ಬೆಂಗಳೂರು: ಜಲಮಂಡಳಿಯು ನಗರದ ದಕ್ಷಿಣ ವಲಯದಲ್ಲಿ ನೀರು ಸೋರಿಕೆ ತಡೆಗಟ್ಟುವ ಯೋಜನೆಯ ಗುತ್ತಿಗೆಯನ್ನು ಟರ್ಬೊ ಮತ್ತು ಲಾರ್ಸೆನ್ ಕಂಪೆನಿಗೆ ನೀಡಿದೆ.

ನಗರಕ್ಕೆ ದಿನಕ್ಕೆ 800 ಮಿಲಿಯನ್ ಲೀಟರ್ ಕಾವೇರಿ ನೀರು ಪೂರೈಸಲಾಗುತ್ತಿದೆ. ಆದರೆ ಇದರಲ್ಲಿ ಶೇ 36ರಷ್ಟು ಭಾಗದ ನೀರು ಸೋರಿಕೆಯಾಗುತ್ತಿದೆ. ಅಲ್ಲದೇ ಕಂದಾಯ ತೆರದೇ ಶೇ 50 ರಷ್ಟು ನೀರು ಅನಧಿಕೃತವಾಗಿ ಪೂರೈಕೆಯಾಗುತ್ತಿದೆ. ಇದೆಲ್ಲದಕ್ಕೆ ಕಡಿವಾಣ ಹಾಕಲು ಮಂಡಳಿಯು ಆರು ವರ್ಷ ಅವಧಿಯ ಗುತ್ತಿಗೆಯನ್ನು ಕಂಪೆನಿಗೆ ನೀಡಿದೆ.

ಯೋಜನೆಯ ಪ್ರಕಾರ ಮುಂದಿನ ಮೂರು ವರ್ಷದಲ್ಲಿ ನೀರು ಸೋರಿಕೆಯ ಪ್ರಮಾಣವನ್ನು ಶೇ 16ಕ್ಕೆ ಇಳಿಸಬೇಕು. ಅನಧಿಕೃತ ನೀರು ಪೂರೈಕೆಯ ಕೊಳವೆಗಳನ್ನು ಕಂಡುಹಿಡಿದು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಬನಗಿರಿ, ದೇವಗಿರಿ, ಗಿರಿನಗರ, ಕತ್ತರಗುಪ್ಪೆ, ಬನಶಂಕರಿ, ಹೊಸಕೆರೆಹಳ್ಳಿ, ಕುಮಾರಸ್ವಾಮಿ ಬಡಾವಣೆ, ಪೂರ್ಣಪ್ರಜ್ಞ ಬಡಾವಣೆ, ಬಿಟಿಎಂ ಲೇಔಟ್, ವಿಜಯ ಬ್ಯಾಂಕ್, ಚಾಮರಾಜಪೇಟೆ, ಎಂಎನ್ಕೆ ಉದ್ಯಾನ, ನಾಗೇಂದ್ರ ಬ್ಲಾಕ್ ಹಾಗೂ ಜೆ.ಪಿ.ನಗರ ಸೇರಿದಂತೆ ದಕ್ಷಿಣ ವಲಯದಲ್ಲಿ ಒಟ್ಟು 1,36,380 ನೀರು ವಿತರಣಾ ಕೊಳವೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.