ಚಿಕ್ಕಮಗಳೂರು: ಕರಕುಚ್ಚಿ ಗ್ರಾಮದ 6.30 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರಿನ ಯೋಜನೆ ನಾಲ್ಕು ವರ್ಷದ ಹಿಂದೆ ಆರಂಭವಾಗಿದ್ದು, ತಿಂಗಳೊಳಗೆ ಪೂರ್ಣವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಚಿತಾ ನರೇಂದ್ರ ಹೇಳಿದರು.

ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಪಿ.ಕುಮಾರ್, ಕರಕುಚ್ಚಿ, ಮುಡಗೋಡು, ಕೆಂಚಿಕೊಪ್ಪ, ಮಲ್ಲಿಕೊಪ್ಪ, ಬಾವಿಕೆರೆ, ಬರಗೇನಹಳ್ಳಿ, ಸಿದ್ದರಹಳ್ಳಿ, ಹಲಸೂರು, ದುಗ್ಲಾಪುರ ಮತ್ತು ಯರೆಬೈಲು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ನಾಲ್ಕು ವರ್ಷಗಳಿಂದ ಪೂರ್ಣಗೊಳ್ಳದಿರುವುದನ್ನು ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.

ಲಕ್ಕವಳ್ಳಿ, ಬರ್ಗೆನಹಳ್ಳಿ ಮತ್ತು ಕಂಚಿಕೊಪ್ಪಕ್ಕೆ ಕುಡಿಯುವ ನೀರೆ ಬಂದಿಲ್ಲ. ಈ ಯೋಜನೆಯಿಂದ ನೀರು ತುಂಬಲು ಮಾಳಿಕೊಪ್ಪದಲ್ಲಿ ನಿರ್ಮಿಸಿರುವ ಟ್ಯಾಂಕ್ ವಾಲಿದೆ. ಆಗಲೋ, ಈಗಲೋ ಬೀಳು ವಂತಿದೆ. ತಾಂಡ್ಯದಲ್ಲಿ ಕಟ್ಟಿರುವ ಟ್ಯಾಂಕ್ ಉದುರಿ ಹೋಗುತ್ತಿದೆ ಎಂದು ಸಭೆ ಗಮನ ಸೆಳೆದರು.

ಸಾರ್ವಜನಿಕರ ಉಪಯೋಗಕ್ಕೆ ಕೈಗೆತ್ತಿಕೊಂಡ ಕುಡಿಯುವ ನೀರಿನ ಯೋಜನೆ ಈವರೆಗೂ ಪೂರ್ಣವಾಗದಿರುವುದು ತಲೆತಗ್ಗಿಸುವಂತಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಈ ಯೋಜನೆ ಪೂರ್ಣಗೊಳಿಸುವಂತೆ ಹಲವು ಬಾರಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಎಂಜಿನಿಯರ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ತಿಂಗಳೊಳಗೆ ಕೆಲಸ ಮುಗಿಸಲು ಕಾಲಾವಕಾಶ ನೀಡಿದ್ದೀರಿ ಸರಿ. ಆದರೆ, ಈ ಯೋಜ ನೆಯನ್ನು ತನಿಖೆಗೆ ಒಳಪಡಿಸಬೇಕೆಂದು ಒತ್ತಾ ಯಿಸಿದರು.

ಸಭೆಯಲ್ಲಿ ಅಧಿಕಾರಿಗಳು ಹೇಳುವ ಕಥೆ ಕೇಳಲು ಬಂದಿಲ್ಲ. ಈ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡು ಜನರಿಗೆ ಕುಡಿಯುವ ನೀರು ಕೊಡಲು ಸಾಧ್ಯವೋ ಅಥವಾ ಇಲ್ಲವೋ ಎಂಬು ದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಯೋಜನೆ ಅಂಕಿ, ಅಂಶ ತಿಳಿಸುವಂತೆ ಸದಸ್ಯ ಅನಂತ್ ಆಗ್ರಹಿಸಿದರು. ಸಭೆ ಮುಗಿದ ಬಳಿಕ ಮಾಹಿತಿ ನೀಡುವ ಭರವಸೆ ಅಧಿಕಾರಿಗಳಿಂದ ಬಂತು. ಯೋಜನೆ ವಿನ್ಯಾಸವೇ ಬೇರೆ, ಕಟ್ಟಿರುವುದೇ ಬೇರೆ ಹೀಗಿರುವಾಗ ಈ ಯೋಜನೆ ನಿಗದಿತ ಹಣದಲ್ಲಿ ಮುಗಿಯುವುದಿಲ್ಲ. ಹೆಚ್ಚುವರಿಯಾಗಿ ಒಂದು ಕೋಟಿ ರೂಪಾಯಿ ನೀಡಿದರೂ ಮುಗಿಯುವ ಲಕ್ಷಣ ಕಾಣುವುದಿಲ್ಲ ಎಂದು ಆ ಭಾಗದ ಜಿ.ಪಂ. ಸದಸ್ಯರು ಹೇಳಿದರು.

ಕೆಲಸ ಮುಗಿಯದಿದ್ದರೂ 72 ಲಕ್ಷ ರೂಪಾಯಿಗಳನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎಂದು ಸದಸ್ಯ ಕುಮಾರ್ ಹೇಳಿದಾಗ, ಕಾರ್ಯನಿರ್ವಾಹಕ ಎಂಜಿನಿಯರ್ ಹಣ ನೀಡಿಲ್ಲ. ನೀಡಿದ್ದರೆ ಮಾಹಿತಿ ಕೊಡಿ ಎಂದರು.
ತಕ್ಷಣ ಮಧ್ಯೆ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಅಧಿಕಾರಿಗಳು ಏತಕ್ಕಿರಬೇಕೆಂದು ಕಿಡಿಕಾರಿದರು.

ಎಂಜಿನಿಯರ್ ನೀಡಿದ ಉತ್ತರ ಮತ್ತು ವರ್ತನೆಗೆ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. `ಗಮನವಿಟ್ಟು ಕೇಳಿ~ ಎಂದ ಎಂಜಿನಿಯರ್ ಮಾತು ವಿರೋಧ ಪಕ್ಷದ ಸದಸ್ಯರನ್ನು ಕೆರಳಿಸಿತು.

ಅಧಿಕಾರಿಗಳು ಈ ರೀತಿ ಮಾತನಾಡಿದ್ದಕ್ಕೆ ಕ್ಷಮೆಯಾಚಿಸಬೇಕೆಂದು ಸದಸ್ಯೆ ಸವಿತಾ ರಮೇಶ್ ಒತ್ತಾಯಿಸಿದರು.
ಮೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ತರೀಕೆರೆ ತಾಲ್ಲೂಕಿನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರು ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ ಸೂಚಿಸಿದರು. ಈ ಚರ್ಚೆಗಳನ್ನು ಆಲಿಸುತ್ತಿದ್ದ ಶಾಸಕ ವೈ.ಸಿ. ವಿಶ್ವನಾಥ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಕಾರ್ಯವೈಖರಿ ಕುರಿತು ತೃಪ್ತಿ ಇಲ್ಲ. ಕಡೂರು ತಾಲ್ಲೂಕಿನಲ್ಲಿ ತಲೆದೋರಿರುವ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ತಾಲ್ಲೂಕನ್ನು ನಿರ್ಲಕ್ಷಿಸುತ್ತಿದ್ದಾರೆ. ಯಾವುದೇ ಸಭೆಗೆ ಬರುವುದಿಲ್ಲ. 8 ತಿಂಗಳಿಂದ ಕೆಲಸಗಳು ಆಗುತ್ತಿಲ್ಲ. ಜನರಿಗೆ ಉತ್ತರ ಕೊಡೋದು ಹೇಗೆ? ಎಂದು ಪ್ರಶ್ನಿಸಿದರು.

ವಾರದೊಳಗೆ ತರೀಕೆರೆ ತಾಲ್ಲೂಕಿಗೆ ಆಗಮಿಸಿ ಕರಕುಚ್ಚಿ ಕುಡಿಯುವ ನೀರಿನ ಯೋಜನೆ ಕಾಮ ಗಾರಿಗಳನ್ನು ಪರಿಶೀಲಿಸಿ, ಒಂದು ತಿಂಗಳೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದರು. ಉಪಾ ಧ್ಯಕ್ಷ ಶಂಭೈನೂರು ಆನಂದಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.