ಭಾನುವಾರ, ಜನವರಿ 19, 2020
20 °C

ನೂತನ ಶ್ರೀಗಳಿಗೆ ಪಟ್ಟಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಜೋರಾಪುರ ಪೇಟೆ ಬಣಗಾರ ಗಲ್ಲಿಯ ಹಿರೇಮಠ ಹಾಗೂ ಜಮಖಂಡಿ ತಾಲ್ಲೂಕು ಹುಲ್ಯಾಳ ಯೋಗಾಶ್ರಮದ ನೂತನ ಪೀಠಾಧಿಕಾರಿ ಡಾ.ರೇಣುಕ ಸದಾಶಿವ ಶಿವಾಚಾರ್ಯ ಅವರ ಪಟ್ಟಾಧಿಕಾರ ಮಹೋತ್ಸವ ಗುರುವಾರ ಇಲ್ಲಿ ನಡೆಯಿತು.ಈ ಮಠಗಳ ಹಿರಿಯ ಸ್ವಾಮೀಜಿ ವಿದ್ಯಾನಂದ ಶಿವಾಚಾರ್ಯ ಸಮ್ಮುಖ­­­ದಲ್ಲಿ ರಂಭಾಪುರಿ ಜಗ­ದ್ಗುರುಗಳು ನೂತನ ಪೀಠಾಧಿಕಾರಿಗೆ ಪಟ್ಟಾಧಿಕಾರ ನೆರವೇರಿಸಿದರು.ನಂತರ ನಡೆದ ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ರಂಭಾಪುರಿ ಜಗದ್ಗುರುಗಳು,  ‘ಜೋರಾ­­ಪುರ ಹಿರೇಮಠವು ರಂಭಾ­ಪುರಿ ಪೀಠದ ಶಾಖಾ ಮಠ. ವಿದ್ಯಾ­ನಂದ ಶಿವಾಚಾರ್ಯ ಸ್ವಾಮೀಜಿ ಸಶಕ್ತರಾಗಿರುವಾಗಲೇ ರೇಣುಕ ಸದಾ­ಶಿವ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಅಧಿಕಾರ ವಹಿಸಿದ್ದು ಹೆಮ್ಮೆಯ ಸಂಗತಿ. ನೂತನ ಶ್ರೀಗಳು ಈ ಭಾಗದ ಭಕ್ತ ಸಮುದಾಯಕ್ಕೆ ಧರ್ಮದ ಬೆಳಕು ಬೀರಲಿ’ ಎಂದು ಆಶೀರ್ವದಿಸಿದರು.‘ಧರ್ಮ ಯಾವುದೇ ಇರಲಿ. ಸಮಾಜದಲ್ಲಿ ಸಾಮರಸ್ಯ ಸದ್ಭಾ­ವನೆಗಳನ್ನು ಬೆಳೆಸಬೇಕು. ಧರ್ಮ, ಜಾತಿ, ಭಾಷೆ ಮತ್ತು ಪ್ರಾಂತದ ಹೆಸರಿನಲ್ಲಿ ಜನಾಂಗವನ್ನು ಯಾರೂ ವಿಂಗಡಿಸಬಾರದು’ ಎಂದು ಸಲಹೆ ನೀಡಿದರು.ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಕಲಾದಗಿ ಚಂದ್ರ­ಶೇಖರ ಶಿವಾಚಾರ್ಯರು,  ಎಮ್ಮಿ­ಗನೂರು ವಾಮದೇವ ಮಹಾಂತ ಶಿವಾ­ಚಾರ್ಯರು, ಹರನಾಳದ ಮಹಾಂತೇಶ್ವರ ಶಿವಾಚಾರ್ಯರು ಮಾತನಾಡಿದರು. ವಿದ್ಯಾನಂದ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ ನಂತರ ನೂತನ ಶ್ರೀಗಳ ಪಲ್ಲಕ್ಕಿ ಮಹೋತ್ಸವ ನಡೆಯಿತು.

ಪ್ರತಿಕ್ರಿಯಿಸಿ (+)