ಭಾನುವಾರ, ಮೇ 9, 2021
25 °C

ನಿರೀಕ್ಷಿತ ಸೇವೆ: ಯಶಸ್ವಿಯಾಗದ ಆರೋಗ್ಯ ಇಲಾಖೆ

ಕೆ.ನರಸಿಂಹಮೂರ್ತಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಇಂದು ರಾಜ್ಯಾದ್ಯಂತ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ದಿನ ಆಚರಿಸಲಾಗುತ್ತಿದೆ. ಆದರೆ ಆರೋಗ್ಯ ಸೇವೆ ಎಲ್ಲ ಅರ್ಹರಿಗೆ ತಲುಪಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿಲ್ಲ ಎಂಬ ವಿಷಾದವೂ ಹಾಗೇ ಉಳಿದಿದೆ. ಇದೇ ವೇಳೆ, ಕಾರ್ಯಕ್ರಮದ ಕುರಿತು ಜಿಲ್ಲಾ ಆರೋಗ್ಯ ಇಲಾಖೆಯು ಹೆಚ್ಚು ಪ್ರಚಾರವನ್ನೂ ಕೈಗೊಳ್ಳದಿರುವುದೂ ಗಮನ ಸೆಳೆದಿದೆ.`60 ಸಾವಿರಕ್ಕಿಂತ ಹೆಚ್ಚಿನ ಉದ್ಯೋಗಿಗಳು ಆರೋಗ್ಯ ಸೇವೆ ನೀಡುತ್ತಿದ್ದರೂ ಬಡಜನರನ್ನು ತಲುಪುವಲ್ಲಿ ಮತ್ತು ವಿಶ್ವಾಸದ ಭರವಸೆ ಮೂಡಿಸುವಲ್ಲಿ ಇಲಾಖೆ ಪೂರ್ಣ ಯಶಸ್ವಿಯಾಗಿಲ್ಲ~ ಎಂಬುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.ಆರೋಗ್ಯ ದಿನ ಆಚರಿಸುವ ಮಾರ್ಗಸೂಚಿಯನ್ನು ಕಳೆದ ಜುಲೈನಲ್ಲಿ ರಾಜ್ಯದ 27 ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿದಂತೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ತಲುಪಿಸಿರುವ ಇಲಾಖೆ ಆಯುಕ್ತರು ಮತ್ತು ರಾಷ್ಟ್ರೀಯ ಗ್ರಾಮೀಣ ಅಭಿಯಾನದ ನಿರ್ದೇಶಕರು ಈ ಅಂಶವನ್ನು ಗಂಭೀರವಾಗಿ ಪ್ರಸ್ತಾಪ ಮಾಡಿದ್ದಾರೆ.

`ಈ ಕುರಿತು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು  ದಿನವೂ ದೂರುತ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಆರೋಗ್ಯ ಸೇವೆಗಳಲ್ಲಿ ಸಮುದಾಯದ ಸಹಭಾಗಿತ್ವವೇ ಇಲ್ಲದಿರುವುದು~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.8568 ಉಪಕೇಂದ್ರಗಳು,  2194 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 180 ಸಮುದಾಯ ಆರೋಗ್ಯ ಕೇಂದ್ರಗಳು, 27 ಜಿಲ್ಲಾ ಆಸ್ಪತ್ರೆಗಳು, 10 ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗಳ ಮೂಲಕ ಆರೋಗ್ಯ ಸೇವೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಆದರೂ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಆರೋಗ್ಯ ಸೇವೆಯಲ್ಲಿ ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸಲು  ಸಮುದಾಯ ಆರೋಗ್ಯ ದಿನವನ್ನು ಆಚರಿಸಲು ಇಲಾಖೆ ತೀರ್ಮಾನಿಸಿದೆ. 2011-12ನೇ ಸಾಲಿನಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಆಗಸ್ಟ್/ ಫೆಬ್ರುವರಿ ತಿಂಗಳಲ್ಲಿ ಒಂದು ದಿನವನ್ನು ಸಮುದಾಯ ಆರೋಗ್ಯ ದಿನವನ್ನಾಗಿ ಇಲಾಖೆ ಆಚರಿಸಲಿದೆ.ಮಾಹಿತಿಯೇ ಇಲ್ಲ: ಸಮುದಾಯಕ್ಕೆ ಆರೋಗ್ಯದ ಬಗ್ಗೆ, ಇಲಾಖೆಯ ಯೋಜನೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ದೊರಕುವ ಸೌಲಭ್ಯ, ಇದುವರೆಗೆ ಮಾಡಿದ ಸಾಧನೆ ಅರಿವು ಮೂಡಿಸುವ ಮಹತ್ವದ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ  ತಿಳಿಸಲಾಗಿದೆ.ಜಿಲ್ಲೆಯ ಹಲವು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಪೂರ್ವಭಾವಿಯಾಗಿ ಕೆಲವು ಸಭೆ ನಡೆಸಿದ್ದು ಮತ್ತು ದೂರವಾಣಿ ಮೂಲಕ ಗಣ್ಯರಿಗೆ, ಮಾಧ್ಯಮದ ಮಂದಿಗೆ ಆಹ್ವಾನ ನೀಡಿದ್ದನ್ನು ಹೊರತುಪಡಿಸಿದರೆ, ಬೇರೆ ಪ್ರಚಾರ  ನಡೆಸಿದ್ದು ಕಂಡುಬಂದಿಲ್ಲ.ದಿನಾಚರಣೆಗೂ ಮುನ್ನ  ಹೆಲ್ತ್ ಬುಲೆಟಿನ್ ಅನ್ನು ಹೊರತರಬೇಕು. ಮಾರ್ಗಸೂಚಿಯ ಅನ್ವಯ ಬುಲೆಟಿನ್ ಹೊರತಂದ ಉದಾಹರಣೆಯೂ ಜಿಲ್ಲೆಯಲ್ಲಿ ಕಂಡುಬಂದಿಲ್ಲ.

ಮುಖ್ಯಾಂಶಗಳು

* ಜನಸಂಖ್ಯೆ 15,40,231

* ಹಳ್ಳಿಗಳು 1598

* ಜಿಲ್ಲಾ ಆಸ್ಪತ್ರೆಗಳು 2

* ತಾಲ್ಲೂಕು ಆಸ್ಪತ್ರೆಗಳು 4

* ಸಮುದಾಯ ಆರೋಗ್ಯ ಕೇಂದ್ರ  2

* ಪ್ರಾಥಮಿಕ ಆರೋಗ್ಯ ಕೇಂದ್ರಗಳು 59

* 24-7 ಆರೋಗ್ಯ ಕೇಂದ್ರಗಳು 43

* ಉಪಕೇಂದ್ರಗಳು 265

* ಆಶಾ ಕಾರ್ಯಕರ್ತೆಯರು 963

* ಖಾಸಗಿ ವೈದ್ಯಕೀಯ ಕಾಲೇಜು 1

* ಗ್ರಾಮ ನೈರ್ಮಲ್ಯ ಸಮಿತಿ- 1311

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.