ಸೋಮವಾರ, ಜೂನ್ 21, 2021
27 °C

ನಿರೂಪಣಾ ಶೈಲಿಯಿಂದ ಹಿಡಿದಿಡುವ ‘ಪ್ರಸ್ಥಾನ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕುತೂಹಲಗಳ ಜತೆ­ಯಲ್ಲಿ ನಿರೂಪಣಾ ಶೈಲಿ­ಯಿಂದಲೇ ಓದು­ಗ­ನನ್ನು ಹಿಡಿದಿಡುವ ಶಕ್ತಿ ‘ಪ್ರಸ್ಥಾನ’  ಕಾದಂಬರಿ­ಗಿದೆ’ ಎಂದು ಚಲನ­ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ತಿಳಿಸಿದರು.



ಸಿವಿಜಿ ಇಂಡಿಯಾ ಸಂಸ್ಥೆಯು ಉದಯ­ಭಾನು ಕಲಾಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಸುರೇಶ ಪಾಟೀಲರ ‘ಪ್ರಸ್ಥಾನ’ ಕಾದಂಬರಿ­ಬಿಡುಗಡೆ ಮಾಡಿ ಮಾತನಾಡಿದರು.



‘ನವೋದಯ, ನವ್ಯ ಹಾಗೂ ನವ್ಯೋತ್ತರ ಸೇರಿದಂತೆ ಎಲ್ಲ ಪರಂಪರೆಗಳಿಗೂ ದಕ್ಕುವ ಶ್ರೇಷ್ಠ ಕೃತಿ ಇದಾಗಿದ್ದು, ವಿಮರ್ಶಾ ವಲಯದಲ್ಲಿ ಹೆಚ್ಚಿನ ಮಾನ್ಯತೆ ದೊರೆಯಬೇಕು’ ಎಂದು ಹೇಳಿದರು.



‘ಸಾಹಿತ್ಯ ಅರಿವಿನ ವಿಸ್ತಾರವನ್ನು ಹೆಚ್ಚಿಸಬೇಕೆ ಅಥವಾ ಮನೋರಂಜನೆ ವಸ್ತುವಾಗಬೇಕೆ ಎಂಬುದು ಇಂದಿಗೂ ಚರ್ಚಿತ ವಿಷಯವೇ. ಆದರೆ ಮನೋರಂಜನೆಯ ಧಾಟಿಯನ್ನು ಬಳಸದೇ, ರೋಚಕ  ಶೈಲಿ ಅನುಸರಿಸದೇ ಕುತೂಹಲ ಮೂಡಿಸುವ ಕಥನ ಶೈಲಿಗೆ ಬೆರಗಾಗಿದ್ದೇನೆ’ ಎಂದು ಶ್ಲಾಘಿಸಿದರು.



‘ವೈದ್ಯಕೀಯ ಹಾಗೂ ಮಾಧ್ಯಮ ಕ್ಷೇತ್ರಗಳ ಧಾವಂತಗಳ  ಮಧ್ಯೆ ಆದರ್ಶವನ್ನೇ ಹೊತ್ತಕೊಂಡ ನಾಯಕನ ಕಥಾವಸ್ತು ಪ್ರಸ್ತುತ ಸಮಾಜವನ್ನು ನೈಜವಾಗಿ ಬಿಂಬಿಸುವಲ್ಲಿ ಯಶ್ವಸಿಯಾಗಿದೆ’ ಎಂದರು.



ಕತೆಗಾರ ಡಾ.ಕೆ.ಸತ್ಯನಾರಾಯಣ, ‘ಸುರೇಶ ಅವರು ಸಂಬಂಧಗಳ ಸಂಕೀರ್ಣತೆ ಹಾಗೂ ಆದರ್ಶಗಳ ಜಟಿಲ­ತೆಯನ್ನು ನವಿರಾದ ಕಥಾ ವಿನ್ಯಾಸದ ಮೂಲಕ ಸೆರೆಹಿಡಿದಿದ್ದಾರೆ’ ಎಂದರು.



ಚಿಂತಕ ಡಾ.ಬೈರಮಂಗಲ ರಾಮೇಗೌಡ, ‘ಸಾಹಿತ್ಯ ಕ್ಷೇತ್ರದಲ್ಲಿ ಜಾತಿ ಹಾಗೂ ಗುಂಪುಗಾರಿಕೆ ಹೆಚ್ಚಾಗಿರುವುದರಿಂದ ಯೋಗ್ಯ ಕೃತಿಗಳ  ಬಗ್ಗೆ ಸಮರ್ಪಕ ವಿಮರ್ಶೆ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.