ಭಾನುವಾರ, ಮೇ 22, 2022
21 °C

ನೃತ್ಯದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಹಿನಿ ಆಟ್ಟಂ

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು: ಹೊರೈಜನ್ ಸರಣಿಯಲ್ಲಿ ಶನಿವಾರ ಡಾ. ನೀನಾ ಪ್ರಸಾದ್ ಅವರಿಂದ ಮೋಹಿನಿ ಆಟ್ಟಂ. ಸ್ಥಳ: ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್, ಅರಮನೆ ರಸ್ತೆ. ಸಂಜೆ 6.30.ನಾಟ್ಯಪ್ರಿಯ ಉತ್ಸವ

ನಾಟ್ಯಪ್ರಿಯ: ಶನಿವಾರ ಮತ್ತು ಭಾನುವಾರ ಸಂಸ್ಥೆಯ 37ನೇ ವಾರ್ಷಿಕೋತ್ಸವ, ನೃತ್ಯೋತ್ಸವ ಮತ್ತು ಬಯಲು ರಂಗಮಂದಿರ ಉದ್ಘಾಟನೆ.

ಶನಿವಾರ ಸಂಜೆ 5ರಿಂದ ನೃತ್ಯ ಕಾರ್ಯಕ್ರಮ. ಅತಿಥಿಗಳು: ಗುರು ರಾಧಾ ಶ್ರೀಧರ್, ಎಸ್. ಎನ್. ಚಂದ್ರಶೇಖರ, ಡಾ. ಸುನಿತಾ ಕಲ್ಯಾಣಪುರ, ರತ್ನಾ ಸುಪ್ರಿಯ ಶ್ರೀಧರನ್.ಭಾನುವಾರ ಸಂಜೆ 4.30ರಿಂದ ಸಂಗೀತ, ಸಂಜೆ 6.15ರಿಂದ ಸಭಾ ಕಾರ್ಯಕ್ರಮ ಮತ್ತು ನವಶಕ್ತಿ ನೃತ್ಯ, ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರಿಂದ ಕಸ್ತೂರಿ ರಂಗ ಮಂದಿರ ಉದ್ಘಾಟನೆ. ಅತಿಥಿಗಳು:  ಡಾ. ಕಸ್ತೂರಿರಂಗನ್, ಚಿರಂಜೀವಿ ಸಿಂಗ್, ಯು.ಆರ್. ಅನಂತಮೂರ್ತಿ, ಸುನೀಲ್ ಕೊಠಾರಿ, ಲಲಿತಾ ಶ್ರೀನಿವಾಸನ್, ಭಾನುಮತಿ, ಮೈಸೂರು ವಿ. ಸುಬ್ರಹ್ಮಣ್ಯ, ಡಾ. ಎಂ. ಸೂರ್ಯಪ್ರಸಾದ್. ಸಂಜೆ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ.ನಾಟ್ಯಪ್ರಿಯ ಖ್ಯಾತ ನೃತ್ಯಗುರು ಪದ್ಮಿನಿ ರಾಮಚಂದ್ರನ್ ಅವರು ಸ್ಥಾಪಿಸಿದ ನೃತ್ಯಶಾಲೆ. 1974ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ನೂರಾರು ನೃತ್ಯ ಕಲಾವಿದರ ಗರಡಿ ಮನೆಯಾಗಿದೆ. ಹಿಮಶ್ವೇತ, ವಿಠ್ಠಲ ದರ್ಶನ, ನವರಸ ನಾಯಕ, ನವರಸ ಗೆಜ್ಜೆ ಸೇರಿದಂತೆ 70ಕ್ಕೂ ಹೆಚ್ಚು ನೃತ್ಯರೂಪಕ ಸಂಯೋಜಿಸಿದೆ.ನೃತ್ಯಕ್ಷೇತ್ರ ಪದ್ಮಿನಿ ಅವರ ಕನಸಿನ ಕೂಸು. ಒಂದು ಎಕರೆ ವಿಶಾಲ ಕ್ಷೇತ್ರದಲ್ಲಿ ಹರಡಿಕೊಂಡಿರುವ ನೃತ್ಯಕ್ಷೇತ್ರ ಪ್ರದರ್ಶನ ಕಲೆಗಳ ಕುರಿತು ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ವಳವೂರು ರಾಮಯ್ಯ ಪಿಳ್ಳೈ ಅವರ ಶಿಷ್ಯೆಯಾದ ಪದ್ಮಿನಿ ಚೆನ್ನೈ ಮ್ಯೂಸಿಕ್ ಅಕಾಡೆಮಿಯಿಂದ ಸತತ ಎರಡು ವರ್ಷ ಅತ್ಯುತ್ತಮ ಗುರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದಿದ್ದಾರೆ.

ಸ್ಥಳ: 310, 2ನೇ `ಎ~ ಮುಖ್ಯರಸ್ತೆ, ಹೊಯ್ಸಳ ನಗರ, ತಂಬುಚೆಟ್ಟಿ ಪಾಳ್ಯ ಮುಖ್ಯರಸ್ತೆ.  ದೂ: 6546 0875ನೃತ್ಯೋಪಾಸನಾ

ರಾಜರಾಜೇಶ್ವರಿ ಕಲಾನಿಕೇತನ: ಗುರು ವೀಣಾ ಮೂರ್ತಿ ವಿಜಯ್ ಮಾರ್ಗದರ್ಶನದಲ್ಲಿ ಶನಿವಾರ `ನೃತ್ಯೋಪಾಸನಾ~. ಕಲಾನಿಕೇತನದ ವಿದ್ಯಾರ್ಥಿಗಳು ಮತ್ತು ಉದಯೋನ್ಮುಖ ಕಲಾವಿದರಿಂದ ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ ನೃತ್ಯ. ಭಾಗವಹಿಸುವ ಕಲಾವಿದರು: ಪ್ರವೀಣ್ ಕುಮಾರ್, ಮಧುಲಿತಾ ಮಹಾಪಾತ್ರ, ಶ್ವೇತಾ ಕಾಸೆಟ್ಟಿ, ಸಂಗೀತ ಫಣೀಶ್, ದೀಪಕ್ ಕುಮಾರ್, ನಿವೇದಿತಾ ಶರ್ಮಾ, ಮಾನಸಾ ಜೋಶಿ.ಅತಿಥಿಗಳು: ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ಗಮಕ ವಿದ್ವಾಂಸ ಎಂ.ಎ. ಜಯರಾಮ ರಾವ್, ಗುರು ಉಷಾ ದಾತಾರ್, ಉಮೇಶ್ ಬಾಬು

ಸ್ಥಳ: ಸೇವಾಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಜೆ 7.ಸುಂದರ ವಿಶ್ವಂ

ದೃಷ್ಟಿ ಕಲಾ ಕೇಂದ್ರ: ಶನಿವಾರ ಸಂಸ್ಥೆಯ 10ನೇ ವಾರ್ಷಿಕೋತ್ಸವದ ಅಂಗವಾಗಿ ನೃತ್ಯಾರ್ಪಣ. ಕಲಾವಿದೆ ಅನುರಾಧಾ ವಿಕ್ರಾಂತ ಅವರ ಶಿಷ್ಯರಿಂದ `ಸುಂದರ ವಿಶ್ವ~ ನೃತ್ಯರೂಪಕ.

ಈ ನೃತ್ಯರೂಪಕದಲ್ಲಿ ಜಗತ್ತಿನ ಎಲ್ಲ ಜೀವಜಂತುಗಳು ಒಂದಕ್ಕೊಂದು ಹೇಗೆ ಬೆಸೆದುಕೊಂಡಿವೆ, ನಮ್ಮ ಭೂಮಿ ಎಷ್ಟು ಅಮೂಲ್ಯ ಎಂದು ತೋರಿಸಲಾಗಿದೆ. ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂಬ ಸಂದೇಶವನ್ನೂ ನೀಡಲಾಗಿದೆ. ದೃಷ್ಟಿ ಕಲಾಕೇಂದ್ರದ 100 ವಿದ್ಯಾರ್ಥಿಗಳು ನೃತ್ಯರೂಪಕದಲ್ಲಿ ಪಾಲ್ಗೊಂಡಿದ್ದಾರೆ.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಸಂಜೆ 6.30.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.