ಬುಧವಾರ, ಮೇ 12, 2021
27 °C

ನೀರಿನ ಸದ್ಬಳಕೆ ಬಗ್ಗೆ ಅರಿವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ನೀರಿನ ಕೊರತೆ ತೀವ್ರವಾಗಿದ್ದರೂ ನಗರಗಳ ಬಹುತೇಕ ಜನರಲ್ಲಿ ನೀರಿನ ಸದ್ಬಳಕೆ ಬಗ್ಗೆ ಅರಿವಿಲ್ಲದಿರುವುದು ವಿಷಾದಕರ. ಒಂದು ವೇಳೆ ತಿಳಿದಿದ್ದರೂ ಉಪೇಕ್ಷೆ ಮಾಡಿ ನೀರನ್ನು ಹಾಳು ಮಾಡುವುದು ಸಾಮಾನ್ಯ.ನಗರಗಳಲ್ಲಿ ಒಂದೆರಡು ಬಕೆಟ್ ನೀರಿನಲ್ಲಿ ಸ್ವಚ್ಛಗೊಳಿಸಬಹುದಾದ ವಾಹನಗಳನ್ನು ಪೈಪ್ ಮೂಲಕ ತೊಳೆಯಲು ಹೋಗಿ ಅವಶ್ಯಕತೆಗಿಂತಲೂ ಹೆಚ್ಚು ನೀರನ್ನು ವ್ಯರ್ಥ ಮಾಡುವುದು ಕಾಣುತ್ತದೆ.ಮನೆ ಮುಂದೆ ಸ್ವಚ್ಛಗೊಳಿಸಲು ಹೆಚ್ಚು ಹೆಚ್ಚು ನೀರನ್ನು ಉಪಯೋಗಿಸುವುದು, ರಸ್ತೆಗೆ ನೀರು ಹಾಕುವುದು, ನಲ್ಲಿಗಳನ್ನು ಸರಿಯಾಗಿ ನಿಲ್ಲಿಸದೆ ಇರುವುದು ಮತ್ತು ಓವರ್‌ಹೆಡ್ ಟ್ಯಾಂಕ್ ತುಂಬಿ ಹರಿಯಲು ಬಿಡುವುದು- ಇಂತಹ ಇನ್ನೂ ಹಲವಾರು ಉದಾಹರಣೆಗಳನ್ನು ದಿನನಿತ್ಯ ನೋಡಬಹುದಾಗಿದೆ. ನೀರು ಪ್ರಕೃತಿಯ ಅಮೂಲ್ಯ ವರದಾನ. ನಾವು ಅವಲಂಬಿತರು, ನೀರಿಲ್ಲದೆ ಬದುಕಿಲ್ಲ. ಆದುದರಿಂದ ನಾಗರಿಕರಾದ ನಾವು ಜವಾಬ್ದಾರಿಯಿಂದ ನಡೆದುಕೊಳ್ಳುವುದು ಒಳ್ಳೆಯದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.