ಜಾಲಹಳ್ಳಿ ಕ್ರಾಸ್ನಲ್ಲಿ ಸಿಗ್ನಲ್ ನಂತರವಿದ್ದ ವಾಹನ ನಿಲ್ದಾಣವನ್ನು ಪೀಣ್ಯ 1ನೇ ಹಂತಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.

ಗೊರಗುಂಟೆಪಾಳ್ಯದಿಂದ ಪೀಣ್ಯ 1ನೇ ಹಂತದ ನಿಲ್ದಾಣಕ್ಕೆ ಎಲ್ಲಾ ಬಸ್ಸುಗಳು ಎಡಗಡೆ ಚಲಿಸಬೇಕಾದ್ದರಿಂದ ಜಾಲಹಳ್ಳಿ ಕ್ರಾಸ್ ಸಿಗ್ನಲ್ ದಾಟಲು 5 ರಿಂದ 10 ನಿಮಿಷ ಬೇಕಾಗುತ್ತಿದೆ.

ಅಲ್ಲದೆ ಲಗ್ಗೆರೆ, ಪೀಣ್ಯ 2ನೇ ಹಂತದಿಂದ ಜಾಲಹಳ್ಳಿ ಕ್ರಾಸ್ಗೆ ಬಂದಂತಹ ಪ್ರಯಾಣಿಕರು ಪುನಃ ಬಾಣಾವರ ಮತ್ತು ನೆಲಮಂಗಲ ಕಡೆಗೆ ಹೋಗಬೇಕಾದರೆ ಹಿಂದಕ್ಕೆ ಪೀಣ್ಯ 1ನೇ ಹಂತಕ್ಕೆ ನಡೆದುಬಂದು ಮತ್ತೆ ಜಾಲಹಳ್ಳಿ ಕ್ರಾಸ್ ಸಿಗ್ನಲ್ ದಾಟಬೇಕು ಅಥವಾ ಮುಂದೆ ಟಿ. ದಾಸರಹಳ್ಳಿ ನಿಲ್ದಾಣದ ವರೆಗೆ ಹೋಗಬೇಕು. ಇದು ಸುಮಾರು 1 ಕಿ.ಮೀ. ದೂರ ಇರುತ್ತದೆ.

ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಕಚೇರಿಗೆ ತೆರಳುವವರಿಗೆ ತುಂಬಾ ಅನಾನುಕೂಲ.

ಈ ತೊಂದರೆಯನ್ನು ನಿವಾರಿಸಲು ಜಾಲಹಳ್ಳಿ ಕ್ರಾಸ್ ಸಿಗ್ನಲ್ ನಂತರ ಮೊದಲಿದ್ದ ವಾಹನ ನಿಲ್ದಾಣಕ್ಕಿಂತ ಸ್ವಲ್ಪ ಮುಂದೆ ವಾಹನ ನಿಲ್ದಾಣವನ್ನು ನಿರ್ಮಿಸಬೇಕಾಗಿ ಸಂಬಂಧಪಟ್ಟ ಬಿಎಂಟಿಸಿ ಅಧಿಕಾರಿಗಳಲ್ಲಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.