್ ಚಿಕಿತ್ಸೆಯನ್ನು ಮಾಡಿಸಿರುತ್ತೇವೆ. ಮಗು ಹೆಚ್ಚಿಗೆ ಆಟ ಆಡುವುದು, ಓಡುವುದರಿಂದ ಏನಾದರೂ ತೊಂದರೆ ಆಗುತ್ತದೆಯೇ? ಮುಂಜಾಗ್ರತೆ ಏನಾದರೂ ವಹಿಸಬೇಕಾಗುತ್ತದೆಯೆ? ಮಕ್ಕಳಲ್ಲಿ ಕಾಣಿಸಿಕೊಳ್ಳುವ ಹೃದಯ ರಂಧ್ರಗಳ ಲಕ್ಷಣಗಳೇನು?

ಮಕ್ಕಳಲ್ಲಿ ಹುಟ್ಟಿನಿಂದಲೇ ಹೃದಯ ರಂಧ್ರಗಳ ಸಮಸ್ಯೆ ಬರುತ್ತದೆ. ಹುಟ್ಟಿದ ಪ್ರತಿ 1000 ಮಕ್ಕಳಲ್ಲಿ 5 ರಿಂದ 6 ಮಕ್ಕಳಿಗೆ ಈ ರಂಧ್ರದ ಸಮಸ್ಯೆ ಇರುತ್ತದೆ. ಇದರ ಸಾಮಾನ್ಯ ಲಕ್ಷಣಗಳೇನೆಂದರೆ, ಪದೇ ಪದೇ ಕೆಮ್ಮು, ಜ್ವರ, ನ್ಯುಮೋನಿಯಾ, ಬೆಳವಣಿಗೆ ಕುಂಠಿತ ಇರುತ್ತದೆ. ಎಕೋಕಾರ್ಡಿಯೋಗ್ರಾಮ್ ಪರೀಕ್ಷೆ ಮಾಡಿಸಿದರೆ ಈ ಹೃದಯ ರಂಧ್ರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

ತಮ್ಮ 2 ವರ್ಷದ ಮಗುವಿಗೆ ಪಿಡಿಎ ಎಂಬ ಹೃದಯ ರಂಧ್ರದ ಕಾಯಿಲೆಗೆ ಡಿವೈಸ್ ಕ್ಲೋಷರ್ ಚಿಕಿತ್ಸೆ ಆಗಿರುವ ಬಗ್ಗೆ ಹೇಳಿದ್ದೀರಿ. ಒಂದು ಬಾರಿ ಈ ಡಿವೈಸ್ ಮೂಲಕ ಮುಚ್ಚಿದ ಮೇಲೆ, ಪುನಃ ಹೃದಯದ ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಇದನ್ನು ನೀವು ಲೈಫ್ ಟೈಮ್ ಕ್ಯೂರ್ ಎಂದೇ ಭಾವಿಸಬಹುದು. ಮಗುವು ಹೆಚ್ಚಾಗಿ ಆಟ ಆಡುವುದು, ಓಡುವುದರಿಂದ ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ.

ಹಿಂದೆ ಈ ಹೃದಯ ರಂಧ್ರ ಕಾಯಿಲೆಗಳಿಗೆ ಸಾಮಾನ್ಯವಾಗಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯ ಮೂಲಕ ಮುಚ್ಚಲಾಗುತ್ತಿತ್ತು. ಕಳೆದ 10 ವರ್ಷಗಳಿಂದ ಶೇಕಡ 50 ರಷ್ಟು ಹೃದಯ ರಂಧ್ರಗಳನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆಯೇ ಅಂಬ್ರೆಲಾ ಡಿವೈಸ್ ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ ಅಂಬ್ರೆಲಾ ಡಿವೈಸ್ ಚಿಕಿತ್ಸೆಗೆ ಎದೆಯನ್ನು ಸೀಳುವ ಅವಶ್ಯಕತೆ / ರಕ್ತದ ಬೇಡಿಕೆ (ಬ್ಲಡ್ ಟ್ರಾನ್ಸ್ಫ್ಯೂಷನ್) ಅಥವಾ ಹೃದಯದ ಮೇಲೆ ಯಾವುದೇ ಗಾಯದ ಗುರುತು (ಸ್ಕಾರ್) ಕೂಡ ಇರುವುದಿಲ್ಲ. ತಾವು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸಂತೋಷವನ್ನು ವ್ಯಕ್ತಪಡಿಸಿರುತ್ತಿರಿ. ನಿಮಗೆ ನಮ್ಮ ಧನ್ಯವಾದಗಳು.

ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಭೂಮಿಕಾ (ನಿಮ್ಮ ಹೃದಯ),75, ಎಂ ಜಿ ರಸ್ತೆ, ಬೆಂಗಳೂರು - 1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.