ಭಾನುವಾರ, ಜೂನ್ 13, 2021
25 °C

ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆರ್.ಜಿ.ಹೆಗಡೆ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ (ಉ.ಕ ಜಿಲ್ಲೆ): ಭಾರ­ತೀಯ ಸೇನೆ­ಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ  ಕಾರ್ಯ ನಿರ್ವ­ಹಿ­ಸಿದ್ದ ಶಿರಸಿಯ ಜಾನ್ಮನೆ ಕುಟುಂಬದ ಆರ್.ಜಿ. ಹೆಗಡೆ (ರಮೇಶ ಗಣಪತಿ ಹೆಗಡೆ) ಇದೇ 10­ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಿಧನ ಹೊಂದಿದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 71 ವರ್ಷ ವಯಸ್ಸಾಗಿತ್ತು. ಪಾಕಿ­ಸ್ತಾನ ಮತ್ತು ಚೀನಾ ವಿರುದ್ಧ ಭಾರತ ನಡೆಸಿದ ಸಮರದಲ್ಲಿ ಕ್ರಿಯಾ­ಶೀಲರಾಗಿ ಪಾಲ್ಗೊಂಡಿದ್ದ ಅವರು, ಎನ್.ಸಿ.ಸಿ.ಯ ಸರ್ವ­ತೋಮುಖ ಬೆಳ­ವ­ಣಿಗೆಗೂ ಅಪಾರವಾಗಿ ಶ್ರಮಿಸಿದ್ದರು.ನಿವೃತ್ತ ಡಿಎಸ್ಪಿ ಜಿ.ಟಿ. ಹೆಗಡೆ ಜಾನ್ಮನೆ ಅವರ ಪುತ್ರರಾಗಿದ್ದ ರಮೇಶ, ಇಲ್ಲಿಯ ಕಾಂಗ್ರೆಸ್‌ ಧುರೀಣ ಪ್ರಮೋದ ಹೆಗಡೆ ಅವರ ಸಹೋದರಿಯ ಪತಿಯಾಗಿದ್ದರು. ರಮೇಶ ಅವರಿಗೆ ಪತ್ನಿ, ಪುತ್ರ-, ಪುತ್ರಿ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.