ಹುಣಸಗಿ: ಪಟ್ಟಣದ 4 ನೇ ವಾರ್ಡ್ನ ನಿವಾಸಿಗಳು ಸರಿಯಾದ ನೀರಿನ ಪೂರೈಕೆಗೆ ಆಗ್ರಹಿಸಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಆಗಮಿಸಿ ಖಾಲಿ ಕೊಡಗಳೊಂದಿಗೆ ಗುರುವಾರ ಪ್ರತಿ ಭಟನೆ ನಡೆಸಿದರು.

50 ವರ್ಷಗಳ ಹಳೆಯದಾಗಿರುವ ಇಲ್ಲಿನ ಪೈಪ್ಲೈನ್ ಮೂಲಕ ನೀರು ಹರಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮನೆಗಳ ಸಂಖ್ಯೆಯೂ ಹೆಚ್ಚಾಗಿವೆ. ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ವಾರ್ಡ್ ನಂ. 4 ರ ನೀಲಕಂಠೇಶ್ವರ ದೇವಸ್ಥಾನದಿಂದ ಅಗಸಿವರೆಗಿನ ಮನೆಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ನಸುಕಿನ 3–4 ಗಂಟೆಗೆ ನೀರು ಬಿಡುತ್ತಾರೆ ಎಂದು ಆರೋಪಿಸಿದರು.

ಚಳಿಯಲ್ಲಿ ನೀರಿಗಾಗಿ ಕಾಯ್ಕೊಂಡು ಕೂಡುವಂತಾಗಿದೆ ಎಂದು ನಿವಾಸಿ ಬಸಮ್ಮ ಮರಾಠಿ, ಇತರರು ಆರೋಪಿಸಿದರು.

ನೀರಿನ ಮೋಟರ್ ಅಳವಡಿಸಿಕೊಂಡವರು ಮಾತ್ರ ನೀರು ಪಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲ ಎಂದು ಪ್ರತಿಭಟಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ನೀರಲಗಿ ಮಾತನಾಡಿ, ನೀರು ಸರಿಯಾಗಿ ಪೂರೈಕೆ ಮಾಡಿಸಲಾ ಗುವುದು ಎಂದು ತಿಳಿಸಿದರು.
ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಅನ್ನಮ್ಮ ಬಂಡೋಳಿ, ನಿರ್ಮಲಾ ರಂಗಂಪೇಠ, ಬಸಮ್ಮ ಮರಾಠಿ, ನೀಲಮ್ಮ ಮರಾಠಿ, ಫಾತೀಮಾ ಬೇಗಂ, ಮಮ್ತಾಜ್ಬೇಗಂ, ಶಿವನಗೌಡ ಪಾಟೀಲ್, ಬಸವರಾಜ ಆಲ್ದಾಳ, ಪ್ರಭು ಪಡಶೆಟ್ಟಿ, ಸುಭಾಸ ದೇಸಾಯಿ, ಪರಮಣ್ಣ ಮಲಗಲದಿನ್ನಿ, ರಾಜಶೇಖರ ಖಾನಾಪುರ, ಚೇತನ ಬಾಗೇವಾಡಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.