ಸೋಮವಾರ, ಏಪ್ರಿಲ್ 19, 2021
25 °C

ನೆಮ್ಮದಿ ಸಿಬ್ಬಂದಿ ಅಮಾನತು: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಹಗಲು ವೇಳೆ ಕೆಲಸ ಮಾಡದೆ ಹಣದಾಸೆಗೆ ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ನೆಮ್ಮದಿ ಕೇಂದ್ರದ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಡಿವೈಎಫ್‌ಐ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರರನ್ನು ಆಗ್ರಹಿಸಿದ್ದಾರೆ.ಈ ಕುರಿತು ಮನವಿ ಅರ್ಪಿಸಿದ ಅವರು ದಿನಂಪ್ರತಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳಿಗಾಗಿ ಸಾಲುಗಟ್ಟಿನಿಂತರು ಪ್ರಮಾಣ ಪತ್ರ ನೀಡದವರು ಮಂಗಳವಾರ ರಾತ್ರಿ 11ಕ್ಕೆ ಹೆಚ್ಚಿಗೆ ಹಣ ಪಡೆದು ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದು ನಮ್ಮ ಕಾರ್ಯಕರ್ತರನ್ನು ತಡೆದು ಅವಾಚ್ಯವಾಗಿ ನಿಂದಿಸಿದ್ದಾರೆ.ಅಲ್ಲದೇ ಅದೇ ವೇಳೆ ರಾತ್ರಿ ಪಹರೆಗೆ ಆಗಮಿಸಿದ ಪೊಲೀಸರು ಸಹ ನೆಮ್ಮದಿ ಕೇಂದ್ರದ ಕೆಲಸಗಾರರಿಗೆ ಸಹಕಾರ ಮಾಡುವಂತೆ ಮಾತನಾಡಿ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕಿರುವ ಇವರ ಮೇಲೆ ಕ್ರಮ ಕೈಗೊಂಡು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ರಮೇಶ, ಭಾಸ್ಕರ್ ರೆಡ್ಡಿ, ಯಲ್ಲಾಲಿಂಗ. ಹುಳ್ಳಿ ಪ್ರಕಾಶ, ಬಿ.ಮಹೇಶ್, ಕುಲ್ಲಾಯಪ್ಪ, ಸಂತೋಷ ತಿರುಕಪ್ಪ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.