ಶನಿವಾರ, ಮಾರ್ಚ್ 6, 2021
29 °C

ನೀರಿಗಾಗಿ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿಗಾಗಿ ಹಾಹಾಕಾರ

ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಹಿಂಗಾರು ಮಳೆ ಕೈಕೊಟ್ಟ ಕಾರಣ ಬೆಳೆಗಳು ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ  ಎರಡು ಮೂರು ತಿಂಗಳಿಂದ  ಕುಡಿಯುವ ನೀರಿಗಾಗಿ ಪರದಾಟ ಉಂಟಾಗಿದ್ದು, ಕೆರೆ ಕಟ್ಟೆಗಳು ಬತ್ತಿ ಹೋಗಿವೆ, ದನಕರುಗಳಿಗೆ ಮೇವಿನ ಕೊರತೆ ಅಲ್ಲಲ್ಲಿ ಎದ್ದು ಕಾಣುತ್ತಿದೆ. ದಿನಾಲು ವಿದ್ಯುತ್ ಕಣ್ಣುಮುಚ್ಚಾಲೆಯಿಂದ ಕರೆಂಟ್ ಬಂದಾಗ ಮಾತ್ರ ನೀರು ಹಿಡಿದಿಟ್ಟು ಕೊಳ್ಳಬೇಕು, ಇಲ್ಲದಿದ್ದರೆ ಕುಟುಂಬದ ಒಬ್ಬ ಮನುಷ್ಯ ಹೊಲಗದ್ದೆಗಳಿಂದ ನೀರು ತಂದು ದನಕರುಗಳನ್ನು ಸಾಕುವಂತಾಗಿದೆ.ದೇವರಗುಡ್ಡ ಗ್ರಾಮಕ್ಕೆ  ರಾಜ್ಯಾದಾ ದ್ಯಂತ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ, ಕರಿಯಾಲದ ಒಂದೇ ಬೋರ್‌ವೆಲ್‌ನಿಂದ ನೀರು ತರಬೇಕು, ವಿದ್ಯುತ್ ಕೈಕೊಟ್ಟಾಗ ಕುಡಿಯುವ ನೀರಿನ ಭವಣೆ ಹೆಚ್ಚಾಗಿದೆ.ಸರ್ಕಾರ ರಾಣೆಬೆನ್ನೂರು ತಾಲ್ಲೂಕ ನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ, ಪಂಚಾಯತ್ ರಾಜ್‌ವಿಭಾಗದಿಂದ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ತಾಲ್ಲೂಕಿನಾದ್ಯತ ಕುಡಿಯುವ ನೀರಿಗಾಗಿ 65 ಕಾಮಗಾರಿ ಗಳನ್ನು ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ನಿರ್ಣಯಿಸಿಕೊಂಡು ಸರ್ಕಾರಕ್ಕೆ ಅನುಮೋದನೆ ನೀಡಲಾಗಿತ್ತು. ಸರ್ಕಾರ ಕೂಡಲೇ ಅನುಮೋದನೆ ನೀಡಿದ್ದು  ಕಾರ್ಯ ನಿರ್ವಹಿಸು ತ್ತಿದ್ದಾರೆ.ಗುಡಿಹೊನ್ನತ್ತಿ ಗ್ರಾಮದ ಗುತ್ತಲ ರಸ್ತೆಯಿಂದ ಬೆಲ್ಲದ ಮನೆಯವರೆಗೆ ಪೈಪ್‌ಲೈನ್ ದುರಸ್ತಿ ಮತ್ತು ಬೆಲ್ಲದವರ ಮನೆಯ ಹತ್ತಿರ ಇರುವ ಕೈಪಂಪು ದುರಸ್ತಿಗೆ ರೂ. 1.70 ಲಕ್ಷಗಳನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಚಿಕ್ಕಅರಳಿಹಳ್ಳಿ ಗ್ರಾಮ ದಲ್ಲಿ ಮೋಟಾರ್ /ಪೈಪಲೈನ್ ದುರಸ್ತಿ ಹಾಗೂ ವಿಸ್ತರಣೆಗೆ ರೂ 5 ಲಕ್ಷ, ತಿರುಮಲದೇವರಕೊಪ್ಪಕ್ಕೆ ಕೊಳವೆ ಭಾವಿಗಾಗಿ ಮಾಡಲಿಕ್ಕೆ ರೂ 3 ಲಕ್ಷ , ಬಸಲೀಕಟ್ಟಿ ತಾಮಡಾದಲ್ಲಿ ಮೋಟಾರು ,~ಪೈಪ್‌ಲೈನ್ ದುರಸ್ತಿ ಹಾಗೂ ವಿಸ್ತರಣೆಗೆ ರೂ 2 ಲಕ್ಷ, ಗೋವಿಂದ ಬಡಾವಣೆ ಮೋಟಾರು ದುರಸ್ತಿ ಹಾಗೂ ವಿಸ್ತರಣೆಗೆ ರೂ 3 ಲಕ್ಷ, ಹೆಡಿಯಾಲ ಗ್ರಾಮದಲ್ಲಿ ಮೋಟಾರು ಪೈಪ್‌ಲೈನ್ ದುರಸ್ತಿ ಹಾಗೂ ವಿಸ್ತರಣೆಗೆ ರೂ 2.50  ಸೇರಿದಂತೆ ಒಟ್ಟು ರೂ 15.50 ಲಕ್ಷ  ಸರ್ಕಾರ ಬಿಡುಗಡೆ ಮಾಡಿದೆ.ಲಿಂಗದಹಳ್ಳಿ ಕುಪ್ಪೇಲೂರು, ನಿಟವಳ್ಳಿ ಹೊಳೆಆನ್ವೇರಿ ಸಂಮೇಶ್ವರ ದೇವಸ್ಥಾನ ಬಳಿ ಕೈಪಂಪು ದುರಸ್ತಿ, ಹನುಮನಹಳ್ಳಿ, ಮದೇನೂರು, ಮುಷ್ಟೂರು, ಮಲಕನಹಳ್ಳಿ, ಕೃಷ್ಣಾ ಪುರ, ಕೋಣನತೆಲೆ, ನಿಟ್ಟೂರು, ಗೋಡಿಹಾಳ, ಯಲಬಡಗಿ, ಸುಣಕಲ್‌ಬಿದರಿ, ಗುಡ್ಡದಬೇವಿನಹಳ್ಳಿ, ಗುಡ್ಡದ ಹೊಸಳ್ಳಿ, ತುಮ್ಮಿನಕಟ್ಟಿ, ಯರೇಕುಪ್ಪಿ ಸೇರಿದಂಗೆ 17 ಕಾಮಗಾರಿಗಳಿಗೆ ಪೈಪ ಲೈನ್ ದುರಸ್ಥಿ ಮತ್ತು ಕೈಪಂಪು ಜೋಡಿಸಲು ರೂ 7.24 ಲಕ್ಷಗಳನ್ನು ಸರ್ಕಾರ ಮಂಜೂರು ನೀಡಿದೆ.ಅತರವಳ್ಳಿ, ಆಲದಕಟ್ಟಿ, ನಂದೀಹಳ್ಳಿ, ಬಿಲ್ಲಹಳ್ಳಿ, ಹಾರೋಗೊಪ್ಪ, ದಂಡಗೀ ಹಳ್ಳಿ, ಕೂಲಿ, ಹಲಗೇರಿ, ಹಿರೇಮಾ ಗನೂರು, ಚಿಕ್ಕಮಾಗನೂರು, ಕೋಟಿ ಹಾಳ, ಕುಪ್ಪೇಲೂರು ಇಟಗಿ ಒಟ್ಟು 14 ಕಾಮಗಾರಿಗಳಿಗೆ ರೂ 8.75 ಲಕ್ಷ ವೆಚ್ಚದ ಕುಡಿಯುವ ನೀರಿಗಾಗಿ ಮಂಜೂರಾತಿ ನೀಡಿ 40 ದಿನದೊಳಗಾಗಿ ಕಾಮಗಾರಿಗಳನ್ನು ಮುಕ್ತಾಯ ಗೊಳಿ ಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.  ದೇವರಗುಡ್ಡ, ಹನುಮಾಪುರ, ಮಣಕೂರ, ಐರಣಿ 9.22 ಲಕ್ಷರೂ, ಶಿಡಗನಹಾಳ, ಉಡ್ಡದಾನ್ವೇರಿ, ಹುಲ್ಲತ್ತಿ, ಕೆರೆಮಲ್ಲಾಪುರ, ವೈಟಿ ಹೊನ್ನತ್ತಿ, ನದೀಹರಳಳ್ಳಿ, ಕರೂರು, ಖಂಡೆರಾಯನಹಳ್ಳಿ, ಎಣ್ಣಿಹೊಸಳ್ಳಿ, ಕಮದೋಡ, ದೇವಗೊಂಡನಕಟ್ಟಿ, ಮಾಕನೂರು, ನಾಗೇನಹಳ್ಳಿ ರಾಮಗಳಿಗೆ ರೂ 7.15 ಲಕ್ಷ  ಮಂಜೂರು ಮಾಡಿದೆ. ರಾಣೆಬೆನ್ನೂರಿನ ಹಲಗೇರಿ ರಸ್ತೆ, ಐರಣಿ, ಚಳಗೇರಿ, ಬೇಲೂರು ಮುಂತಾದ ಕಡೆ ದನಕರುಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡ ಲಾಗಿದೆ, ಇನ್ನು ಕೆಲವು ಕಡೆ ತುರ್ತು ಕಾಮಗಾರಿ ನಡೆದಿದೆ ಎಂದು ಸಹಾಯಕ ಪಶುವೈದ್ಯಾಧಿಕಾರಿ ಡಾ. ಪರಮೇಶ ಹುಬ್ಬಳ್ಳಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.