ಶನಿವಾರ, ಫೆಬ್ರವರಿ 27, 2021
31 °C
ಆಟೊಗೆ ಕ್ರಮ ಸಂಖ್ಯೆ ನೀಡಿಕೆ, ದಾಖಲಾತಿ ಪಡೆಯಲು ತಾಕೀತು, ಸಂಯಮದಿಂದ ನಡೆಯಲು ಸಲಹೆ

ನಿಯಮ ಪಾಲಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಯಮ ಪಾಲಿಸಲು ಸೂಚನೆ

ದೊಡ್ಡಬಳ್ಳಾಪುರ: ನಗರದಲ್ಲಿ ಸೂಕ್ತ ದಾಖಲಾತಿ ಇಲ್ಲದ ಆಟೊಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ನಗರ ಪೊಲೀಸ್‌ ಠಾಣೆಗೆ ಕಡ್ಡಾಯವಾಗಿ ಸೂಕ್ತ ದಾಖಲಾತಿ ನೀಡಿ ಕ್ರಮ ಸಂಖ್ಯೆ ಪಡೆಯಬೇಕು ಎಂದು ಡಿವೈಎಸ್ಪಿ ಟಿ.ಕೋನಪ್ಪರೆಡ್ಡಿ ಹೇಳಿದರು.

ಅವರು ಸೋಮವಾರ ನಗರ ಪೊಲೀಸ್‌ ಠಾಣೆಯಿಂದ ಜಾರಿಗೆ ತಂದಿರುವ ಆಟೊಗಳಿಗೆ ಕ್ರಮ ಸಂಖ್ಯೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸೂಕ್ತ ದಾಖಲಾತಿ, ದುಸ್ಥಿತಿಯಲ್ಲಿ ಇಲ್ಲದ ಆಟೊಗಳನ್ನು ನಗರದಲ್ಲಿ ಸಂಚರಿಸಲು ಅನುಮತಿ ನೀಡುವುದಿಲ್ಲ. ಇದರಿಂದ ಅಪಘಾತಗಳು ನಡೆದಾಗ ಪ್ರಯಾಣಿಕರಿಗೆ ಯಾವುದೇ ಪರಿಹಾರ ದೊರೆಯದಂತೆ ಜೀವನದುದ್ದಕ್ಕೂ ಪರಿತಪಿಸುವಂತಾಗುತ್ತಿದೆ. ಇಂತಹ ಆಟೊಗಳನ್ನು ಓಡಿಸುವುದು ಚಾಲಕರ ಹಾಗೂ ಅವರನ್ನು ನಂಬಿಕೊಂಡಿರುವ ಕುಟುಂಬದ ಹಿತದೃಷ್ಟಿಯಿಂದ ಅಪಾಯಕಾರಿ ಎಂದು ಅವರು ತಿಳಿಸಿದರು.

ಕ್ರಮ ಸಂಖ್ಯೆ ನೀಡುತ್ತಿರುವುದರಿಂದ ಯಾವುದೇ ಆಟೊಗಳನ್ನು ಅಪಘಾತ ನಡೆದಾಗ ಮತ್ತಿತರೆ  ಸಂದರ್ಭಗಳಲ್ಲಿ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.ಆಟೊ ಚಾಲಕರು ಸಂಚಾರ ನಿಮಯಗಳ ಪಾಲನೆ, ಸಾರ್ವಜನಿಕರೊಂದಿಗೆ ಸಂಯಮದಿಂದ ನಡೆದುಕೊಳ್ಳುವ ಮೂಲಕ ಸೇವೆ ಒದಗಿಸಬೇಕು. ಪೊಲೀಸರಿಂದ ಯಾವುದೇ ರೀತಿಯ ತೊಂದರೆಗಳು ಎದುರಾದಾಗ ಮೇಲಾಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಕುಮಾರ್‌, ನಗರ ಠಾಣೆಯ ಸಬ್‌ಇನ್‌ ಸ್ಪೆಕ್ಟರ್‌ ಜಗದೀಶ್‌, ಕೃಷ್ಣಕುಮಾರ್‌ ಮತ್ತಿತರರು ಹಾಜರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.