ಬಳ್ಳಾರಿ: ಬಳ್ಳಾರಿಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್.ಪಿ) ಡಾ.ಚೇತನ್ ಸಿಂಗ್ ರಾಥೋರ್ ಸೋಮವಾರ ಅಧಿಕಾರ ಸ್ವೀಕರಿಸಿದರು.

ಇದುವರೆಗೆ ಎಸ್.ಪಿಯಾಗಿ ಸೇವೆ ಸಲ್ಲಿಸಿದ್ದ ಡಾ.ಚಂದ್ರಗುಪ್ತ ಅವರು ಬೆಳಗಾವಿಗೆ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಹಾವೇರಿ ಎಸ್ಪಿ ಆಗಿದ್ದ ಡಾ.ರಾಥೋರ್ ಆಗಮಿಸಿ ದ್ದಾರೆ. ಮಧ್ಯಪ್ರದೇಶ ಮೂಲದ ಡಾ.ರಾಥೋರ್ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮ್ತು ಪಿಎಚ್.ಡಿ. ಪದವಿ ಪಡೆದಿದ್ದು, 2007ನೇ ಐಪಿಎಸ್ ತಂಡದ ಕರ್ನಾಟಕ ಕೇಡರ್ನ ಅಧಿಕಾರಿಯಾಗಿ ನೇಮಕ ಗೊಂಡಿದ್ದಾರೆ.

ಶಿವಮೊಗ್ಗದಲ್ಲಿ ಪ್ರೊಬೆಷನರಿ, ಚಿತ್ರ ದುರ್ಗದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾಯಾಗಿ ಸೇವೆ ಸಲ್ಲಿಸಿದ ನಂತರ ಹಾವೇರಿಯಲ್ಲಿ ಎಸ್.ಪಿ ಆಗಿ ಸೇವೆ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಲಾಗು ವುದು. ಮೊದಲು ಜಿಲ್ಲೆಯಾದ್ಯಂತ ಭೇಟಿ ನೀಡಿ ಸಮಸ್ಯೆಗಳನ್ನು ಅರಿತು, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಇತ್ಯರ್ಥಪಡಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮಟ್ಕಾ, ಕ್ರಿಕೆಟ್ ಬೆಟಿಂಗ್ಗಳಂತಹ ಜೂಜು ಅಡ್ಡೆಗಳ ನಿಯಂತ್ರಣ, ಡ್ರಗ್ಸ್, ಅಕ್ರಮ ಸಾರಾಯಿ ಮಾರಾಟ, ಗುಟ್ಕಾ ಮಾರಾಟ ಮತ್ತಿತರ ಅನಧಿಕೃತ ಚಟು ವಟಿಕೆಗಳನ್ನು ನಿಯಂತ್ರಿಸಲು, ನಗರ ದಲ್ಲಿನ ಸಂಚಾರ ವ್ಯವಸ್ಥೆಯನ್ನು ಉತ್ತಮಪಡಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.